ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಸಾವಿನಿಂದ ಆಘಾತಕ್ಕೊಳಗಾಗಿ ಸತ್ತವರು 77

ಈ ಸಂಖ್ಯೆಗೆ ಪಕ್ಷ ಹೇಗೆ ಬಂದಿತು? ಸತ್ತವರೆಲ್ಲ ಆಘಾತದಿಂದಲೇ ಸತ್ತರಾ? ಅಥವಾ ಮತ್ತಾವುದಾದರೂ ಕಾರಣದಿಂದ ಸತ್ತರಾ? ಆಘಾತ ತಾಳಲಾಗರದೆ ಆತ್ಮಹತ್ಯೆ ಮಾಡಿಕೊಂಡರಾ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಈ ಪಟ್ಟಿಯಲ್ಲಿ ಉತ್ತರ ಸಿಗುವುದಿಲ್ಲ.

By Prasad
|
Google Oneindia Kannada News

ಚೆನ್ನೈ, ಡಿಸೆಂಬರ್ 08 : ಜಯಲಲಿತಾ ಅವರ ಅವಸಾನದ ನಂತರ ತೀವ್ರ ಆಘಾತಕ್ಕೊಳಗಾಗಿ ಒಟ್ಟು 77 ಅಭಿಮಾನಿಗಳು ಸತ್ತಿದ್ದಾರೆ ಎಂದು ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷ ಘೋಷಿಸಿದ್ದು, ಸತ್ತವರ ಪಟ್ಟಿಯನ್ನು ಪ್ರಕಟಿಸಿದೆ.

ಮೂರು ಪುಟಗಳಷ್ಟು ಇರುವ ಪಟ್ಟಿಯಲ್ಲಿ ಸತ್ತವರ ಹೆಸರು, ಅವರಿರುವ ಜಿಲ್ಲೆ ಮತ್ತಿತರ ವಿವರಗಳನ್ನು ಎಐಎಡಿಎಂಕೆ ನೀಡಿದೆ. ಇವರೆಲ್ಲ 74 ದಿನಗಳ ಕಾಲ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಜಯಲಲಿತಾ ಅಸುನೀಗಿದ್ದರಿಂದ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ['ಚಿನ್ನ'ದ ಗೊಂಬೆ ಜಯಲಲಿತಾ ಬಳಿಯಿದ್ದ ಬಂಗಾರವೆಷ್ಟು?]

Jayalalithaa death : 77 people died for Amma, claims AIADMK

ಆದರೆ, ಈ ಸಂಖ್ಯೆಗೆ ಪಕ್ಷ ಹೇಗೆ ಬಂದಿತು? ಸತ್ತವರೆಲ್ಲ ಆಘಾತದಿಂದಲೇ ಸತ್ತರಾ? ಅಥವಾ ಮತ್ತಾವುದಾದರೂ ಕಾರಣದಿಂದ ಸತ್ತರಾ? ಆಘಾತ ತಾಳಲಾಗರದೆ ಆತ್ಮಹತ್ಯೆ ಮಾಡಿಕೊಂಡರಾ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಈ ಪಟ್ಟಿಯಲ್ಲಿ ಉತ್ತರ ಸಿಗುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪಕ್ಷ, ಎಲ್ಲ 77 ಮಂದಿಯ ಕುಟುಂಬಕ್ಕೆ 3 ಲಕ್ಷ ರು. ಪರಿಹಾರ ಘೋಷಿಸಿದೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರಿಗೆ ಕರ್ನಾಟಕದ ವಿಶೇಷ ವಿಚಾರಣಾ ನ್ಯಾಯಾಲಯ 4 ವರ್ಷ ಕಠಿಣ ಶಿಕ್ಷೆ ಪ್ರಕಟಿಸಿದ್ದು ಕೇಳಿ 60 ಅಭಿಮಾನಿಗಳು ಸಾವನ್ನಪ್ಪಿದ್ದರು ಎಂದು ಎಐಎಡಿಎಂಕೆ ಹೇಳಿತ್ತು. [ಮೈಸೂರಿನಲ್ಲಿರುವ ಜಯಲಲಿತಾ ಮನೆ ಈಗ ಏನಾಗಿದೆ?]

English summary
The AIADMK on Wednesday announced that 77 people had died following Jayalalithaa's illness and eventual death. The party released a compiled list of names of those who died and the districts they belonged to.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X