ಅಪೋಲೋದಿಂದ ಪೋಯಸ್ ಗಾರ್ಡನಿಗೆ ಜಯಾ ಶಿಫ್ಟ್

By:
Subscribe to Oneindia Kannada

ಚೆನ್ನೈ, ಡಿಸೆಂಬರ್ 06: ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಸೋಮವಾರ ತಡರಾತ್ರಿ ಅಪೋಲೋ ಆಸ್ಪತ್ರೆಯಿಂದ ಅವರ ಮನೆಗೆ ಸ್ಥಳಾಂತರಿಸುವ ಬಗ್ಗೆ ಮಾಹಿತಿ ಹೊರಬಂದಿದೆ.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಹೃದಯಾಘಾತಕ್ಕೊಳಗಾಗಿ ಜೀವರಕ್ಷಕ ಸಾಧನಗಳ ನೆರವಿನಲ್ಲಿರುವ ಜಯಲಲಿತಾ ಅವರಿಗೆ ಈಗ ನೀಡಿರುವ ಚಿಕಿತ್ಸಾ ವಿಧಾನವನ್ನು ಮುಂದುವರೆಸುತ್ತಲೇ ಅವರನ್ನು ಅವರ ಮನೆಗೆ ಕರೆದೊಯ್ಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಆಪ್ತರ ವಾಹನಗಳು, ಜಯಾ ಟಿವಿಯ ವಾಹನ ಆಸ್ಪತ್ರೆ ಬಳಿ ಇದೆ.

J Jayalalithaa will be moved to her Poes Garden from Apollo Hospital

ಆಸ್ಪತ್ರೆ ಬಳಿ ಇದ್ದ ಅಭಿಮಾನಿಗಳನ್ನು ಅಲ್ಲಿಂದ ಕಳಿಸಲಾಗಿದ್ದು, ಪೊಲೀಸ್ ಪಹರೆ ಹಾಕಲಾಗಿದೆ. ಸದ್ಯ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿರುವ ಓ ಪನ್ನೀರ್ ಸೆಲ್ವಂ ಅವರು ಶಾಸಕಾಂಗ ಸಭೆ ನಡೆಸಿದ್ದು, ನಂತರ ಅಪೋಲೋ ಆಸ್ಪತ್ರೆಗೆ ತೆರಳಲಿದ್ದಾರೆ.

ಈ ನಡುವೆ ಸ್ಪೀಕರ್ ಧನ್ ಪಾಲ್ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ವಿದ್ಯಾಸಾಗರ್ ಜತೆ ಮಾತುಕತೆ ನಡೆಸಲಿದ್ದು, ಪನ್ನೀರ್ ಸೆಲ್ವಂ ಅವರನ್ನು ಮುಂದಿನ ಸಿಎಂ ಆಗಿ ನಿಯುಕ್ತಿಗೊಳಿಸುವ ಬಗ್ಗೆ ಪ್ರಕಟಣೆ ಹೊರಡಿಸಬಹುದು.

English summary
Chief Minister's Convoy is being readied at Apollo hospital. Sources indicate that J Jayalalithaa will be moved to her Poes Garden.
Please Wait while comments are loading...