ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜಲ್ಲಿಕಟ್ಟು ಹಿಂಸಾಚಾರಕ್ಕೆ ಪಾಕ್ ನ ಐಎಸ್ ಐ ಫೈನಾನ್ಸ್'

By ಅನುಷಾ ರವಿ
|
Google Oneindia Kannada News

ಚೆನ್ನೈ, ಜನವರಿ 24: ಜಲ್ಲಿಕಟ್ಟು ವಿಚಾರವಾಗಿ ಸೋಮವಾರ ಚೆನ್ನೈನಲ್ಲಿ ಬುಗಿಲೆದ್ದ ಹಿಂಸಾಚಾರದಲ್ಲಿ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ ಐನ ಕೈವಾಡವಿದೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. ಮಾಧ್ಯಮ ಸಂಸ್ಥೆ ಜತೆಗೆ ಮಾತನಾಡಿದ ಅವರು, ಜಲ್ಲಿಕಟ್ಟು ಪರವಾದ ಚಳವಳಿಯಲ್ಲಿ 'ಐಎಸ್ ಐ ಹಣಕಾಸು ನೆರವು ನೀಡಿದ ಹಿಂಸಾಚಾರ' ನಡೆದಿದೆ ಎಂದಿದ್ದಾರೆ.

"ನಿಜವಾದ ಚಳವಳಿಗಾರರು ಮರೀನಾ ಬೀಚ್ ನಿಂದ ಹೊರಟುಹೋಗಿದ್ದಾರೆ. ಈಗ ಉಳಿದಿರುವವರು ಎಲ್ ಟಿಟಿಇ ಪ್ರಭಾಕರನ್ ಮತ್ತು ಹಫೀಜ್ ಸಯೀದ್ ಪೋಸ್ಟರ್ ಹಿಡಿದವರು. ಈಗ ಇದು ಐಎಸ್ ಐ ಪ್ರಾಯೋಜಿತ ಹೋರಾಟ" ಎಂದು ಅವರು ಆರೋಪಿಸಿದ್ದಾರೆ.[ಸುಗ್ರೀವಾಜ್ಞೆ ಹೊರಡಿಸುವವರೆಗೆ ಜಲ್ಲಿಕಟ್ಟು ಪ್ರತಿಭಟನೆ ನಿಲ್ಲಲ್ಲ!]

Jallikattu violence: ISI-funded claims Swamy

ಇದಕ್ಕೂ ಮುನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಹಿಂಸಾಚಾರದಲ್ಲಿ ಕಾಣಿಸಿಕೊಂಡವರನ್ನು ಪೊರ್ಕಿಗಳು, ನಕ್ಸಲರು, ಜೆಹಾದಿಗಳು ಎಂದು ಸುಬ್ರಮಣಿಯನ್ ಸ್ವಾಮಿ ಕರೆದಿದ್ದಾರೆ. ಪ್ರತಿಭಟನಾನಿರತರ ವಿರುದ್ಧ ಪೊಲೀಸರು ಕೈಗೊಂಡ ಕ್ರಮಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಲ್ಲಿಕಟ್ಟು ಹೋರಾಟವನ್ನು ರಾಷ್ಟ್ರವಿರೋಧಿ ಹಾಗೂ ಸಮಾಜ ಘಾತುಕ ವ್ಯಕ್ತಿಗಳು ಹೈಜಾಕ್ ಮಾಡಿದ್ದಾರೆ. ಸೋಮವಾರದ ಹಿಂಸಾಚಾರ ಅದರ ಫಲಿತಾಂಶ ಎಂದಿದ್ದಾರೆ.

