ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲ ಪ್ರಳಯ: ನೀರಿನಲ್ಲಿ ಸಿಲುಕಿ ದ್ವೀಪವಾದ ಚೆನ್ನೈ

By Mahesh
|
Google Oneindia Kannada News

ಚೆನ್ನೈ, ಡಿ. 02: ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿ ತನಕ ಮಳೆಗೆ ಆಹುತಿಯಾಗಿರುವವರ ಸಂಖ್ಯೆ 188ಕ್ಕೇರಿದೆ. ಕಳೆದ ಎರಡು ದಿನಗಳ ಮಳೆಗೆ ಚೆನ್ನೈ ನಗರದಲ್ಲೇ ಮೂವರು ಅಸುನೀಗಿದ್ದಾರೆ. ಭಾರತೀಯ ಸೇನೆ, ವಿಪತ್ತು ನಿರ್ವಹಣಾ ದಳ ಸೇರಿದಂತೆ ಜನ ಸಾಮಾನ್ಯರು ಕೂಡಾ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.

ಚೆನ್ನೈನಲ್ಲಿ ಹಲವಾರು ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ನಗರದ ಮೂಲಸೌಕರ್ಯ ವ್ಯವಸ್ಥೆ ತೀರ ಹದಗೆಟ್ಟಿದ್ದು, ಹಲವಾರು ರಸ್ತೆಗಳು ಬಾಯಿ ಬಿಟ್ಟಿವೆ.ರಸ್ತೆ ಸಂಚಾರಕ್ಕೆ ತೀರ ಅಡ್ಡಿಯಾಗಿದ್ದು, ರೈಲುಗಳ ಸಂಚಾರವೂ ವ್ಯತ್ಯಯಗೊಂಡಿದೆ. ಸರಿ ಸುಮಾರು 22ಕ್ಕೂ ಅಧಿಕ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.[ವಿಡಿಯೋ : ಚೆನ್ನೈನಲ್ಲಿ ಮಳೆ ಅವಾಂತರ, ಟ್ರಾಫಿಕ್ ಜಾಮ್]

ಒಂಬತ್ತು ವಿಮಾನಯಾನಗಳಲ್ಲಿ ವಿಳಂಬವುಂಟಾಗಿ, ವಿಮಾನ ನಿಲ್ದಾಣದಲ್ಲಿ ನೀರು ತುಂಬಿದ್ದರಿಂದ ವಿಮಾನಯಾನ ಕೂಡಾ ರದ್ದಾಗಿದೆ. ನೆರೆ ಎಚ್ಚರಿಕೆಯನ್ನು ನೀಡಿರುವ ಚೆನ್ನೈ ಮತ್ತು ಕಾಂಚಿಪುರಂ ಜಿಲ್ಲಾಡಳಿತಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜನರಿಗೆ ಸೂಚಿಸಿವೆ.

ಪ್ರಮುಖ ಐಟಿ ಕಂಪೆನಿಗಳಿರುವ ಚೆನ್ನೈನ ಮಧ್ಯ ಕೈಲಾಷ್ ಪ್ರದೇಶದಲ್ಲಿ ಹಲವಾರು ರಸ್ತೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಐಟಿ ಬಿಟಿ ಕಂಪನಿಗಳು ಹಲವು ಖಾಸಗಿ ಕಂಪನಿಗಳು ಬಂದ್ ಆಗಿವೆ. ಉತ್ತರ ಚೆನ್ನೈ, ಮಂಡವೇಲಿ, ಪಿ.ಎಸ್.ಶಿವಸ್ವಾಮಿ ಸಲೈ, ಮೈಲಾಪುರ, ತಾರಮಣಿ ಲಿಂಕ್ ರೋಡ್, ರಾಜೀವ್ ಗಾಂಧಿ ಸಲೈ ಸೇರಿದಂತೆ ನಗರದ ಇತರ ಹಲವಾರು ಕಡೆಗಳಲ್ಲೂ ರಸ್ತೆಗಳು ಹಾನಿಗೀಡಾಗಿವೆ.

