ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ನನ್ನ ಪುನರ್ಜನ್ಮ: ಚೇತರಿಕೆ ನಂತರ 'ಅಮ್ಮ' ಮೊದಲ ಹೇಳಿಕೆ

|
Google Oneindia Kannada News

ಚೆನ್ನೈ, ನವೆಂಬರ್ 14: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಹೇಳಿಕೆಯೊಂದು ಬಿಡುಗಡೆಯಾಗಿದೆ. 'ಜನರು ಹಾಗೂ ಪಕ್ಷದ ಕಾರ್ಯಕರ್ತರ ಪ್ರಾರ್ಥನೆಯಿಂದಾಗಿ ನನಗೆ ಪುನರ್ಜನ್ಮ ಸಿಕ್ಕಿದೆ. ಪೂರ್ಣ ಗುಣಮುಖಳಾಗಿ ಮತ್ತೆ ಜನರಿಗಾಗಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.

ಸೆಪ್ಟೆಂಬರ್ ನಲ್ಲಿ ಅತಿಸಾರ ಹಾಗೂ ಜ್ವರದ ಕಾರಣಕ್ಕೆ ಅಪೋಲೋ ಆಸ್ಪತ್ರೆ ಸೇರಿದ್ದ ಜಯಲಲಿತಾ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು, ಕೃತಕ ಉಸಿರಾಟದ ವ್ಯವಸ್ಥೆ ಮಾಡಿದ್ದರಿಂದ ಎಲ್ಲೆಡೆ ನಾನಾ ಬಗೆಯ ವದಂತಿಗಳು ಹಬ್ಬಿದ್ದವು. ಜಯಲಲಿತಾ ಅವರು ಹೇಳಿಕೆಯಲ್ಲಿ, ಬರುವ ಉಪ ಚುನಾವಣೆಯಲ್ಲಿ ಎಐಎಡಿಎಂಕೆಯನ್ನು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.[ಆಸ್ಪತ್ರೆಯಿಂದಲೇ ಜಯಲಲಿತಾ ಆಡಳಿತ ನಡೆಸುತ್ತಿದ್ದಾರೆ: ಪಕ್ಷ]

Jayalalithaa

ನಾನು ಸದಾ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ನೀವು ಪ್ರತಿಯೊಬ್ಬರು ಜನರಿಗಾಗಿ ಕೆಲಸ ಮಾಡಬೇಕು ಎಂದಿದ್ದಾರೆ. ತಮಿಳುನಾಡಿನ ಎರಡು ಹಾಗೂ ಪುದುಚೆರಿಯ ಒಂದು ಸ್ಥಾನಕ್ಕೆ ನಡೆಯಲಿರುವ ವಿಧಾನಸಭೆ ಉಪ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಬೆಂಬಲಿಸಿ. ನಾನೇ ಅಲ್ಲಿಗೆ ಬರುವುದಕ್ಕೆ ಅಗದಿರಬಹುದು ಮತ್ತು ಪ್ರಚಾರ ಸಾಧ್ಯವಿಲ್ಲದಿರಬಹುದು. ಅದರೆ ನನ್ನ ಹೃದಯ ಅಲ್ಲೇ ಇದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.[ಒಂದು ಹಂತಕ್ಕೆ ಬಂದ ಜಯಾ ಆರೋಗ್ಯ, ತಾಯಿ ಚಾಮುಂಡೇಶ್ವರಿ ಕೃಪೆ!]

ಸರಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ. ಎಐಎಡಿಎಂಕೆ ದೊಡ್ಡ ಅಂತರದಿಂದ ಗೆಲುವು ಸಾಧಿಸುವುದಕ್ಕೆ ಪಕ್ಷದ ಕಾರ್ಯಕರ್ತರ ಶ್ರಮಿಸಿ ಎಂದು ಜಯಲಲಿತಾ ಹೇಳಿಕೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಅಪೋಲೋ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ ರೆಡ್ಡಿ, ಮುಖ್ಯಮಂತ್ರಿ ಆರೋಗ್ಯವಾಗಿದ್ದಾರೆ. ಅವರು ಯಾವಾಗ ಆಸ್ಪತ್ರೆಯಿಂದ ಮನೆಗೆ ಹೋಗಲು ಬಯಸ್ತಾರೋ ಆಗ ತೆರಳಬಹುದು ಎಂದಿದ್ದರು.

English summary
In a statement released by the Tamil nadu chief minister J.Jayalalithaa said, 'I have taken a rebirth with the prayers of people and party cadre,' and added that she is waiting to completely recover and resume work for the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X