ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಹೃದಯ ಲಬ್ ಡಬ್ ಎನ್ನಲು ಕೃತಕ ಸಾಧನ ಬಳಕೆ

ಕಿಡ್ನಿ ಸಮಸ್ಯೆಯ ಜತೆಗೆ ಜಯಾ ಅವರ ಹೃದಯವನ್ನು ಕೃತಕ ಹೃದಯ ಸಹಾಯಕ ಸಾಧನ ಬಳಸಿ ಸುಸ್ಥಿತಿಯಲ್ಲಿರಿಸಲಾಗಿದೆ ಎಂಬ ಮಾಹಿತಿ ಬಂದಿದೆ.

By Mahesh
|
Google Oneindia Kannada News

ಚೆನ್ನೈ, ಡಿಸೆಂಬರ್ : ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಯಾವ ಕಾಯಿಲೆ ಎಂದು ಜನ ಸಾಮಾನ್ಯರಿಗೆ ಸರಿಯಾಗಿ ತಿಳಿಯದಂತೆ ಎಐಎಡಿಎಂಕೆ ಗೌಪ್ಯತೆ ಕಾಪಾಡಿಕೊಂಡು ಬಂದಿರುವುದು ತಿಳಿದಿರಬಹುದು. ಕಿಡ್ನಿ ಸಮಸ್ಯೆಯ ಜತೆಗೆ ಜಯಾ ಅವರ ಹೃದಯವನ್ನು ಕೃತಕ ಹೃದಯ ಸಹಾಯಕ ಸಾಧನ ಬಳಸಿ ಸುಸ್ಥಿತಿಯಲ್ಲಿರಿಸಲಾಗಿದೆ ಎಂಬ ಮಾಹಿತಿ ಬಂದಿದೆ.

ಭಾನುವಾರ ಸಂಜೆ ಹೃದಯಾಘಾತ ಬಳಿಕ ಅಪೋಲೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಹಿಸಿ ಜಯಾ ಅವರ ಹೃದಯವನ್ನು ಕಾಯಲಾಗಿದೆ. ಇದಕ್ಕಾಗಿ ದೆಹಲಿಯ ಏಮ್ಸ್ ವೈದ್ಯರ ನೆರವು ಪಡೆಯಲಾಗಿದೆ. [LIVE: ಜಯಾಗೆ ಹೃದಯಾಘಾತ, ಬೆಂಗಳೂರಿನಲ್ಲೂ ಹೈ ಅಲರ್ಟ್]

ಜತೆಗೆ ಲಂಡನ್ನಿನ ಡಾ. ರಿಚರ್ಡ್ ಅವರು ನಿರಂತರವಾಗಿ ಅಪೋಲೊ ಆಸ್ಪತ್ರೆ ಮುಖ್ಯಸ್ಥ ಡಾ ಪ್ರತಾಪ್ ರೆಡ್ಡಿ ಅವರ ಸಂಪರ್ಕದಲ್ಲಿದ್ದಾರೆ.[ತಮಿಳರ 'ಅಮ್ಮ' ಜಯಲಲಿತಾರಿಗೆ ನಿಜಕ್ಕೂ ಏನು ಕಾಯಿಲೆ?]

Jayalalithaa put on heart assist device

ಕಾರ್ಡಿಯಾಲಾಜಿಸ್ಟ್, ಪಲ್ಮೊನೊಲಾಜಿಸ್ಟ್ ಗಳ ನೆರವಿನಿಂದ ಚಿಕಿತ್ಸೆ ನೀಡಲಾಗಿದೆ.ಜಯಲಲಿತಾ ಅವರಿಗೆ ಏನೇನು ಕಾಯಿಲೆ ಇದೆ ಎಂಬುದರ ಬಗ್ಗೆ ಊಹಾಪೋಹ ಸುದ್ದಿಗಳು ಹಬ್ಬುತ್ತಲೇ ಇರುತ್ತದೆ. ಇಲ್ಲಿ ತನಕ ಎಐಎಡಿಎಂಕೆ ಕೂಡಾ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಬಹುಶಃ ತಿಳಿಯುವುದೂ ಇಲ್ಲ.

English summary
Tamil Nadu Chief Minister who suffered a cardiac arrest today has been put on a heart assist device. The Appolo Hospital where she has been admitted says that she is on an extracorporeal membrane heart assist device
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X