ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಪ್ರಮಾಣವಚನಕ್ಕೆ ಕಳೆ ತಂದ ರಜನಿ, ಇಳಯರಾಜಾ

|
Google Oneindia Kannada News

ಚೆನ್ನೈ, ಮೇ 23 : ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಮದ್ರಾಸ್ ವಿವಿಯಲ್ಲಿ ನಡೆದ ಸಮಾರಂಭದಲ್ಲಿ ಜಯಲಲಿತಾ ಮತ್ತು 28 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಮೂರು ಸಾವಿರಕ್ಕೂ ಅಧಿಕ ಜನರು ಸಮಾರಂಭಕ್ಕೆ ಸಾಕ್ಷಿಯಾದರು.

ಹಸಿರು ಸೀರೆಯುಟ್ಟಿದ್ದ ಜೆ.ಜಯಲಲಿತಾ ಅವರು ಶನಿವಾರ ಬೆಳಗ್ಗೆ 11.08ಕ್ಕೆ ಮದ್ರಾಸ್ ವಿವಿ ಶತಮಾನೋತ್ಸವ ಭವನದಲ್ಲಿ ನಡೆದ ಸಮಾರಂಭದಲ್ಲಿ 5ನೇ ಬಾರಿಗೆ ಮಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಕೆ.ರೋಸಯ್ಯ ಅವರು ಜಯಲಲಿತಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. [ಪನ್ನೀರ್ ಸೆಲ್ವಂ ಎಂಬ ಆಸಾಮಿಯ ಸ್ವಾಮಿನಿಷ್ಠೆಯ ಪರಾಕಾಷ್ಠೆ]

ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ವಿಶೇಷ ಪೀಠ ಇತ್ತೀಚೆಗೆ ತೀರ್ಪು ನೀಡಿತ್ತು. ಶುಕ್ರವಾರ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಜಯಲಲಿತಾ ಅವರನ್ನು ಆಯ್ಕೆ ಮಾಡಲಾಗಿತ್ತು. ಸುಮಾರು ಎಂಟು ತಿಂಗಳ ಬಳಿಕ ತಮಿಳುನಾಡಿಲ್ಲಿ ಪುನಃ ಅಮ್ಮನ ಆಡಳಿತ ಆರಂಭವಾಗಿದೆ. [ಜಯಲಲಿತಾ ವೀಕೆಂಡ್ ಪಾರ್ಟಿ ಕೆಡಿಸಲು ಕರ್ನಾಟಕ ಸಿದ್ಧ!]

ಸೂಪರ್ ಸ್ಟಾರ್ ರಜನಿಕಾಂತ್, ಸಂಗೀತ ಮಾಂತ್ರಿಕ ಇಳಯರಾಜ, ನಟ ಶರತ್ ಕುಮಾರ್, ವಿವೇಕ್, ಶಿವಕಾರ್ತಿಕೇಯನ್, ಶಿವಾಜಿ ಪ್ರಭು, ಜಯಾಲಲಿತಾ ಆಪ್ತೆ ಶಶಿಕಲಾ, ಸಾಕು ಮಗ ಸುಧಾಕರನ್ ಹಾಗೂ ಕೇಂದ್ರ ಕೈಗಾರಿಕಾ ಖಾತೆ ಸಚಿವ ರಾಧಾಕೃಷ್ಣನ್, ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಸೇರಿದಂತೆ ಹಲವು ಗಣ್ಯರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾದರು. ಜಯಲಲಿತಾ ಪಟ್ಟಾಭಿಷೇಕದ ಚಿತ್ರಗಳು ಇಲ್ಲಿವೆ..... [ಪಿಟಿಐ ಚಿತ್ರಗಳು]

ಕರುಣಾನಿಧಿ ದಾಖಲೆ ಸರಿಸಮ ಮಾಡಿದ ಜಯಾ

ಕರುಣಾನಿಧಿ ದಾಖಲೆ ಸರಿಸಮ ಮಾಡಿದ ಜಯಾ

5ನೇ ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗುವ ಮೂಲಕ ಜೆ.ಜಯಲಲಿತಾ ಅವರು ಡಿಎಂಕೆಯ ಎಂ.ಕರುಣಾನಿಧಿ ದಾಖಲೆಯನ್ನು ಸರಿಸಮ ಮಾಡಿದ್ದಾರೆ.

