ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಐವಿ ಸಂಶೋಧಕಿ ಡಾ.ಸುನೀತಿ ಕ್ಯಾನ್ಸರಿಗೆ ಬಲಿ

By Mahesh
|
Google Oneindia Kannada News

ಚೆನ್ನೈ,ಜು.29: ಭಾರತದಲ್ಲಿ ಎಚ್‌ಐವಿ ಸೋಂಕು ಅಸ್ತಿತ್ವದ ಬಗ್ಗೆ ಪತ್ತೆ ಹಚ್ಚಿ, ಎಚ್ ಐವಿ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದ್ದ ದೇಶದ ಹೆಮ್ಮೆಯ ಸಂಶೋಧಕಿ ಡಾ. ಸುನೀತಿ ಸೋಲೊಮನ್ ಅವರು ತಮ್ಮ ಸ್ವಗೃಹದಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಡಾ.ಸುನೀತಿ ಅವರು ಬಹುಕಾಲದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು.

ಸಂಶೋಧಕಿ ಡಾ. ಸುನೀತಿ ಸೋಲೊಮನ್ ಅವರು 1986ರಲ್ಲಿ ಭಾರತದಲ್ಲಿ ಎಚ್‌ಐವಿ ಸೋಂಕು ಅಸ್ತಿತ್ವದ ಬಗ್ಗೆ ಪ್ರಕಟಿಸಿದ್ದರು. ಸುನೀತಿ ಅವರಿಗೆ 76 ವರ್ಷ ವಯಸ್ಸಾಗಿತ್ತು.

Groundbreaking HIV researcher Dr Suniti Solomon passes away

ಸುನೀತಿ ಅವರು ಕಳೆದ ಎರಡು ತಿಂಗಳುಗಳಿಂದ ಪಿತ್ತ ಜನಕಾಂಗದ ಕ್ಯಾನ್ಸರ್‌ನಿಂದ ನರಳುತ್ತಿದ್ದರು. ಸುನೀತಿ ಅವರ ಪತಿ ಡಾ. ಸೋಲೆಮನ್ ವಿಕ್ಟರ್ ಅವರು 2006ರಲ್ಲಿ ಮರಣ ಹೊಂದಿದ್ದಾರೆ. ಪುತ್ರ ಸುನಿಲ್ ಸೋಲೆಮನ್ ಸೇರಿದಂತೆ ಅನೇಕ ಶಿಷ್ಯ ವೃಂದವನ್ನು ಡಾ. ಸುನೀತಿ ಅಗಲಿದ್ದಾರೆ.

ಚೆನ್ನೈನ ಪ್ರಮುಖ ಎಚ್‌ಐವಿ/ಏಡ್ಸ್ ಚಿಕಿತ್ಸೆ ಹಾಗೂ ನೆರವು ಕೇಂದ್ರದ ಸ್ಥಾಪಕ ನಿರ್ದೇಶಕಿಯಾಗಿದ್ದರು. ಮಾರಣಾಂತಿಕ ಎಚ್‌ಐವಿ ವೈರಸ್ ಸೋಂಕಿನ ಚಿಕಿತ್ಸೆ ಕುರಿತು ಭಾರತದಲ್ಲಿ ನಡೆದ ಸಂಶೋಧನೆಯ ನೇತೃತ್ವವನ್ನು ಡಾ. ಸುನೀತಿ ವಹಿಸಿದ್ದರು.

ಡಾ. ಸುನೀತಿ ಸೊಲೊಮನ್ ಹಾಗೂ ಅವರ ಸಹೋದ್ಯೋಗಿಗಳು 1986ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಎಚ್‌ಐವಿ ಸೋಂಕಿನ ಸುಳಿವನ್ನು ಪತ್ತೆ ಹಚ್ಚಿದ್ದರು. ಸರಕಾರಿ ಅಭಯಾಶ್ರಮವೊಂದರಲ್ಲಿ ನೆಲೆಸಿದ್ದ ಆರು ಮಂದಿ ಲೈಂಗಿಕ ಕಾರ್ಯಕರ್ತೆಯರ ರಕ್ತದ ಸ್ಯಾಂಪಲ್‌ಗಳಲ್ಲಿ ಎಚ್‌ಐವಿ ವೈರಸ್ ಇರುವುದನ್ನು ಅವರು ಕಂಡುಹಿಡಿದಿದ್ದರು.

ನಂತರ ಈ ಸ್ಯಾಂಪಲ್ ಗಳನ್ನು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪರೀಕ್ಷಿಸಲಾಯಿತು. ನಂತರ ಯುಎಸ್ಎ ನಲ್ಲಿ ಈ ಬಗ್ಗೆ ದೃಢೀಕರಿಸಲಾಯಿತು. (ಪಿಟಿಐ)

English summary
Groundbreaking HIV researcher Dr Suniti Solomon, the first to bring to the world the prevalence of the infection in India in 1986 and one who successfully led research into the treatment of the deadly virus, passed away at her residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X