ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ: ಆಭರಣ ಮಳಿಗೆಗಳ ಮೇಲೆ ಆದಾಯ ತೆರಿಗೆ ದಾಳಿ

ದೆಹಲಿ ಸೇರಿದಂತೆ ದೇಶದ ಹಲವೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬಳಿಕ, ಈಗ ಚೆನೈನ ವಿವಿಧೆಡೆ ಐಟಿ ರೈಡ್ ಮುಂದುವರೆದಿದೆ.

By Mahesh
|
Google Oneindia Kannada News

ಚೆನ್ನೈ, ನವೆಂಬರ್ 13 : ದೆಹಲಿ ಸೇರಿದಂತೆ ದೇಶದ ಹಲವೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬಳಿಕ, ಈಗ ಚೆನೈನ ವಿವಿಧೆಡೆ ಐಟಿ ರೈಡ್ ಮುಂದುವರೆದಿದೆ.

ದೊಡ್ಡ ಮೌಲ್ಯದ ನೋಟುಗಳ ನಿಷೇಧದಿಂದ ಉಂಟಾಗಿರುವ ಗೊಂದಲ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿರುವ ಹವಾಲ ದಂಧೆಕೋರದ ವಿರುದ್ಧ ಕಾರ್ಯಾಚರಣೆ ಮುಂಡುವರೆದಿದೆ.

Income Tax raid on jewellery shops in Chennai

ಚೆನ್ನೈನ ನೇತಾಜಿ ಸುಭಾಶ್ ಚಂದ್ರ ಬೋಸ್ ರಸ್ತೆಯ ಆಭರಣ ಮಳಿಗೆ, ಲೇವಾದೇವಿ ಅಂಗಡಿ, ಚಿಟ್ ಫಂಡ್ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದೆ. 500 ಹಾಗೂ 1000 ರು ಚಲಾವಣೆ ಬದಲಾವಣೆ ಮಾಡಿಕೊಳ್ಳಲು ಕಷ್ಟಪಡುವ ಸಾರ್ವಜನಿಕರಿಗೆ ಆಮಿಷವೊಡ್ಡಿ ಸುಲಿಗೆ ಮಾಡುತ್ತಿದ್ದ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ಮುಗಿ ಬಿದ್ದಿದ್ದಾರೆ.

ಶುಕ್ರವಾರ ಹಾಗೂ ಶನಿವಾರದಂದು 50ಕ್ಕೂ ಅಧಿಕ ಅಧಿಕಾರಿಗಳು 12ಕ್ಕೂ ಅಧಿಕ ಆಭರಣ ಮಳಿಗೆಗಳಲ್ಲಿ ದಾಳಿ ನಡೆಸಲಾಗಿದ್ದು, ಭಾನುವಾರವೂ ಐಟಿ ದಾಳಿ ಹಲವೆಡೆ ಮುಂದುವರೆಯುವ ಸಾಧ್ಯತೆಯಿದೆ.

English summary
Income Tax officials knocked on the doors of bullion traders and hawala operators on Netaji Subash Chandra Bose Road (NSC Bose Road), Chennai. IT department also wants CCTV footage from jewellery stores to monitor customer movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X