ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಜೆ ಬಗ್ಗೆ 6 ಗಂಟೆಗೆ ಘೋಷಣೆ ನಿರೀಕ್ಷಿಸಿ ಎಂದ ಸ್ವಾಮಿ

ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಜೈಲು ಸೇರುವಂತೆ ಮಾಡಿದ್ದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಎಂಬುದು ಗೊತ್ತಿರಬಹುದು. ಈಗ ಅನಾರೋಗ್ಯ ಪೀಡಿತರಾದ ಜಯಲಲಿತಾ ಅವರ ಕುರಿತಂತೆ ಟ್ವೀಟ್ ಮಾಡಿದ್ದಾರೆ.

By Mahesh
|
Google Oneindia Kannada News

ಚೆನ್ನೈ, ಡಿಸೆಂಬರ್ 05: ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಜೈಲು ಸೇರುವಂತೆ ಮಾಡಿದ್ದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಎಂಬುದು ಗೊತ್ತಿರಬಹುದು. ಈಗ ಅನಾರೋಗ್ಯ ಪೀಡಿತರಾದ ಜಯಲಲಿತಾ ಅವರ ಕುರಿತಂತೆ ಮತ್ತೆ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿ ಅನಾರೋಗ್ಯ ಪೀಡಿತರಾಗಿ ಜಯಲಲಿತಾ ಅವರು ಚೆನ್ನೈನ ಅಪೋಲೋ ಆಸ್ಪತ್ರೆ ಸೇರಿದಾಗ ಕೂಡಾ ಸ್ವಾಮಿ ಅವರು ಜಯಾ ಅವರಿಗೆ ಸಲಹೆ ನೀಡುವಂತೆ ಟ್ವೀಟ್ ಮಾಡಿ ಸಿಂಗಪುರಕ್ಕೆ ತೆರಳಿ ಹೆಚ್ಚಿನ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದರು.[ಸಿಂಗಪುರಕ್ಕೆ ಹೋಗ್ಲಿ ಎಂದಿದ್ದು ಬದ್ಧವೈರಿ ಸ್ವಾಮಿ!]

Expect announcement on Jayalalithaa at 6: Subramanian Swamy

ತಮಿಳುನಾಡಿನ ಮೈಲಾಪುರ ಮೂಲದವರಾದ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ರಾಜಕೀಯ ವೈರಿ ಎಂದೇ ಗುರುತಿಸಿಕೊಂಡವರು.


77 ವರ್ಷ ವಯಸ್ಸಿನ ಸ್ವಾಮಿ ಅವರು ಹಿರಿಯರಾಗಿ 68 ವರ್ಷ ವಯಸ್ಸಿನ ಜಯಲಲಿತಾ ಅವರ ಬಗ್ಗೆ ಮತ್ತೆ ಟ್ವೀಟ್ ಮಾಡಿದ್ದಾರೆ.ಆದರೆ, ನಂತರ ಪ್ರತಿಕ್ರಿಯಿಸಿ 6 ಗಂಟೆ 11 ಗಂಟೆಯಾಗಬಹುದು ಎಂದು ಹೇಳಿದ್ದಾರೆ.

ಸುಮಾರು 19 ವರ್ಷಗಳ ಕಾಲ ಕಾನೂನು ಸಮರ(ಅಕ್ರಮ ಆಸ್ತಿ ಪ್ರಕರಣ) ದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಅಂತಿಮವಾಗಿ ಜಯ ಲಭಿಸಿತ್ತು.


ಈ ಸುದೀರ್ಘದ ಹೋರಾಟದಲ್ಲಿ ಒಬ್ಬ ಸ್ವಾಮಿ(ಸುಬ್ರಮಣಿಯನ್ ಸ್ವಾಮಿ) ಜಯಾಗೆ ಜೈಲು ದರ್ಶನ ಮಾಡಿಸಿದರೆ, ಮತ್ತೊಬ್ಬ ಸ್ವಾಮಿ(ನ್ಯಾ. ಕುಮಾರಸ್ವಾಮಿ)ಗಳು ಕೇಸಿನಿಂದ 'ನಿರ್ದೋಷಿ' ಎಂದು ಆದೇಶ ಇತ್ತಿದ್ದರು.

English summary
There may be an announcement on J Jayalalithaa at 6 pm today, tweeted Rajya Sabha MP, Subramanian Swamy. The MP did not elaborate on what the announcement would be.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X