ಟ್ರಾಫಿಕ್ ಜಾಮ್, ರಸ್ತೆ ದುರಸ್ತಿ ಜನತೆ ಕಂಗಾಲು

ಟ್ರಾಫಿಕ್ ಜಾಮ್, ರಸ್ತೆ ದುರಸ್ತಿ ಜನತೆ ಕಂಗಾಲು

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿ ತುಂಬಿಕೊಂಡಿರುವ ನೀರು ಮತ್ತು ಬಿರುಕು ವಾಹನ ಸವಾರಿ ಆಡ್ಡಿಯುಂಟು ಮಾಡಿದೆ. ಚೆನ್ನೈ ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳ ಚಾಲಕರು ಪರದಾಡುವಂತಾಗಿದೆ.

ಹಾಳಾದ ರಸ್ತೆ, ಕೈಕಟ್ಟಿ ನಿಂತ ಆಡಳಿತ ಮಂಡಳಿ

ಹಾಳಾದ ರಸ್ತೆ, ಕೈಕಟ್ಟಿ ನಿಂತ ಆಡಳಿತ ಮಂಡಳಿ

ಮಹಾನಗರದಲ್ಲಿನ ರಸ್ತೆಗಳ ಕಳಪೆತನ ಈ ಭಾರೀ ಮಳೆಯಿಂದಾಗಿ ಬಯಲಾಗಿದ್ದು, ಅಧಿಕಾರಿಗಳು ಕೆಲವು ಪ್ರದೇಶಗಳಲ್ಲಿ ದುರಸ್ತಿ ಕಾರ್ಯಗಳನ್ನು ಆರಂಭಿಸಿದ್ದಾರೆ. ಅದರೆ, ಎಂದೂ ಎದುರಿಸಿದಂಥ ಜಲಪ್ರಳಯ ಪರಿಸ್ಥಿತಿ ನಿಭಾಯಿಸಲು ತಿಳಿಯದೆ ಕೇಂದ್ರ ಸರ್ಕಾರದ ಮೊರೆ ಹೊಕ್ಕಲಾಗಿದೆ.

ತಮಿಳುನಾಡಿನ ಹಲವೆಡೆ ನಿರಂತರ ಮಳೆ

ತಮಿಳುನಾಡಿನ ಹಲವೆಡೆ ನಿರಂತರ ಮಳೆ

ಚೆನ್ನೈ, ಕಾಂಚೀಪುರಂ, ತಿರವಲ್ಲೂರು, ವಿಲ್ಲುಪುರಂ, ಕುಡ್ಡಲೂರು, ಪುದುಚೇರಿ ಮತ್ತು ಕಾರೈಕಲ್‌ಗಳಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಬುಧವಾರದವರೆಗೂ ಮುನ್ಸೂಚನೆ ಇದೆ

ಬುಧವಾರದವರೆಗೂ ಮುನ್ಸೂಚನೆ ಇದೆ

ಬುಧವಾರದವರೆಗೂ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಉತ್ತರ ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಅತ್ಯಂತ ಭಾರೀ ಮಳೆ ಸುರಿಯಲಿದೆ ಎಂದು ಅದು ಎಚ್ಚರಿಕೆ ನೀಡಿದೆ.

ಇನ್ಫೋಸಿಸ್ ನಲ್ಲಿ ಮಳೆ ಹಾವಳಿ

ಇನ್ಫೋಸಿಸ್ ಸೇರಿದಂತೆ ಹಲವು ಐಟಿ ಬಿಟಿ ಕಂಪನಿಗಳಲ್ಲಿ ಮಳೆ ಹಾವಳಿ

ಎಲ್ಲರಿಗೂ ವಿಷಯ ತಿಳಿಸಿ

ಎಲ್ಲರಿಗೂ ವಿಷಯ ತಿಳಿಸಿ, ಜನರಿಗೆ ನೆರವು ನೀಡಿ ಎಂದು ಟ್ವೀಟ್

English summary
Non-stop torrential rains since last night pounded several parts of Chennai and its suburbs and Puducherry triggering a deluge completely disrupting normal life as army was deployed tonight in two suburban areas to undertake rescue on a war footing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X