ದೇವರ ಹೆಸರಿನಲ್ಲಿ ಪ್ರಮಾಣ ವಚನ

ದೇವರ ಹೆಸರಿನಲ್ಲಿ ಪ್ರಮಾಣ ವಚನ

ಹಸಿರು ಸೀರೆಯುಟ್ಟಿದ್ದ ಜೆ.ಜಯಲಲಿತಾ ಅವರು ಶನಿವಾರ ಬೆಳಗ್ಗೆ 11.08ಕ್ಕೆ ಮದ್ರಾಸ್ ವಿವಿ ಶತಮಾನೋತ್ಸವ ಭವನದಲ್ಲಿ ನಡೆದ ಸಮಾರಂಭದಲ್ಲಿ 5ನೇ ಬಾರಿಗೆ ಮಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಮೂರು ಸಾವಿರ ಗಣ್ಯರ ಸಾಕ್ಷಿ

ಮೂರು ಸಾವಿರ ಗಣ್ಯರ ಸಾಕ್ಷಿ

ಸೂಪರ್ ಸ್ಟಾರ್ ರಜನಿಕಾಂತ್, ಸಂಗೀತ ಮಾಂತ್ರಿಕ ಇಳಯರಾಜ, ನಟ ಶರತ್ ಕುಮಾರ್, ವಿವೇಕ್, ಶಿವಕಾರ್ತಿಕೇಯನ್, ಶಿವಾಜಿ ಪ್ರಭು, ಕೇಂದ್ರ ಕೈಗಾರಿಕಾ ಖಾತೆ ಸಚಿವ ರಾಧಾಕೃಷ್ಣನ್, ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಸೇರಿದಂತೆ ಹಲವು ಗಣ್ಯರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾದರು.

ನಾಯಕಿಗೆ ನಮಿಸಿದ ಪನ್ನೀರ್ ಸೆಲ್ವಂ

ನಾಯಕಿಗೆ ನಮಿಸಿದ ಪನ್ನೀರ್ ಸೆಲ್ವಂ

ಜಯಲಲಿತಾ ಅವರು 2001ರಲ್ಲಿ ತಾನ್ಸಿ ಭೂ ಹಗರಣದಲ್ಲಿ ಸಿಲುಕಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ 6 ತಿಂಗಳ ಮಟ್ಟಿಗೆ ಓ.ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿದ್ದರು. ಜಯ ನಿರ್ದೋಷಿಯಾದ ಬಳಿಕ ಪುನಃ ಅಧಿಕಾರ ಬಿಟ್ಟುಕೊಟ್ಟಿದ್ದರು. ಈಗಲೂ ಅದೇ ಪುನರಾವರ್ತನೆಯಾಗಿದೆ.

28 ಸಚಿವರ ಸೇರ್ಪಡೆ

28 ಸಚಿವರ ಸೇರ್ಪಡೆ

ಮದ್ರಾಸ್ ವಿವಿಯಲ್ಲಿ ನಡೆದ ಸಮಾರಂಭದಲ್ಲಿ ಜಯಲಲಿತಾ ಅವರ ಜೊತೆ 28 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಚೆನ್ನೈನಲ್ಲಿ ಹಬ್ಬದ ವಾತಾವರಣ

ಚೆನ್ನೈನಲ್ಲಿ ಹಬ್ಬದ ವಾತಾವರಣ

ಜಯಲಲಿತಾ ಅವರು ಇಂದು ಬೆಳಗ್ಗೆ 10.30ರ ಸುಮಾರಿಗೆ ಫೋಯಸ್ ಗಾರ್ಡನ್ ನಿವಾಸದಿಂದ ಮದ್ರಾಸ್ ವಿವಿ ಕಡೆ ಬಿಗಿ ಭದ್ರತೆಯಲ್ಲಿ ಹೊರಟರು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ನಿಂತಿದ್ದ ಪಕ್ಷದ ಸಾವಿರಾರು ಕಾರ್ಯಕರ್ತರು ಜಯಘೋಷ ಹಾಕಿದರು.

ಸ್ವಾಮಿ ನಿಷ್ಠೆಯ ಪನ್ನೀರ್ ಸೆಲ್ವಂ

ಸ್ವಾಮಿ ನಿಷ್ಠೆಯ ಪನ್ನೀರ್ ಸೆಲ್ವಂ

2014ರಲ್ಲಿ ಮುಖ್ಯಮಂತ್ರಿಯಾದ ಪನ್ನೀರ್ ಸೆಲ್ವಂ ಹಣಕಾಸು ಇಲಾಖೆಯ ಕಚೇರಿಯಿಂದಲೇ ಮುಖ್ಯಮಂತ್ರಿಯ ಕೆಲಸವನ್ನು ಮಾಡುತ್ತಿದ್ದರು. ಇದು ಅವರ ಸ್ವಾಮಿ ನಿಷ್ಠೆಗೆ ಸಾಕ್ಷಿ.

English summary
AIADMK supremo J.Jayalalithaa was on Saturday sworn in as Tamil Nadu chief minister. Here is pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X