ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮ 'ಜನ ಪ್ರೀತಿ' ಗಳಿಸಿದ ಕ್ಯಾಂಟೀನ್ ನಿಂದ ಲ್ಯಾಪ್ ಟಾಪ್ ವರೆಗೆ

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಡಿಸೆಂಬರ್ 6: ಜಯಲಲಿತಾ ಬಗ್ಗೆ ತಮಿಳು ಜನರಿಗೆ ಏಕಿಷ್ಟು ಪ್ರೀತಿ? ಅಮ್ಮ ಎಂದು ಕರೆಯುವಂಥ ಅಂತಃಕರಣ ಏಕೆ? ಆಕೆ ಸಾವಿನ ನಂತರವೂ ಉಳಿದಿರುವ ಜನಪ್ರಿಯ ಯೋಜನೆಗಳೇ ಈ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುತ್ತವೆ. ಆಕೆ ಜನಪ್ರಿಯ ನಾಯಕಿ ಎಂಬುದರಲ್ಲಿ ಎರಡು ಮಾತಿಲ್ಲ.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಆಕೆ ಮುಖ್ಯಮಂತ್ರಿಯಾದ ಅವಧಿಯಲ್ಲೆಲ್ಲ ಹಲವು ಯೋಜನೆಗಳನ್ನು ಜಾರಿಗೆ ತಂದರು. ತೀರಾ ಇತ್ತೀಚೆಗೆ ಹೆರಿಗೆಗಾಗಿ ಒಂಬತ್ತು ತಿಂಗಳು ರಜೆ ಘೋಷಿಸಿದ್ದರು. ಮನೆ ಕಟ್ಟುವುದಕ್ಕಾಗಿ ಅಮ್ಮ ಸಿಮೆಂಟ್, ಅಮ್ಮ ನೀರಿನ ಯೋಜನೆ, ಕ್ಯಾಂಟೀನ್ ಹೀಗೆ ನೆನಪು ಮಾಡಿಕೊಳ್ಳುವುದಕ್ಕೆ ಹಲವಾರು ಯೋಜನೆಗಳಿವೆ.[68 ರೀಲಿನ 'ಅಮ್ಮ' ಸಿನಿಮಾ ಮತ್ತು ಕನ್ನಡ ದಿನಪತ್ರಿಕೆಗಳು]

ಮದುವೆ ವೇಳೆ ತಾಳಿ ನೀಡುವಂಥ ಯೋಜನೆಗೆ ಅಪಾರ ಮನ್ನಣೆ ದೊರೆಯಿತು. ಇವೆಲ್ಲ ಸರಕಾರದ ಹಣ ಪೋಲು ಮಾಡುವ ಯೋಜನೆಗಳು ಎಂಬ ಟೀಕೆಗಳೇನಿದ್ದರೂ ಅವುಗಳು ಬಡವರ ಪಾಲಿಗೆ ವರದಂತಾಗಿದ್ದವು, ಜಯಲಲಿತಾ ದೇವತೆಯಾಗಿ ಕಂಡರು. ಆ ಕಾರಣಕ್ಕೆ ಅಮ್ಮನ ಅಂತಃಕರಣ ಆಕೆಯಲ್ಲಿ ಕಂಡುಬಂತು.

ಮಳೆ ನೀರು ಸಂಗ್ರಹ ಕಡ್ಡಾಯ, ಹೆಣ್ಣು ಭ್ರೂಣ ಹತ್ಯೆ ತಡೆಗಾಗಿ ಜಾರಿಗೆ ತಂದ ಯೋಜನೆಗಳು ಕೆಲ ವರ್ಷಗಳಲ್ಲೇ ಸಕಾರಾತ್ಮಕ ಬದಲಾವಣೆಗಳನ್ನು ತಂದವು. ಅಂದಹಾಗೆ, ಜಯಲಲಿತಾ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಜನಪ್ರಿಯ ಯೋಜನೆಗಳ ಮಾಹಿತಿ ಇಲ್ಲಿದೆ.[ಸದನದಲ್ಲಿ ಜಯಲಲಿತಾ ಸೀರೆಯನ್ನು ಡಿಎಂಕೆ ಸದಸ್ಯ ಎಳೆದಾಗ]

ಎಲ್ಲ ಮಹಿಳೆಯರೇ ಇರುವ ಪೊಲೀಸ್ ಠಾಣೆ

ಎಲ್ಲ ಮಹಿಳೆಯರೇ ಇರುವ ಪೊಲೀಸ್ ಠಾಣೆ

ಮಹಿಳೆಯರೇ ಇರುವ ಪೊಲೀಸ್ ಠಾಣೆಯನ್ನು ಮೊದಲಿಗೆ 1992ರಲ್ಲಿ ಆರಂಭಿಸಲಾಯಿತು. ಸದ್ಯಕ್ಕೆ ಅಂಥ 200 ಪೊಲೀಸ್ ಠಾಣೆ ತಮಿಳುನಾಡಿನಲ್ಲಿ ಇವೆ. ಶೇ 40ರಷ್ಟು ಅಂಥ ಪೊಲೀಸ್ ಠಾಣೆಗಳು ತಮಿಳುನಾಡಿನಲ್ಲಿವೆ.

