ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ವಿಮಾನ ನಿಲ್ದಾಣದಲ್ಲಿ 13 ಕೆಜಿ ಚಿನ್ನ ಜಪ್ತಿ

By Mahesh
|
Google Oneindia Kannada News

ಚೆನ್ನೈ, ಡಿ.9: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಿಂಗಪುರದಿಂದ ಬಂದಿಳಿದು ಹೊರಡುವ ಆತುರ ತೋರುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಅನುಮಾನ ಬಂದು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತ ಬಳಿ ಸುಮಾರು 13 ಕೆ.ಜಿ ತೂಕದ ಚಿನ್ನ ಇರುವುದು ಪತ್ತೆಯಾಗಿದೆ.

ರಿಯಾಜ್ ಮಹಮ್ಮದ್ ಎಂಬ ವ್ಯಕ್ತಿ ಸಿಂಗಪುರದಿಂದ ಮಂಗಳವಾರ ಬೆಳಗ್ಗೆ ಆಗಮಿಸಿದ್ದಾನೆ. ಆತನ ಚಲನವಲನದ ಮೇಲೆ ಸಂಶಯ ಮೂಡಿದೆ. ಕಸ್ಟಮ್ ಅಧಿಕಾರಿಗಳು ತಪಾಸಣೆ ಮಾಡಿದಾಗ ಆತನ ಬಳಿ ಇದ್ದ ಸೂಟ್ ಕೇಸಿನಲ್ಲಿ 6.5 ಕೆಜಿ ಚಿನ್ನ ಇರುವುದು ಪತ್ತೆಯಾಗಿದೆ. ನಂತರ ಸಿಐಎಸ್ ಎಫ್ ಸಿಬ್ಬಂದಿ ಇನ್ನಷ್ಟು ವಿಚಾರಣೆ ನಡೆಸಿದ್ದಾರೆ.

Gold worth Rs. 5 cr seized at Chennai airport

ರಿಯಾಜ್ ಬಂದಿಳಿದ ವಿಮಾನದಲ್ಲಿ ವಾರಸುದಾರರಿಲ್ಲದ ಚೀಲವೊಂದು ಪತ್ತೆಯಾಗಿತ್ತು. ಭದ್ರತಾ ಸಿಬ್ಬಂದಿ ಆ ಚೀಲವನ್ನು ಸ್ವಾಧೀನಕ್ಕೆ ತೆಗೆದುಕೊಂಡು ಬಿಚ್ಚಿ ನೋಡಿದಾಗ ಅದರಲ್ಲಿ ಇನ್ನೂ 6.5 ಕೆ.ಜಿ ಚಿನ್ನ ಇರುವುದು ಕಂಡು ಬಂತು. ಒಟ್ಟಾರೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಸುಮಾರು 5 ಕೋಟಿ ರೂ. ಮೌಲ್ಯದ 13 ಕೆ.ಜಿಗೂ ಹೆಚ್ಚು ಚಿನ್ನ ಸಿಕ್ಕಿದ್ದು ವಶಪಡಿಸಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನದ ಸ್ಮಗ್ಲರ್ ಒಬ್ಬನನ್ನು ಬಂಧಿಸಲಾಗಿದೆ.ಶೌಕತ್ ಚೆಲ್ಲಂಕತ್(31) ಎಂಬಾತ ಅಕ್ರಮವಾಗಿ ಚಿನ್ನದ ಬಿಸ್ಕತ್ತು ಸಾಗಿಸುವಾಗ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮಂಗಳವಾರ ಬೆಳಗ್ಗೆ ಕುವೈತ್‌ನಿಂದ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆರೋಪಿ ಶೌಕತ್ ಬಳಿ ಸುಮಾರು 95 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹೇಳಿದ್ದಾರೆ.

English summary
In a major haul, officials on Tuesday recovered 13 kg of gold at the airport here, with the value of the seizure estimated to be around Rs five crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X