ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತದ ಸಿನ್ಮಾಕ್ಕೆ ಸ್ಫೂರ್ತಿಯಾಗಿದ್ದ ಬಂಗಲೆ ನೆಲಸಮ!

By Mahesh
|
Google Oneindia Kannada News

ಚೆನ್ನೈ, ಅ.05: ಇಲ್ಲಿನ ಆಳ್ವಾರ್ ಪೇಟ್ ನಲ್ಲಿದ್ದ ಭೂತದ ಬಂಗಲೆ ನೆಲಸಮವಾಗಿದೆ. ತಮಿಳು ಚಿತ್ರವೊಂದಕ್ಕೆ ಸ್ಪೂರ್ತಿಯಾಗಿದ್ದ ಐತಿಹಾಸಿಕ ಡಿ ಮಾಂಟೆ ಕಾಲೋನಿ ಇತಿಹಾಸ ಪುಟ ಸೇರಿದೆ.

ಹಲವಾರು ವರ್ಷಗಳಿಂದ ನಗರ ಪ್ರತಿಷ್ಠಿತ ಬಡಾವಣೆ ನಡುವೆ ಇದ್ದರೂ ಭೂತ ಬಂಗಲೆಯಾಗಿ ಜನಪ್ರಿಯತೆ ಪಡೆದುಕೊಂಡಿದ್ದ ಡಿ ಮಾಂಟೆ ಕಾಲೋನಿಗೆ ಹೊಸ ರೂಪ ನೀಡಲು ಸ್ಥಳೀಯ ಪಾಲಿಕೆ ಈ ಕ್ರಮ ಕೈಗೊಂಡಿದೆ.

Haunted Houses in De Monte Colony, Chennai demolished

ಡಿ ಮಾಂಟೆ ಕಾಲೋನಿ ಹೆಸರಿನಲ್ಲೇ ತಮಿಳಿನಲ್ಲಿ ಹಾರರ್ ಸಿನಿಮಾ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿತ್ತು. ಆ ಚಿತ್ರದಲ್ಲಿ ಈ ಮನೆಗಿರುವ ಐತಿಹಾಸಿಕ ಮಹತ್ವ, ಪೋರ್ಚುಗೀಸರ ಕಾಲದ ಕಥೆಯನ್ನು ವಿವರಿಸಲಾಗಿತ್ತು.[ದೆವ್ವದ ಕತೆಗಳು ಎ೦ದರೇ ಸಾಕು ಕಿವಿ ನೆಟ್ಟಗೆ!]

ಅಕ್ಕ ಪಕ್ಕದ ಟಿಟಿಕೆ ರಸ್ತೆ, ಸೈಂಟ್ ಮೇರಿಸ್ ರಸ್ತೆಯಲ್ಲಿ ಜನನಿಬಿಡವಾಗಿದ್ದರೂ ಡಿ ಮಾಂಟೆ ಕಾಲೋನಿ ಸದಾ ಕಾಲ ನೀರವತೆಯಿಂದ ಕೂಡಿರುತ್ತಿತ್ತು.

ಪೋರ್ಚುಗೀಸ್ ಉದ್ಯಮಿ ಕುಟುಂಬ ಈ ಕಾಲೋನಿಯಲ್ಲಿ ಸುಖ ಸಂಸಾರ ನಡೆಸಿತ್ತು. ನಂತರ ಮದ್ರಾಸ್ -ಮೈಲಾಪುರ ಆರ್ಕ್ ಡಿಯೋಸಿಸ್ (ಕ್ಯಾಥಲೀಕ್ ಚರ್ಚ್ ಅಧೀನ)ಗೆ ಒಳಪಟ್ಟಿತ್ತು. ನಂತರ ಎಸನ್ ಇಂಜಿನಿಯರಿಂಗ್ ಕಂಪನಿಯ ಉದ್ಯಮಿಗಳು ಕೆಲ ಕಾಲ ನೆಲೆಸಿದ್ದರೂ ಅನೇಕ ವರ್ಷಗಳಿಂದ ಪಾಳುಬಿದ್ದಿತ್ತು.

Haunted Houses in De Monte Colony, Chennai demolished

ಅದರೆ, ಪೋರ್ಚುಗೀಸ್ ಉದ್ಯಮಿಯ ಪತ್ನಿಯನ್ನು ಯಾರೋ ಅತ್ಯಾಚಾರ ಮಾಡಿದರು. ಅದಕ್ಕೆ ಆತ ಎಲ್ಲರನ್ನು ಕೊಂದು, ಮನೆಗೆ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂಬ ಕಥೆ ಸೇರಿದಂತೆ ಅನೇಕ ಕಾಗಕ್ಕ -ಗುಬ್ಬಕ್ಕ ಕಥೆಗಳು ಚೆನ್ನೈನ ಗಲ್ಲಿ ಗಲ್ಲಿಯಲ್ಲಿ ಸುತ್ತಾಡುತ್ತಲೇ ಇವೆ. ಭೂತವುಂಟೋ ಪಿಶಾಚಿಯುಂಟೋ ಡಿ ಮಾಂಟೆ ಕಾಲೋನಿ ಭೂತ ಬಂಗಲೆಯಂತೂ ನೆಲಕಚ್ಚಿದೆ. ಅಕ್ಕ ಪಕ್ಕದಲ್ಲಿರುವ ರೈನ್ ಟ್ರೀ, ಶೆರಟಾನ್ ಸ್ಟಾರ್ ಹೊಟೆಲ್ ಗಳು ನೆಮ್ಮದಿಯಿಂದ ನೆಲದತ್ತ ನೋಡುತ್ತಿವೆ.

English summary
De Monte Colony, Alwarpet, Chennai which even inspired a blockbuster horror Tamil film, were demolished on Sunday. it was considered the ‘haunted’ area. This area is surronded by two of the most prominent star hotels in Chennai (Sheraton and Raintree)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X