ಮಗು ತೊಟ್ಟಿಲು ಯೋಜನೆ

ಮಗು ತೊಟ್ಟಿಲು ಯೋಜನೆ

ಈ ಯೋಜನೆ 1992ರಲ್ಲಿ ಸೇಲಂನಲ್ಲಿ ಆರಂಭಿಸಲಾಯಿತು. ಈ ಯೋಜನೆ ಉದ್ದೇಶವು ಹೆಣ್ಣುಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವುದಾಗಿತ್ತು. ಹೆಣ್ಣುಮಕ್ಕಳ ಭ್ರೂಣ ಹತ್ಯೆ ತಡೆಯುವುದಾಗಿತ್ತು. 2011ರ ವೇಳೆಗೆ ತಮಿಳುನಾಡಿನಲ್ಲಿ ಹೆಣ್ಣುಮಕ್ಕಳ ಲಿಂಗಾನುಪಾತದಲ್ಲಿ ಏರಿಕೆ ಕಾಣಿಸಿಕೊಂಡಿತು.

ಕುಡಿಯುವ ನೀರಿನ ಯೋಜನೆ

ಕುಡಿಯುವ ನೀರಿನ ಯೋಜನೆ

ಚೆನ್ನೈನ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದ್ದು 2004ರಲ್ಲಿ. ಈ ಯೋಜನೆಯನ್ನು ಮೊದಲಿಗೆ ಪರಿಚಯಿಸಿದವರು ಸಿ.ಎನ್.ಅಣ್ಣಾದುರೈ, ಆ ನಂತರ ಕರುಣಾನಿಧಿ ಮುಂದುವರಿಸಿದರು. ಆ ನಂತರ ಈ ಯೋಜನೆಗೆ ಮರುಜೀವ ನೀಡಿದವರು ಜಯಲಲಿತಾ. 2001ರಲ್ಲಿ ಈ ಯೋಜನೆಗೆ ನ್ಯೂ ವೀರಣಂ ಎಂಬ ಹೆಸರು ಕೊಡಲಾಯಿತು.

ಮಳೆ ನೀರು ಸಂಗ್ರಹ

ಮಳೆ ನೀರು ಸಂಗ್ರಹ

2001ರ ನಂತರ ತಮಿಳುನಾಡಿನಲ್ಲಿ ಮಳೆ ನೀರು ಸಂಗ್ರಹವನ್ನು ಎಲ್ಲ ಕಟ್ಟಡದಲ್ಲಿಯೂ ಕಡ್ಡಾಯ ಮಾಡಲಾಯಿತು. ಈ ಯೋಜನೆ ಜಾರಿಗೆ ತಂದ ನಂತರ ಚೆನ್ನೈನಲ್ಲಿ ಅಂತರ್ಜಲ ಮಟ್ಟದಲ್ಲಿ ಗುರುತಿಸುವಂಥ ಬದಲಾವಣೆ ಕಾಣಿಸಿಕೊಂಡಿತು.

ಪುಕ್ಕಟೆ ಲ್ಯಾಪ್ ಟಾಪ್

ಪುಕ್ಕಟೆ ಲ್ಯಾಪ್ ಟಾಪ್

2011ರಲ್ಲಿ ಈ ಯೋಜನೆಯನ್ನು ಸರಕಾರಿ ಹಾಗೂ ಸರಕಾರಿ ಅನುದಾನಿತ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗಾಗಿ ಪರಿಚಯಿಸಲಾಯಿತು. ಇದರಿಂದ 3.25 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಅಮ್ಮ ಕ್ಯಾಂಟೀನ್

ಅಮ್ಮ ಕ್ಯಾಂಟೀನ್

2013ರಲ್ಲಿ ಈ ಯೋಜನೆ ಪರಿಚಯಿಸಲಾಯಿತು. ಅಗ್ಗದ ದರಕ್ಕೆ ಆಹಾರ ಒದಗಿಸುವುದು ಈ ಯೋಜನೆ ಉದ್ದೇಶವಾಗಿತ್ತು. ಇಡ್ಲಿಗೆ 1, ಪೊಂಗಲ್ 5 ಹಾಗೂ ಮೊಸರನ್ನಕ್ಕೆ 3 ರುಪಾಯಿ ಇದೆ.

ಅಮ್ಮ ಬೇಬಿ ಕೇರ್ ಕಿಟ್ಸ್

ಅಮ್ಮ ಬೇಬಿ ಕೇರ್ ಕಿಟ್ಸ್

ಹೆರಿಗೆ ನಂತರ ತಾಯಂದಿರು ಹಾಗೂ ನವಜಾತ ಶಿಶುಗಳ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಈ ಯೋಜನೆ ಪರಿಚಯಿಸಲಾಯಿತು. ಈ ಯೋಜನೆ ಪ್ರಕಾರ ನೀಡುವ ಕಿಟ್ ನಲ್ಲಿ ಟವೆಲ್, ಬಟ್ಟೆ, ಹಾಸಿಗೆ, ಸೊಳ್ಳೆ ಪರದೆ, ಎಣ್ಣೆ, ಮಕ್ಕಳ ಸೋಪು, ಶಾಂಪೂ, ಗೊಂಬೆ ಸೇರಿದಂತೆ ಹದಿನಾರು ವಸ್ತುಗಳು ಇರುತ್ತವೆ.

English summary
Jayalalithaa was well known in the state for her schemes which made her a very popular leader. Here are some of the schemes launched by Jayalalithaa which made her an instant hit with the masses
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X