ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ ಕಾನ್ಫರೆನ್ಸ್ ಮೂಲಕ 'ಮೆಟ್ರೋ ರೈಲು' ಬಿಟ್ಟ ಜಯಾ

By Mahesh
|
Google Oneindia Kannada News

ಚೆನ್ನೈ, ಜೂ.29: ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚೆನ್ನೈನ ಮೆಟ್ರೋ ರೈಲು ಮೊದಲ ಹಂತಕ್ಕೆ ಚಾಲನೆ ನೀಡಿದ್ದಾರೆ. ದಕ್ಷಿಣ ಚೆನ್ನೈನಿಂದ ಉತ್ತರ ಭಾಗಕ್ಕೆ ಸಂಪರ್ಕ ಒದಗಿಸುವ 10 ಕಿ.ಮೀ ದೂರವನ್ನು ಮೆಟ್ರೋ ರೈಲು 18 ನಿಮಿಷಗಳಲ್ಲಿ ಕ್ರಮಿಸಲಿದೆ.

ದಕ್ಷಿಣ ಚೆನ್ನೈನ ಅಳಂದೂರಿನಿಂದ ಉತ್ತರ ಭಾಗದಲ್ಲಿರುವ ಕೊಯಬೆದು ಪ್ರದೇಶ ತಲುಪಿದ ಚೆನ್ನೈ ಮೆಟ್ರೋ ನಾಲ್ಕು ಕೋಚುಗಳಲ್ಲಿ ಸುಮಾರು 1,276 ಪ್ರಯಾಣಿಕರನ್ನು ಹೊಂದಿತ್ತು. ಸುಮಾರು 16,500 ಕೋಟಿ ವೆಚ್ಚದ ಈ ಯೋಜನೆಗೆ ಡಿಎಂಕೆ ಸರ್ಕಾರದ ಅವಧಿಯಲ್ಲಿ ಒಪ್ಪಿಗೆ ಸಿಕ್ಕಿತ್ತು.

* ಚೆನ್ನೈನ ದಕ್ಷಿಣದಿಂದ ಉತ್ತರಭಾಗಕ್ಕೆ ಸಂಪರ್ಕ ಒದಗಿಸಲಿದೆ.
* ನಾಲ್ಕು ಕೋಚ್ ಗಳಲ್ಲಿ 1276 ಮಂದಿ ಪ್ರಯಾಣಿಕರನ್ನು ಒಮ್ಮೆಗೆ ಕರೆದೊಯ್ಯಲಿದೆ.
* 10 ಕಿ.ಮೀ ವ್ಯಾಪ್ತಿ ಕ್ರಮಿಸಲು 18 ನಿಮಿಷ ಬೇಕಾಗುತ್ತದೆ.
* ಚೆನ್ನೈ ಮೆಟ್ರೋ ರೈಲಿನ ಮೊದಲ ಹಂತದ ಸಂಪೂರ್ಣ ದೂರ 45 ಕಿ.ಮೀ ಆಗಿದ್ದು, ಒಟ್ಟು ವೆಚ್ಚ 16,500 ಕೋಟಿ ರು ಆಗಿದೆ.
* 10 ಕಿ.ಮೀ ದೂರದಲ್ಲಿ 7 ಸ್ಟೇಷನ್ ಗಳಿವೆ.

ಮೊದಲ ಹಂತದ ಸಂಪೂರ್ಣ ದೂರ 45 ಕಿ.ಮೀ

ಮೊದಲ ಹಂತದ ಸಂಪೂರ್ಣ ದೂರ 45 ಕಿ.ಮೀ

* ಚೆನ್ನೈ ಮೆಟ್ರೋ ರೈಲಿನ ಮೊದಲ ಹಂತದ ಸಂಪೂರ್ಣ ದೂರ 45 ಕಿ.ಮೀ ಆಗಿದ್ದು, ಒಟ್ಟು ವೆಚ್ಚ 16,500 ಕೋಟಿ ರು ಆಗಿದೆ.
* 10 ಕಿ.ಮೀ ದೂರದಲ್ಲಿ 7 ಸ್ಟೇಷನ್ ಗಳಿವೆ.

* ಮೊದಲ ಪ್ರಯಾಣ ಅಲಂದೂರಿನಿಂದ 12.14ಕ್ಕೆ ಹೊರಟು ಕೊಯಂಬೆಡುಗೆ 12.35ಕ್ಕೆ ಸುರಕ್ಷಿತವಾಗಿ ತಲುಪಿದೆ.

