ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ.23ಕ್ಕೆ ಪುರಚ್ಚಿ ತಲೈವಿ ಜಯಾ ಮರು ಪಟ್ಟಾಭಿಷೇಕ

By Mahesh
|
Google Oneindia Kannada News

ಚೆನ್ನೈ, ಮೇ.20: ಅಕ್ರಮ ಆಸ್ತಿಗಳಿಕೆ ಪ್ರಕರಣದಿಂದ ಖುಲಾಸೆಗೊಂಡಿರುವ ತಮಿಳುನಾಡಿನ ಪುರಚ್ಚಿ ತಲೈವಿ ಎಐಎಡಿಎಂಕೆ ಮುಖ್ಯಸ್ಥೆ ಸೆಲ್ವಿ ಜಯಲಲಿತಾ ಅವರ ಮರು ಪಟ್ಟಾಭಿಷೇಕಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಲಭ್ಯ ಮಾಹಿತಿ ಪ್ರಕಾರ ಮೇ.23ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ.

ಮೇ 22ರಂದು ಮುಖ್ಯಮಂತ್ರಿ ಓ ಪನ್ನೀರ್ ಸೇಲ್ವಂ ಅವರು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂದು ಎಐಎಡಿಎಂಕೆ ವಕ್ತಾರೆ ಸಿ.ಆರ್. ಸರಸ್ವತಿ ಅವರು ಹೇಳಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

Jayalalithaa likely to take oath as Chief Minister on May 23: Reports

ಮೇ. 22ರಂದು ಬೆಳಗ್ಗೆ 7 ಗಂಟೆಗೆ ಎಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುತ್ತದೆ. ಜಯಲಲಿತಾ ಅವರನ್ನು ಶಾಸಕಾಂಗ ಪಕ್ಷದ ಮುಖಂಡರಾಗಿ ಆಯ್ಕೆ ಮಾಡಲಾಗುತ್ತದೆ. ಅಂದೇ ರಾಜ್ಯಪಾಲ ಕೆ.ರೋಶಯ್ಯ ಅವರನ್ನು ಭೇಟಿ ಮಾಡಿ ಸಿಎಂ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಅವರು ರಾಜಿನಾಮೆ ನೀಡಲಿದ್ದಾರೆ ಎಂಬ ಸುದ್ದಿಯಿದೆ. [ಜಯಲಲಿತಾಗೆ ಜಾಮೀನು ಸಿಕ್ಕಿದ್ದೇಕೆ? ಆದೇಶ ಪ್ರತಿ ಓದಿ]

ಸುಮಾರು 19 ವರ್ಷಗಳ ಕಾನೂನು ಸಮರದ ಬಳಿಕ ಅಕ್ರಮ ಆಸ್ತಿ ಪ್ರಕರಣದಲ್ಲಿ 67 ವರ್ಷ ವಯಸ್ಸಿನ ಜಯಲಲಿತಾ ಮೇ.11, 2015ರಂದು ಶುಭ ಸುದ್ದಿ ಸಿಕ್ಕಿತ್ತು. [ಅನಿಶ್ಚಿತತೆಯಲ್ಲಿ ಜಯಾ ಪ್ರಮಾಣವಚನ?]

ಆಕ್ರಮ ಆಸ್ತಿ ಪ್ರಕರಣದಲ್ಲಿ ನಿರ್ದೋಷಿ ಎಂದು ಹೈಕೋರ್ಟ್ ಜಡ್ಜ್ ಸಿ.ಆರ್ ಕುಮಾರಸ್ವಾಮಿ ಅವರು ಎರಡು ಸಾಲಿನ ಆದೇಶ ನೀಡುತ್ತಿದ್ದಂತೆ ತಮಿಳುನಾಡಿನಲ್ಲಿ ಸಂಭ್ರಮ ಮನೆ ಮಾಡಿತ್ತು. ಇನ್ನು 10 ನಿಮಿಷದಲ್ಲೇ ಜಯಾ ಅಮ್ಮ ಸಿಎಂ ಆಗುತ್ತಾರೆ ಎಂದು ಜಯಾ ಪರ ವಕೀಲರು ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿದ್ದರು. ಅದರೆ, ಜ್ಯೋತಿಷಿಗಳ ಸಲಹೆ ಮೇರೆಗೆ ದಿನಶುದ್ಧಿ ಲೆಕ್ಕಾಚಾರ ಹಾಕಿ ಮೇ.23ರ ದಿನಾಂಕ ಫಿಕ್ಸ್ ಮಾಡಿದ್ದಾರಂತೆ. ಈ ಸುದ್ದಿಯನ್ನು ಕೇಳಿಸಿಕೊಳ್ಳಿ


(ಏಜೆನ್ಸೀಸ್)

English summary
Speculations are rife that AIADMK general secretary J Jayalalithaa will soon make a comeback as the Tamil Nadu Chief Minister and may take oath on May 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X