ಇದೇ ವೇಳೆ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ತರುವಂತೆ ಒತ್ತಾಯಿಸಿದ ಅವರು, ರಾಜ್ಯದಲ್ಲಿ ಪರಿಸ್ಥಿತಿ ಹತೋಟಿಗೆ ತರುವುದಕ್ಕೆ ಸಿಆರ್ ಪಿಎಫ್ ನಿಯೋಜನೆ ಮಾಡಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. "ಹೌದು ಕೆಲ ಜನರು ಸಮಾಜ ಹಾಗೂ ರಾಷ್ಟ್ರ ದ್ರೋಹಿ ಕೆಲಸಗಳನ್ನು ಮಾಡುತ್ತಿದ್ದರು. ಹಲವು ಸಲ ಎಚ್ಚರಿಕೆ ನೀಡಿದೆವು.[ಜಲ್ಲಿಕಟ್ಟು ಕ್ರೀಡೆಗೆ ಪಟ್ಟು ಬಿಡದ ವಿದ್ಯಾರ್ಥಿಗಳು, ಗುರುವಾರ ಕಾಲೇಜು ರಜಾ]

Jallikattu violence: ISI-funded claims Swamy

"ವಿದ್ಯಾರ್ಥಿ ಸ್ವಯಂಸೇವಕರ ಸಹಾಯದಿಂದ ಅಂಥವರನ್ನು ಅಲ್ಲಿಂದ ತೆರವು ಮಾಡಿಸಿದೆವು. ಕೆಲವರು ಅಲ್ಲಿ ಸೇರಿದ್ದ ಜನರ ಉದ್ದೇಶದ ಹಾದಿಯನ್ನು ತಪ್ಪಿಸುತ್ತಿದ್ದರು. ಈ ಬಗ್ಗೆ ಸಮಗ್ರ ವಿಚಾರಣೆ ಮಾಡುತ್ತೇವೆ" ಎಂದು ಚೆನ್ನೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೊಲೀಸರೇ ಹಿಂಸಾಚಾರದಲ್ಲಿ ತೊಡಗಿದಂಥ ವಿಡಿಯೋ, ಫೋಟೋಗಳು ಹರಿದಾಡುತ್ತಿವೆ. ಈ ಬಗ್ಗೆ ಮಾತನಾಡಿರುವ ಚೆನ್ನೈ ಪೊಲೀಸ್ ಕಮಿಷನರ್, ಯಾವುದೇ ಪೊಲೀಸ್ ಸಿಬ್ಬಂದಿ ಹಿಂಸಾಚಾರದಲ್ಲಿ ತೊಡಗಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ವಿಡಿಯೋದಲ್ಲಿ ಇರುವವರು ಪೊಲೀಸರೇ ಎಂಬುದರಲ್ಲಿ ಅನುಮಾನವಿಲ್ಲ. ಅವರ ಪತ್ತೆ ಹಚ್ಚಿ, ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ.

Jallikattu violence: ISI-funded claims Swamy

ಜಲ್ಲಿಕಟ್ಟು ಹಿಂಸಾಚಾರದ ಬಗ್ಗೆ ಮಾಧ್ಯಮದವರ ಫೋಟೋ, ವಿಡಿಯೋಗಳಲ್ಲದೆ ಪೊಲೀಸರು ವಿಡಿಯೋ ಮಾಡಿದ್ದಾರೆ. ವಿಶೇಷ ತಂಡವೊಂದು ಅದರ ಪರಿಶೀಲನೆಯಲ್ಲಿ ತೊಡಗಿದೆ. ಸಾಮಾಜಿಕ ಜಾಲತಾಣಗಳಿಂದಲೂ ವಿಡಿಯೋಗಳನ್ನು ಕಲೆ ಹಾಕಲಾಗುತ್ತಿದೆ. ಅದರ ಜತೆಗೆ ಇತರ ಮೂಲದಿಂದಲೂ ಸಾಕ್ಷ್ಯ ಸಂಗ್ರಹಿಸುತ್ತಿದ್ದು, ಇನ್ನು ವಿಚಾರಣೆ ಮಾತ್ರ ಬಾಕಿಯಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.

English summary
On a day Chennai came to a standstill owing to widespread violence on its streets, BJP MP Subramanian Swamy claimed that the ISI had a role to play in Monday's violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X