ವಾಷರ್ ಮನ್ ಪೇಟ್ ನಿಂದ ಸೈದಾಪೇಟ್ ತನಕ

ವಾಷರ್ ಮನ್ ಪೇಟ್ ನಿಂದ ಸೈದಾಪೇಟ್ ತನಕ

ಕಾರಿಡರ್ 1 ರಲ್ಲಿ ವಾಷರ್ ಮನ್ ಪೇಟ್ ನಿಂದ ಸೈದಾಪೇಟ್ ತನಕ ಹಾಗೂ ಚೆನ್ನೈ ಸೆಂಟ್ರಲ್ ನಿಂದ ತಿರುಮಂಗಲಂ ತನಕ ಎರಡನೇ ಕಾರಿಡಾರ್ ನಲ್ಲಿ ರೈಲು ಓಡಲಿದೆ.

ಡಿಎಂಕೆ ಅವಧಿಯಲ್ಲಿ ಒಪ್ಪಿಗೆ ಪಡೆದಿದ್ದ ಮೆಟ್ರೋ ರೈಲು

ಡಿಎಂಕೆ ಅವಧಿಯಲ್ಲಿ ಒಪ್ಪಿಗೆ ಪಡೆದಿದ್ದ ಮೆಟ್ರೋ ರೈಲು

ಡಿಎಂಕೆ ಅವಧಿಯಲ್ಲಿ ಒಪ್ಪಿಗೆ ಪಡೆದಿದ್ದ ಮೆಟ್ರೋ ರೈಲು ಕಳೆದ ವರ್ಷ ಅಕ್ಟೋಬರ್ ನಲ್ಲೇ ಓಡಬೇಕಿತ್ತು. ಅದರೆ, ಜಯಲಲಿತಾ ಅವರ ರಾಜಕೀಯ ಬದುಕಿನ ಏರುಪೇರಿನಿಂದಾಗಿ ರೈಲು ಕೊನೆಗೂ ಓಡಲು ಆರಂಭಿಸಿದೆ.

ಮೊದಲ ಹಂತದಲ್ಲಿ 32 ನಿಲ್ದಾಣ ನಿರ್ಮಾಣ

ಮೊದಲ ಹಂತದಲ್ಲಿ 32 ನಿಲ್ದಾಣ ನಿರ್ಮಾಣ

ಮೊದಲ ಹಂತದಲ್ಲಿ 32 ನಿಲ್ದಾಣ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಕೊಯಂಬೇಡು, ಚೆನ್ನೈ ಬಸ್ ನಿಲ್ದಾಣ, ಅರಂಬಾಕ್ಕಂ, ವಡಪಳನಿ, ಅಶೋಕ್ ನಗರ್, ಎಕ್ಕಟ್ಟುಥಂಗಳ್, ಅಳಂದೂರು ಹಾಗೂ ಸಿಎಂಆರ್ ಎಲ್ ಡಿಪೋ ಗಳನ್ನು ಮೆಟ್ರೋ ಪ್ರಯಾಣದಲ್ಲಿ ಕಾಣಬಹುದು.

ಇತರೆ ಸಾರಿಗೆ ಸಂಪರ್ಕಕ್ಕೆ ಲಿಂಕ್

ಇತರೆ ಸಾರಿಗೆ ಸಂಪರ್ಕಕ್ಕೆ ಲಿಂಕ್

ಇತರೆ ಸಾರಿಗೆ ಸಂಪರ್ಕಕ್ಕೆ ಲಿಂಕ್ ನೀಡಲು ಯೋಜನೆ ಸಿದ್ಧವಾಗಿದೆ. ಚೆನ್ನೈ ವಿಮಾನ ನಿಲ್ದಾಣ, ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ, ಎಗ್ಮೋರ್ ಸ್ಟೇಷನ್, ಸಿಎಂಬಿಟಿ ಹಾಗೂ ಎಂಆರ್ ಟಿಎಸ್ ಗೆ ಮೆಟ್ರೋ ರೈಲು ಸಂಪರ್ಕ ಒದಗಿಸಲಿದೆ.


English summary
Tamil Nadu Chief Minister J Jayalalithaa today(Jun.29) launched the first phase of the Chennai Metro via videoconferencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X