ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೇರಿದ ನೆಪೋಲಿಯನ್, ಶಾ ಕಾರ್ಯತಂತ್ರ ಶುರು

By Mahesh
|
Google Oneindia Kannada News

ಚೆನ್ನೈ, ಡಿ.21: ಮಾಜಿ ಕೇಂದ್ರ ಸಚಿವ ಹಾಗೂ ಡಿಎಂಕೆ ಹಿರಿಯ ಮುಖಂಡ ಡಿ. ನೆಪೋಲಿಯನ್ ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಪ್ರಭುತ್ವ ಸ್ಥಾಪನೆಗೆ ಶಾ ಹಮ್ಮಿಕೊಂಡಿರುವ ಯೋಜನೆ ಕಾರ್ಯಗತವಾಗುತ್ತಿದೆ.

ತಮಿಳುನಾಡಿನಲ್ಲಿ ಮುಂಬರುವ 2016ರ ವಿಧಾನಸಭಾ ಚುನಾವಣೆ ಮೇಲೆ ಬಿಜೆಪಿ ಕಣ್ಣಿಟ್ಟಿರುವುದು ಗುಟ್ಟಾದ ವಿಷಯವೇನಲ್ಲ. ಲೋಕಸಭೆ ಚುನಾವಣೆಗೂ ಮುನ್ನ ರಾಜನಾಥ್ ಸಿಂಗ್ ಅವರು ಎನ್ ಡಿಎ ಮಿತ್ರ ಪಕ್ಷಗಳನ್ನು ಒಂದುಗೂಡಿಸಲು ಪ್ರಯತ್ನ ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ತಮಿಳುನಾಡಿನ ಮುಖಂಡರನ್ನು ಸೆಳೆಯುವ ಕಾರ್ಯಕ್ಕೆ ಅಮಿತ್ ಶಾ ಮುಂದಾಗಿದ್ದಾರೆ.

ಬಿಜೆಪಿಗೆ ನೆಪೋಲಿಯನ್ : 51 ವರ್ಷ ವಯಸ್ಸಿನ ನೆಪೋಲಿಯನ್ ಡಿಎಂಕೆಯಲ್ಲಿ 35 ವರ್ಷಗಳ ಕಾಲ ದುಡಿದಿದ್ದರು. ಕನ್ನಡ ಚಿತ್ರಗಳು ಸೇರಿ ದಕ್ಷಿಣ ಭಾರತೀಯ ಭಾಷೆ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದವರು. ಡಿಎಂಕೆಯಲ್ಲಿ ನೆಪೋಲಿಯನ್ ಪ್ರಾಬಲ್ಯ ಮುರಿಯಲು ಅವರ ಸಂಬಂಧಿಕ ಕೆಎನ್ ನೆಹರೂ ಕಾರಣರಾಗಿದ್ದು, ಕರುಣಾನಿಧಿ ಅವರ ಹಿರಿಯ ಪುತ್ರ ಎಂಕೆ ಅಳಗಿರಿ ಪರ ವಕಾಲತ್ತು ವಹಿಸಿದ್ದನ್ನು ಸಹಿಸದೆ ನೆಪೋಲಿಯನ್ ಪಕ್ಷ ತೊರೆದಿದ್ದಾರೆ.

Former DMK leader D Napoleon joins BJP

ಹಲವು ಸ್ಟಾರ್ ಗಳು ಬಿಜೆಪಿ: ತಮಿಳುನಾಡಿನಲ್ಲೂ ಸ್ವಚ್ಛಭಾರತ ಅಭಿಯಾನ, ಜನ ಧನ ಯೋಜನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನೆಪೋಲಿಯನ್ ಸೇರ್ಪಡೆ ಬೆನ್ನಲ್ಲೇ ಸಂಗೀತಗಾರ ಗಂಗೈ ಅಮರನ್, ನಟಿ ಗಾಯತ್ರಿ ರಘುರಾಂ ಮುಂತಾದವರು ಡಿಎಂಕೆ, ಎಐಎಡಿಎಂಕೆ ತೊರೆದು ಕಮಲ ಪಕ್ಷ ಸೇರಿದ್ದಾರೆ.

ತಮಿಳುನಾಡು ಸೇರಿದಂತೆ ಏಳು ಕರಾವಳಿ ರಾಜ್ಯಗಳಲ್ಲಿ ಬಿಜೆಪಿ ಬಲವರ್ಧನೆಯಾದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒಳ್ಳೆಯ ಕೆಲಸಗಳು ಮುಂದುವರೆಯಲು ಅನುವಾಗುತ್ತದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ. ಒಡಿಸ್ಸಾ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಪಕ್ಷ ಸಂಘಟನೆಯ ಮೂಲಕ ಬಲಪಡಿಸುವ ಗುರಿ ಹೊಂದಲಾಗಿದೆ

ಸದಸ್ಯತ್ವ ಅಭಿಯಾನ : ಮರೈಮಲೈ ನಗರದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ 60 ಸಾವಿರ ಮತಗಟ್ಟೆಗಳಿಂದ ತಲಾ ನೂರು ಮಂದಿ ಸದಸ್ಯರನ್ನು ನೋಂದಣಿ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

Former DMK leader D Napoleon joins BJP2

ಸದಸ್ಯತ್ವ ಅಭಿಯಾನಕ್ಕಾಗಿ ಪ್ರಾರಂಭಿಸಿರುವ ಸುಂಕ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಪಕ್ಷದ ಸದಸ್ಯರಾಗಬೇಕೆಂದು ಹೇಳಿದ ಅವರು, ರಾಜ್ಯದಲ್ಲಿ 60 ಲಕ್ಷ ಹೊಸ ಸದಸ್ಯರನ್ನು ನೋಂದಣಿ ಮಾಡಿಸಲು ಹಾಗೂ ಸಂದೇಶಕಾರರನ್ನಾಗಿ ನೇಮಿಸಲು ಈ ಯೋಜನೆಯಿಂದ ಸಹಕಾರಿಯಾಗಲಿದೆ ಎಂದರು.

ಕುಟುಂಬ ರಾಜಕೀಯ ವಿರೋಧಿಸಿ: ರಾಜ್ಯದಲ್ಲಿ ಬೇರೂರಿರುವ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಲು ಸಂಘಟನಾ ಕಾರ್ಯಕ್ರಮದಿಂದ ಅನುವಾಗಲಿದೆ. ಅಲ್ಲದೆ ಶ್ರೀಲಂಕಾ ಸೇರಿದಂತೆ ಜಗತ್ತಿನಾದ್ಯಂತ ನೆಲೆಸಿರುವ ತಮಿಳರ ಸ್ಥಾನಮಾನ ಹಾಗೂ ಗೌರವ ಹೆಚ್ಚಿಸಲು ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳೇ ಒಂದಾದ ಮೇಲೊಂದರಂತೆ ರಾಜ್ಯವಾಳುತ್ತಿದೆ. 60 ಲಕ್ಷ ಹೊಸ ಸದಸ್ಯರ ಆಯ್ಕೆಯಿಂದ ಬಿಜೆಪಿ ಈ ರಾಜ್ಯದಲ್ಲೂ ಅಧಿಕಾರ ಚುಕ್ಕಾಣಿ ಹಿಡಿಯುವುದಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶಾ ಹೇಳಿದರು.

English summary
Former Union minister D Napoleon on Sunday joined the BJP after he resigned from the DMK on Saturday. Napoleon, 51, quit from the DMK in a letter written to DMK chief M Karunandihi and general secretary K Anbazhagan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X