ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭರ್ತಿ ಮಳೆಯಲ್ಲೂ ಹಾಲು ಹಾಕಲು ಬಂದ ಮಹಿಳೆಗೆ ಸಲಾಂ!

By Prasad
|
Google Oneindia Kannada News

ಚೆನ್ನೈ, ಡಿಸೆಂಬರ್ 02 : ಚೆನ್ನೈ ನಾಗರಿಕರು ಇಂಥ ಭೀಕರ ಮಳೆಯನ್ನು ಒಂದಿಡೀ ಶತಮಾನದಲ್ಲೇ ಕಂಡಿರಲಿಲ್ಲ. 1901ರಲ್ಲಿ ಡಿಸೆಂಬರ್ 10ರಂದು ಸುರಿದಿದ್ದ 260 ಮಿ.ಮೀ. ಮಳೆಯ ದಾಖಲೆಯನ್ನು ಡಿಸೆಂಬರ್ 1ರ ರಾತ್ರಿ ಹುಯ್ದ ಮಳೆ ಕೊಚ್ಚಿ ಒಯ್ದು ಬಂಗಾಳ ಕೊಲ್ಲಿಯಲ್ಲಿ ಎಸೆದಿದೆ.

ಇಂಥದೊಂದು ಮಳೆ ಬೆಂಗಳೂರಿನಲ್ಲಿ ಸುರಿದರೆ ಏನಾಗುತ್ತೋ ಏನೋ? ಇರಲಿ, ಬೈಕು, ಕಾರು, ಬಸ್ಸು ಮತ್ತಿತರ ವಾಹನಗಳು ಮಾತ್ರವಲ್ಲ ಇಡೀ ನಗರಕ್ಕೆ ನಗರವೇ ಎಲ್ಲೆಲ್ಲೂ ತುಂಬಿಕೊಂಡಿರುವ ನೀರಿನಲ್ಲಿ ತೇಲಾಡುತ್ತಿರುವಂಥ ಅನುಭವ. ಎಲ್ಲೆಲ್ಲೂ ಪ್ರಳಯಸದೃಶ ವಾತಾವರಣ.

ಇಷ್ಟಾದರೂ ಜೀವನ ನಿಲ್ಲಬೇಕಲ್ಲ? ಆದಿನದ ಹೊಟ್ಟೆ ಹೊರಯಬೇಕೆಂದವರು, ಕಚೇರಿ ಕೆಲಸಕ್ಕೆ ಹಾಜರಾಗಲೇಬೇಕಾದವರು ಕೈಯಲ್ಲಿ ಛತ್ರಿ ಹಿಡಿದು, ರೇನ್ ಕೋಟ್ ಹಾಕಿಕೊಂಡು, ಇಷ್ಟದ ದೇವರನ್ನು ನೆನೆಸುತ್ತ, ಒಂದೊಂದೇ ಹೆಜ್ಜೆ ಇಡುತ್ತ ಹೋಗಬೇಕಾದಲ್ಲಿ ಹೋಗುತ್ತಿದ್ದಾರೆ. ಸ್ವಯಂಸೇವಕರು, ಸೇನೆಯವರು ಜನರನ್ನು ಪಾರುಮಾಡುವಲ್ಲಿ ನಿರತರಾಗಿದ್ದಾರೆ. [ಜಲ ಪ್ರಳಯ: ನೀರಿನಲ್ಲಿ ಸಿಲುಕಿ ದ್ವೀಪವಾದ ಚೆನ್ನೈ]


ಇದೆಲ್ಲದರ ನಡುವೆ, ಟ್ವಿಟ್ಟರಲ್ಲಿ ಹರಿದುಬಂದ ಒಂದು ಚಿತ್ರ ಮನ ಕಲಕುವಂತಿದೆ, ಬಡವರ ಜೀವನದ ಚಿತ್ರಣವನ್ನು ಕಣ್ಣಿಗೆ ಕಟ್ಟಿಕೊಡುವಂತಿದೆ. ಮೊಳಕಾಲು ಮುಳುಗಿಸುವ ನೀರಿನಲ್ಲಿ ಸೊಂಟದ ಮೇಲೆ ಬುಟ್ಟಿ ಹಿಡಿದುಕೊಂಡು, ತೆವಳುತ್ತ ಸಾಗುತ್ತಿರುವ ಓರ್ವ ಮಹಿಳೆಯ ಚಿತ್ರವದು. ಇದರಲ್ಲೇನು ವಿಶೇಷ ಅಂತ ನಿಮಗೆ ಅನ್ನಿಸಬಹುದು.

