ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯಿ ಹಾಲಿನ ಬ್ಯಾಂಕುಗಳಿಗೆ ಚಾಲನೆ ನೀಡಿದ ಸಿಎಂ ಜಯಾ

By Mahesh
|
Google Oneindia Kannada News

ಚೆನ್ನೈ, ಆಗಸ್ಟ್ 04: ತಮಿಳುನಾಡಿನ ಸಿಎಂ ಜಯಲಲಿತಾ ಅವರು ತಮ್ಮ ಜನಪ್ರಿಯ ಜನ ಉಪಯೋಗಿ ಯೋಜನೆಗಳನ್ನು ಮುಂದುವರೆಸಿದ್ದಾರೆ. ತಾಯಂದಿರಿಗೆ ಹಾಲೂಡಿಸಲು ಅನುಕೂಲ ವ್ಯವಸ್ಥೆ, ತಾಯಿ ಹಾಲಿನ ಬ್ಯಾಂಕ್ ಗಳಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ್ದಾರೆ.

ಪ್ರಯಾಣದ ಸಂದರ್ಭದಲ್ಲಿ ತಾಯಂದಿರು ತಮ್ಮ ಶಿಶುವಿಗೆ ಮೊಲೆಯುಣಿಸಲು ಕಷ್ಟವಾಗುತ್ತಿದೆ. ಈ ಕಾರಣಕ್ಕಾಗಿ ರಾಜ್ಯದೆಲ್ಲೆಡೆ ಬಸ್ ನಿಲ್ದಾಣಗಳಲ್ಲಿ ಮಹಿಳೆಯರಿಗೆ ತಮ್ಮ ನವಜಾತ ಶಿಶುಗಳಿಗೆ ಹಾಲೂಡಿಸಲು ಅನುಕೂಲವಾಗುವಂತೆ, 352 ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯನ್ನು ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಸೋಮವಾರ ನೆರವೇರಿಸಿದ್ದಾರೆ.

Jayalalithaa launches 352 lactating mothers’ rooms, milk banks in TN

ತಾಯಿ ಹಾಲಿನ ಬ್ಯಾಂಕ್‌: ಆ.1 ರಿಂದ 7 ವಿಶ್ವ ಸ್ತನ್ಯಪಾನ ಸಪ್ತಾಹವಾಗಿದ್ದು, ಇದೇ ಸಂದರ್ಭದಲ್ಲಿ, ತಿರುಚಿರಾಪಳ್ಳಿ ಹಾಗೂ ಮಧುರೈ ಸಹಿತ 7 ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಿ ಹಾಲಿನ ಬ್ಯಾಂಕ್‌ಗಳನ್ನು ಉದ್ಘಾಟಿಸಿದ್ದಾರೆ. ಹಾಲೂಡಿಸುವ ಮಹಿಳೆಯರಿಗಾಗಿ ಕೊಠಡಿಗಳಲ್ಲಿ ಸಣ್ಣ ಮೇಜು ಹಾಗೂ ಬೆಂಚಿನ ವ್ಯವಸ್ಥೆ ಮಾಡುವಂತೆ ಜಯಲಲಿತಾ ಸಲಹೆ ನೀಡಿದ್ದಾರೆ.

ತಿರುಚಿರಾಪಳ್ಳಿ, ಮಧುರೆ, ಕೊಯಂಬತ್ತೂರು, ಥೇನಿ, ಸೇಲಂ, ತಂಜಾವೂರು ಹಾಗೂ ಎಗ್ಮೋರ್‌ನ 16 ವರ್ಷ ಹಳೆಯ ಪ್ರಸವಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರ ಸರಕಾರಿ ಸಂಸ್ಥೆ ಹಾಗೂ ಆಸ್ಪತ್ರೆ ಹೀಗೆ 7 ಸರಕಾರಿ ಆಸ್ಪತ್ರೆಗಳಲ್ಲಿ ತಾಯಿ ಹಾಲಿನ ಬ್ಯಾಂಕ್‌ಗಳನ್ನು ಉದ್ಘಾಟಿಸಲಾಗಿದೆ.

Jayalalithaa launches 352 lactating mothers’ rooms, milk banks in TN

ತಾಯಂದಿರು ದಾನ ಮಾಡಿದ ಹಾಲಿನ ಸಂರಕ್ಷಣೆಗಾಗಿ ಪ್ರತಿ ಆಸ್ಪತ್ರೆಗೆ ರೂ. 10 ಲಕ್ಷ ಬೆಲೆಯ ಉಪಕರಣಗಳನ್ನು ಒದಗಿಸಲಾಗಿದೆ. ಅಂತಹ ಹಾಲನ್ನು 3 ತಿಂಗಳ ಕಾಲ ಸಂಗ್ರಹಿಸಿಡಬಹುದು ಹಾಗೂ ತಮ್ಮ ತಾಯಂದಿರಿಂದ ಸಾಕಷ್ಟು ಮೊಲೆ ಹಾಲು ದೊರೆಯದ ಮಕ್ಕಳಿಗೆ ಅದನ್ನು ನೀಡಲಾಗುವುದು ಎಂದು ಸರ್ಕಾರದ ಪ್ರಕಟಣೆ ಹೇಳುತ್ತಿದೆ.(ಪಿಟಿಐ)

English summary
With an aim to help lactating mothers who are travelling, Tamil Nadu Chief Minister Jayalalithaa on Monday inaugurated, through video conferencing, 352 rooms in bus terminals across the state where women can feed their newborns
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X