ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಲಿದ ಅಬ್ದುಲ್ ಕಲಾಂಗೆ ಟ್ವಿಟ್ಟರ್ ನಲ್ಲಿ ಅಶ್ರುತರ್ಪಣ

By Mahesh
|
Google Oneindia Kannada News

ಚೆನ್ನೈ, ಜುಲೈ 30: ಮಾಜಿ ರಾಷ್ಟ್ರಪತಿ, ಭಾರತದ ಹೆಮ್ಮೆಯ ಪುತ್ರ ಎಪಿಜೆ ಅಬ್ದುಲ್ ಕಲಾಂ ಅವರ ಅಂತ್ಯ ಸಂಸ್ಕಾರ ಮುಸ್ಲಿಂ ಧಾರ್ಮಿಕ ವಿಧಿವಿಧಾನಗಳಂತೆ ಗುರುವಾರ ಬೆಳಗ್ಗೆ ನೆರವೇರಿದೆ. ಅಗಲಿದ ಮಹಾನ್ ಚೇತನಕ್ಕೆ ದೇಶದ ಅನೇಕ ಕಡೆಗಳಿಂದ ಬಂದಿದ್ದ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ಇದರ ಜೊತೆಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಅಶ್ರುತರ್ಪಣ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರುಗಳಲ್ಲದೆ ಜನ ಸಾಮಾನ್ಯರು ಕಲಾಂ ಅವರ ಹುಟ್ಟೂರಾದ ತಮಿಳುನಾಡಿನ ರಾಮನಾಥಂ ಜಿಲ್ಲೆಯ ರಾಮೇಶ್ವರಂನ ಪೆಯಿಕರುಂಬು ಮೈದಾನಕ್ಕೆ ಆಗಮಿಸಿ ಅಂತಿಮ ನಮಸ್ಕಾರ ಸಲ್ಲಿಸಿದರು. [ಕಲಾಂಗೆ ಅಂತಿಮ ನಮನ ಸಲ್ಲಿಸಿದ ಗಣ್ಯರು]

ಅಬ್ದುಲ್ ಕಲಾಂ ಅವರ ಸೋದರ ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಕಲಾಂ ಅವರನ್ನು ಇಹಲೋಹದಿಂದ ಬೀಳ್ಕೊಡಲಾಯಿತು. ಭಾರತೀಯ ಸೇನೆಯ ಅಧಿಕಾರಿಗಳ ಗೌರವ ರಕ್ಷೆ, ಜೊತೆಗೆ ಅನೇಕ ಅಭಿಮಾನಿಗಳ ವಿದಾಯದ ನಮನ ಸಾಕ್ಷಿಯಾಯಿತು. ಇಡೀ ಕಾರ್ಯಕ್ರಮವನ್ನು ರಕ್ಷಣಾ ಇಲಾಖೆ ಟ್ವೀಟ್ ಮಾಡಿದ್ದು ವಿಶೇಷವಾಗಿತ್ತು.[ಚಿತ್ರಗಳು : ಅಬ್ದುಲ್ ಕಲಾಂಗೆ ಅಂತಿಮ ನಮನ]

ಪ್ರಧಾನಿ ನರೇಂದ್ರ ಮೋದಿ ಅವರಿಂದ ನಮನ

ಪ್ರಧಾನಿ ನರೇಂದ್ರ ಮೋದಿ ಅವರಿಂದ ನಮನ

ಡಾ. ಕಲಾಂ ಅವರಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ.

ಕಲಾಂ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಪಿಎಂ

ಕಲಾಂ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಪಿಎಂ ನರೇಂದ್ರ ಮೋದಿ.

ಮಣ್ಣಲ್ಲಿ ಮಣ್ಣಾದ ಕ್ಷಿಪಣಿ ಜನಕ ಕಲಾಂ

ಮಣ್ಣಲ್ಲಿ ಮಣ್ಣಾದ ಕ್ಷಿಪಣಿ ಜನಕ ಕಲಾಂ ಅವರಿಗೆ ಪ್ರಧಾನಿ ಅವರಿಂದ ನಮನ,

ಭಾರತೀಯ ಸೇನೆಗಳಿಂದ ಅಂತಿಮ ಗೌರವ

ಭಾರತೀಯ ವಾಯು, ಭೂ ಹಾಗೂ ಜಲ ಸೇನೆಗಳಿಂದ ಅಂತಿಮ ಗೌರವ ಸಲ್ಲಿಕೆ.

ಜನಸಾಮಾನ್ಯರ ರಾಷ್ಟ್ರಪತಿಗೆ ನಮನ

ಜನಸಾಮಾನ್ಯರ ರಾಷ್ಟ್ರಪತಿಗೆ ನಮನ ಸಲ್ಲಿಸಿದ ದೇಶದ ಜನತೆ.

ಕಲಾಂ ಅವರ ಸಮಾಧಿ ಸ್ಥಳ

ಕಲಾಂ ಅವರ ಸಮಾಧಿ ಸ್ಥಳ, ಪೇಯಿಕರಂಬು ಮೈದಾನ, ರಾಮೇಶ್ವರಂ, ತಮಿಳುನಾಡು.

ಸಕತ್ ಟ್ರೆಂಡಿಂಗ್ ಆಗುತ್ತಿರುವ ಚಿತ್ರ

ಕಲಾಂ ಅಜ್ಜನಿಗೆ ಮುತ್ತಿಡುತ್ತಿರುವ ಕರ್ನಾಟಕದ ಚಿಕ್ಕಮಗಳೂರಿನ ಮಗುವಿನ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಸಕತ್ ಟ್ರೆಂಡಿಂಗ್ ಆಗುತ್ತಿದೆ. ಚಿತ್ರಕೃಪೆ: ಪಿಟಿಐ

ಗೂಗಲ್ ನಿಂದಲೂ ನಮನ

ಅಬ್ದುಲ್ ಕಲಾಂಗೆ ಸರ್ಚ್ ಇಂಜಿನ್ ಗೂಗಲ್ ನಿಂದಲೂ ನಮನ.

English summary
Nation bids farewell to #PeoplesPresident #APJAbdulKalam .Former President APJ Abdul Kalam's mortal remains were taken to local mosque here ahead of the funeral of the people's president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X