ಆ ಮಹಿಳೆಯ ಹೆಸರು ರಾಧಾ. ಕಳೆದ 25 ವರ್ಷಗಳಿಂದ ಬಿಟ್ಟುಬಿಡದೆ ಹಾಲು ಹಾಕುತ್ತಿರುವ ಮಾತೆ ಅವಳು. ಇಷ್ಟೆಲ್ಲ ಮಳೆ ಸುರಿದು ಜೀವನವೇ ಅಸ್ತವ್ಯಸ್ತವಾಗಿದ್ದರೂ ಹಾಲನ್ನು ಹಾಕಿಸಿಕೊಳ್ಳುವ ಮಾಲಿಕರು ಹಾಲಿನಿಂದ ಎಲ್ಲಿ ವಂಚಿತರಾಗುತ್ತಾರೆಂದು ಆ ಮಳೆಯಲ್ಲೇ ರೇನ್ ಕೋಟ್ ಹಾಕಿಕೊಂಡು ಹಾಕು ಹಾಕಲು ಬುಧವಾರ ಬಂದಿದ್ದಾಳೆ ಎಂದು ಬೆಂಗಳೂರಿನ ನಿವಾಸಿ ರಾಮನಾಥನ್ ಎಂಬುವವರು ಚಿತ್ರ ಹಾಕಿದ್ದಾರೆ. [ಮಳೆಯಿಂದ ನಲುಗಿರುವ ತಮಿಳುನಾಡಿಗೆ ಕೇಂದ್ರದ ಸಕಲ ನೆರವು]


ಆಕೆಯನ್ನು ನಾನು ದ್ವೇಷಿಸುತ್ತಿದ್ದೆ. ಆದರೆ ಈ ಚಿತ್ರಣವನ್ನು ನೋಡಿ ನನ್ನ ಆಕೆಯ ಬಗೆಗಿನ ನನ್ನ ದೃಷ್ಟಿಕೋನವೇ ಬದಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮೊಬೈಲಿಲ್ಲ, ಇಂಟರ್ನೆಟ್ಟಿಲ್ಲ, ಕರೆಂಟಿಲ್ಲ, ತರಕಾರಿಗಳಿಲ್ಲ, ಅಂಗಡಿಗಳು ತೆರೆದಿಲ್ಲ. ಹಾಲು ಸಿಗುವುದೂ ದುರ್ಲಭವಾಗಿದೆ. ಪರಿಸ್ಥಿತಿ ಹೀಗಿರುವಾಗ ಇದರ ದುರ್ಲಾಭ ಪಡೆದ ಕೆಲವರು 125 ರು.ಗೆ ಲೀಟರ್ ಹಾಲನ್ನು ಮಾರುತ್ತಿದ್ದಾರೆ ಎಂಬ ಸುದ್ದಿಗಳೂ ಬರುತ್ತಿವೆ. ಅಂಥದರಲ್ಲಿ ಯಾವುದೇ ಸ್ವಾರ್ಥವಿಲ್ಲದೆ ಹಾಲು ಹಾಕಲು ಬಂದ ಈ ಮಹಿಳೆಗೆ ಒಂದು ಸಲಾಂ ಹೇಳಬೇಡವೆ?

English summary
Hats off to milk woman Radha in rain battered Chennai. Radha has been supplying milk for 25 years in Chennai. Even though whole city is waterlogged due to incessant rain, the milk woman did not run away from her duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X