ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಅಮ್ಮ ಸಮೀಕ್ಷೆ ಸುಳ್ಳು ಮಾಡಿದ್ದು ಹೇಗೆ?

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಮೇ 20 : ತಮಿಳುನಾಡಿನಲ್ಲಿ ಒಬ್ಬರಾದ ಮೇಲೆ ಒಬ್ಬರು ಗೆಲ್ಲಬೇಕು ಎಂಬ ಸೂತ್ರವನ್ನು ಜಯಲಲಿತಾ ಅವರು ಮುರಿದು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಅಮ್ಮನಿಗೆ ಸೋಲಾಗುತ್ತದೆ ಎಂಬ ಸಮೀಕ್ಷೆಗಳನ್ನು ಜಯಲಲಿತಾ ಸುಳ್ಳು ಮಾಡಿ, ಮುಖ್ಯಮಂತ್ರಿ ಗದ್ದುಗೆ ಏರಲು ಸಿದ್ಧತೆ ನಡೆಸುತ್ತಿದ್ದಾರೆ.

ಜಯಲಲಿತಾ ನೇತೃತ್ವದ ಎಐಎಡಿಎಂಕೆ ಚುನಾವಣೆಯಲ್ಲಿ ಜಯಗಳಿಸಿ ಇತಿಹಾಸ ಸೃಷ್ಟಿಸಲು ಹಲವು ಅಂಶಗಳು ಸಹಾಯಕವಾಗಿವೆ. ತಮ್ಮ ಸರ್ಕಾರದ ಸಾಧನೆಯನ್ನು ಜನರ ಮುಂದಿಟ್ಟು, ಮತಗಳಿಸುವಲ್ಲಿ 'ಅಮ್ಮ' ಯಶಸ್ವಿಯಾಗಿದ್ದಾರೆ. [ಜಯಮ್ಮನ 1 ರು. ಇಡ್ಲಿ ಸಾಂಬಾರಿಗೆ ಮರುಳಾದ ಮತದಾರರು]

jayalalithaa

ಪ್ರಚಾರದ ವೇಳೆ ಜಯಲಲಿತಾ ಅವರು ಸುಮಾರು 22 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಯಾವುದೇ ಪ್ರಚಾರ ಸಭೆಯಲ್ಲಿಯೂ ಅವರು 40 ನಿಮಿಷಕ್ಕಿಂತ ಹೆಚ್ಚಾಗಿ ಭಾಷಣ ಮಾಡಿಲ್ಲ. ತಮ್ಮ ಭಾಷಣದಲ್ಲಿ ಡಿಎಂಕೆಯನ್ನು ಅವರು ಗೇಲಿ ಮಾಡಿದ್ದರು ಮತ್ತು ಸರ್ಕಾರದ ಸಾಧನೆಯ ಬಗ್ಗೆ ಹೇಳಿದ್ದರು. ['ಅಮ್ಮ' ಜಯಲಲಿತಾ ಅಭಿಮಾನಿಗಳ ವಿಜಯೋತ್ಸಾಹದ ಚಿತ್ರಗಳು]

ಮಹಿಳೆಯರ ಮತ ಸೆಳೆದರು : ವಿಶ್ಲೇಷಕರು ಹೇಳುವ ಪ್ರಕಾರ ಅಮ್ಮನ ಗೆಲುವಿನಲ್ಲಿ ಮಹಿಳಾ ಮತದಾರರದ್ದು ಪ್ರಮುಖ ಪಾತ್ರವಿದೆ. ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಗಳು ಅವರನ್ನು ಗೆಲುವಿನ ದಡ ಸೇರಿಸಿವೆ. ಮತಎಣಿಕೆ ನಂತರ ಎಐಎಡಿಎಂಕೆ ಪಕ್ಷದ ನಾಯಕರೇ ಮಹಿಳೆಯರ ಮತ ಹೆಚ್ಚು ಬಂದಿದೆ ಎಂದು ಹೇಳುತ್ತಿದ್ದಾರೆ. [ಇಂಥ ಅತಿರೇಕ ತ.ನಾಡಿನಲ್ಲಿ ಮಾತ್ರ ನೋಡಲು ಸಾಧ್ಯ!]

ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗಲು ಜಾರಿಗೆ ತಂದ ಯೋಜನೆಗಳು ಮತಗಳಾಗಿ ಬದಲಾಗಿವೆ. ವಿವಾಹಕ್ಕೆ ಸಹಾಯ, ಲ್ಯಾಪ್ ಟಾಪ್ ವಿತರಣೆಯ 1,100 ಕೋಟಿ ಮೊತ್ತದ ಯೋಜನೆ ಮಹಿಳೆಯರನ್ನು ಸೆಳೆದಿದೆ. 1.85 ಕೋಟಿ ಮಹಿಳೆಯರಿಗೆ ಫ್ಯಾನ್ ಮತ್ತು ಮಿಕ್ಸರ್ ನೀಡಿರುವುದು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. [ಚುನಾವಣೋತ್ತರ ಸಮೀಕ್ಷೆ: ತಮಿಳುನಾಡಿನಲ್ಲಿ ಫೋಟೋ ಫಿನಿಶ್]

ಜಯಲಲಿತಾ ಅವರು ತಮ್ಮ ಸಂಪುಟದಲ್ಲಿ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಿದ್ದರು. ಜಾತಿ ಆಧಾರದ ಮೇಲೆ ಈ ಲೆಕ್ಕಾಚಾರ ಚುನಾವಣೆಯಲ್ಲಿ ಸಹಾಯಕವಾಗಿದೆ. ವಿಜಯಕಾಂತ್ ಅವರು ಡಿಎಂಕೆ ಮತಗಳನ್ನು ವಿಭಜನೆ ಮಾಡುವಲ್ಲಿ ಸಹಾಯಕರಾದರು. ಇದು ಜಯಲಲಿತಾ ಅವರ ಗೆಲುವಿನಲ್ಲಿ ಪ್ರಮುಖವಾದ ಪಾತ್ರವಹಿಸಿದೆ ಎನ್ನುತ್ತಾರೆ ವಿಶ್ಲೇಷಕರು.

ಗುರುವಾರ ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. 232 ಸದಸ್ಯ ಬಲದ ವಿಧಾನಸಭೆಯಲ್ಲಿ ಎಐಎಡಿಎಂಕೆ 134 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಡಿಎಂಕೆ 89 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ 8 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರೆ, 1 ಸ್ಥಾನ ಇತರರ ಪಾಲಾಗಿದೆ. [ಪಿಟಿಐ ಚಿತ್ರ]

English summary
Jayalalithaa proved everyone wrong. She beat anti incumbency and also the exit polls to create history and win Tamil Nadu convincingly. There are several factors that could have led to this resounding win by Jayalalithaa who is referred to as Amma by her followers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X