ಡಿಎಂಕೆ ಕಾರ್ಯಾಧ್ಯಕ್ಷರಾಗಿ ಎಂಕೆ ಸ್ಟಾಲಿನ್ ಆಯ್ಕೆ

Posted By:
Subscribe to Oneindia Kannada

ಚೆನ್ನೈ, ಜನವರಿ 04: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡಿದ ಬೆನ್ನಲ್ಲೇ ಡಿಎಂಕೆ ಕಾರ್ಯಧ್ಯಕ್ಷರಾಗಿ ಎಂಕೆ ಸ್ಟಾಲಿನ್ ಅವರನ್ನು ಬುಧವಾರ ಆಯ್ಕೆ ಮಾಡಲಾಗಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಪುತ್ರ ಎಂಕೆ ಸ್ಟಾಲಿನ್ ಅವರನ್ನು ಖಜಾಂಚಿ ಸ್ಥಾನದಿಂದ ಕಾರ್ಯಾಧ್ಯಕ್ಷ ಸ್ಥಾನಕ್ಕೇರಿಸಲಾಗಿದೆ. [ಡಿಎಂಕೆ ಏನು ಶಂಕರ ಮಠವಲ್ಲ: ಕರುಣಾ ಪುತ್ರ]

DMK elevates M K Stalin as its working president

ಚೆನ್ನೈನ ಅಣ್ಣಾ ಅರಿವಾಲಯಂನಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ಬುಧವಾರ(ಜನವರಿ 04) ಬೆಳಗ್ಗೆ ನಡೆದ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸರ್ವ ಸದಸ್ಯರ ಸಭೆಯಲ್ಲಿ ಈ ಒಕ್ಕೊರಲ ನಿರ್ಣಯ ಕೈಗೊಳ್ಳಲಾಗಿದೆ.["ಡಿಎಂಕೆಗೆ ರಾಜೀನಾಮೆ ನೀಡುತ್ತಿಲ್ಲ, ಕುಟುಂಬದಲ್ಲಿ ಒಡಕಿಲ್ಲ"]

ಸ್ಟಾಲಿನ್ ಅವರಿದ್ದ ಖಜಾಂಚಿ ಸ್ಥಾನವನ್ನು ಪೇರಿಸಾಮಿ ಅಥವಾ ಇವಿ ವೇಲು ಅವರು ತುಂಬುವ ಸಾಧ್ಯತೆಯಿದೆ.ಎಂ ಕರುಣಾನಿಧಿ ಅವರು ಅನಾರೋಗ್ಯ ಪೀಡಿತರಾಗಿರುವುದರಿಂದ ಕಳೆದ ವರ್ಷದಂತೆ ಮುಂಬರುವ ಚುನಾವಣೆಯನ್ನು ಸ್ಟಾಲಿನ್ ನೇತೃತ್ವದಲ್ಲೇ ಡಿಎಂಕೆ ಎದುರಿಸಲಿದೆ.

English summary
Days after AIADMK appointed its new general secretary, the DMK elevated M K Stalin as its working president. Stalin currently holds the post of treasurer in the party but failing health of patriarch Dr M Karunanidhi has compelled the party to look at younger leaders.
Please Wait while comments are loading...