ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಆಸ್ತಿ ಲೆಕ್ಕ ಹಾಕುವಾಗ ಕರ್ನಾಟಕ ಹೈಕೋರ್ಟ್ ಎಡವಿದ್ದೆಲ್ಲಿ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 14: ಕರ್ನಾಟಕ ಹೈಕೋರ್ಟ್ ಮಾಡಿದ ಗಣಿತದ ತಪ್ಪಿನಿಂದಷ್ಟೇ ಶಶಿಕಲಾ ನಿರ್ದೋಷಿಯಾಗಿದ್ದರು ಎಂದು ಹೇಳಿರುವ ಸುಪ್ರಿಂ ಕೋರ್ಟ್ ಸಿಬಿಐ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಹೈಕೋರ್ಟ್ ನ್ಯಾಯದಾನದ ವೇಳೆ ಪ್ರಾಥಮಿಕ ತಪ್ಪುಗಳನ್ನು ಮಾಡಿದೆ ಎಂದು ಹೇಳಿ ಸರ್ವೋಚ್ಚ ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಹೈಕೋರ್ಟ್ ಲೆಕ್ಕ ತಪ್ಪಾಗಿದ್ದೆಲ್ಲಿ?

ತಪ್ಪಾಗಿದ್ದೆಲ್ಲಿ? ಅಕ್ರಮ ಆಸ್ತಿ ಲೆಕ್ಕ ಹಾಕುವಲ್ಲೇ ಪ್ರಮಾದವಾಗಿದೆ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಅಕ್ರಮ ಆಸ್ತಿ ಮೊತ್ತ ರೂಪಾಯಿ 14.38 ಕೋಟಿ ಬರಬೇಕಾಗಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಲೆಕ್ಕ ಹಾಕಿದ್ದು ಬರೀ 2.8 ಕೋಟಿ. ಇಲ್ಲೇ ಮೊದಲ ಎಡವಟ್ಟಾಗಿದ್ದು[ಚಿನ್ನಮ್ಮ ಮುಂದಿರುವ ಅಂತಿಮ 4 ಆಯ್ಕೆಗಳಿವು..]

How Karnataka proved disproportionate assets was 211.09 per cent

ತಪ್ಪಾಗಿದ್ದು ಹೇಗೆ? ಒಟ್ಟು ಆಸ್ತಿ ಲೆಕ್ಕ ಹಾಕುವ ವೇಳೆ ಸಾಲವನ್ನು ಆದಾಯದ ಜತೆ ಸೇರಿಸಿದ್ದರಿಂದ 13.5 ಕೋಟಿ ಬಿಟ್ಟು ಹೋಗಿತ್ತು. ಈ ಲೆಕ್ಕವನ್ನೇ ಸರಿ ಮಾಡಿದರೂ ಅಕ್ರಮ ಆಸ್ತಿ ಪ್ರಮಾಣ 16 ಕೋಟಿಗೆ ಬರುತ್ತದೆ. ಇದಲ್ಲದೆ ಕರ್ನಾಟಕ ಹೈಕೋರ್ಟ್ ಮತ್ತೊಂದು ವಿಚಾರದಲ್ಲಿಯೂ ತಪ್ಪು ಮಾಡಿತ್ತು. ಅದೇನೆಂದರೆ ಉಡುಗೊರೆಗಳನ್ನು ಆದಾಯದ ಪಟ್ಟಿಗೆ ಸೇರಿಸಿರಲಿಲ್ಲ.[ಪನ್ನೀರ್ ಸೆಲ್ವಂ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ]

ತಿದ್ದುಪಡಿ ಮಾಡಿದ ಲೆಕ್ಕಗಳು ಹೀಗಿವೆ,

ಬಿಟ್ಟು ಹೋಗಿದ್ದ ಖರ್ಚುಗಳು- 14.38 ಕೋಟಿ

ಒಟ್ಟು ಗೂಡಿಸುವಾಗ ಮಾಡಿದ ತಪ್ಪು - 13.5 ಕೋಟಿ

ನಿರ್ಮಾಣ ಖರ್ಚು - 3.5 ಕೋಟಿ

ಜಯಾ ಪಬ್ಲಿಕೇಶನ್ ಆದಾಯ - 2.84

ಕಾನೂನು ಬಾಹಿರ ಉಡುಗೊರೆಗಳು - 1.5 ಕೋಟಿ

ಇರಬೇಕಾಗಿದ್ದ ಆದಾಯ 16.92 ಕೋಟಿ

ಆದರೆ ಇದ್ದ ಅಕ್ರಮ ಆದಾಯ - 35.73

ಶೇಕಡಾ ಅಕ್ರಮ ಆದಾಯ - 211.09%

ಕರ್ನಾಟಕ ಹೈಕೋರ್ಟ್ ಹಲವು ವಸ್ತುಗಳ ಮೌಲ್ಯ ಮತ್ತು ಖರ್ಚುಗಳನ್ನು ಕಡಿತಗೊಳಿಸಿತ್ತು. ಇದರಿಂದ ಶಶಿಕಲಾ ನಿರ್ದೋಷಿ ಎಂದು ತೀರ್ಪು ಬರುವಂತಾಗಿತ್ತು. ಉದಾಹರಣೆಗೆ ಸುಧಾಕರನ್ ಮದುವೆಯ ಖರ್ಚನ್ನು 6.45 ಕೋಟಿಯ ಜಾಗದಲ್ಲಿ ಕೇವಲ 28.68 ಲಕ್ಷ ಎಂದು ನಮೂದಿಸಿತ್ತು.

English summary
The Supreme Court which ordered the conviction of Sasikala dealt with the arithmetic blunder made by the Karnataka High Court while passing an order of acquittal. The Supreme Court termed it as a fundamental blunder while striking down the order of the High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X