ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ವಿಚಾರಣೆಯಿಂದ ಹೈರಾಣಾದರೇ ದಿನಕರನ್?

|
Google Oneindia Kannada News

ಚೆನ್ನೈ, ಏಪ್ರಿಲ್ 28: ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿರುವ ಶಶಿಕಲಾ ಸೋದರ ಸಂಬಂಧಿಯಾದ ಟಿಟಿವಿ ದಿನಕರನ್ ಅವರು ಪೊಲೀಸರ ಸತತ ವಿಚಾರಣೆಯಿಂದಾಗಿ ತೀವ್ರ ಹತಾಶೆಗೊಂಡಿರುವುದಲ್ಲದೆ ಹೈರಾಣಾಗಿದ್ದಾರೆಂದು ಮೂಲಗಳು ತಿಳಿಸಿವೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದಾಗಿ ತೆರವಾಗಿರುವ ಚೆನ್ನೈನ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ, ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆಯನ್ನು ತಮ್ಮ ಬಣಕ್ಕೇ (ಶಶಿಕಲಾ) ಸೀಮಿತಗೊಳಿಸಬೇಕೆಂಬ ಆಸೆಯಿಂದ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಅವರ ಮೇಲಿದೆ.[ದಿನಕರನ್ ಪ್ರಕರಣ ತನಿಖೆಗೆ ಅಡ್ಡಿಯಾಯ್ತು ವಾಟ್ಸಾಪ್ ತಂತ್ರಜ್ಞಾನ]

Dinakaran desperate and confessed: Sources

ಈ ಹಿನ್ನೆಲೆಯಲ್ಲಿ, ಏ.23ರಿಂದ ಸತತವಾಗಿ ಮೂರು ದಿನ ವಿಚಾರಣೆ ನಡೆಸಿದ್ದ ದೆಹಲಿ ಕ್ರೈ ಬ್ರಾಂಚ್ ಪೊಲೀಸರು, ಆನಂತರ ಅವರನ್ನು ಏಕಾಏಕಿ ಬಂಧಿಸಿದ್ದರು. ಬಂಧನದ ನಂತರವೂ ಅವರ ವಿಚಾರಣೆ ಮುಂದುವರಿದಿದ್ದು, ದಿನಕರನ್ ಮತ್ತು ಲಂಚ ಪ್ರಕರಣದಲ್ಲಿ ಅವರ ಏಜೆಂಟ್ ಆಗಿ ಕಾರ್ಯ ನಿರ್ವಹಿಸಿದ್ದಾನೆನ್ನಲಾಗಿರುವ ಸುಖೇಶ್ ಚಂದ್ರಶೇಖರ್ ಅವರ ನಡುವಿನ ಮಾತುಕತೆಗಳ ಸಾರವನ್ನು ಹೆಕ್ಕಲು ಪೊಲೀಸರು ನಿರತರಾಗಿದ್ದಾರೆ.[EC ಗೆ ಲಂಚ ನೀಡಿದ ಆರೋಪ: ದೆಹಲಿಯಲ್ಲಿ ದಿನಕರನ್ ವಿಚಾರಣೆ]

ಏತನ್ಮಧ್ಯೆ, ಗುರುವಾರ ದಿನಕರನ್ ಅವರನ್ನು ಚೆನ್ನೈಗೆ ಕರೆತಂದಿರುವ ಅವರು, ದಿನಕರನ್ ಅವರು, ಸುಖೇಶ್ ಗೆ ಹಣ ಸಂದಾಯ ಮಾಡಿರುವ ದಾರಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಇದೆಲ್ಲದರ ಜತೆಗೇ ದಿನಕರನ್ ಅವರ ಸತತ ವಿಚಾರಣೆ ಸಾಗಿದೆ.

ಈ ವಿಚಾರಣೆಗಳಿಂದಲೇ ದಿನಕರನ್ ಹತಾಶರಾಗಿ ತಮ್ಮ ವಕೀಲಕ ಕಡೆಯಿಂದ ತಪ್ಪೊಪ್ಪಿಗೆ ಪತ್ರವನ್ನು ದೆಹಲಿ ಪೊಲೀಸರಿಗೆ ಸಲ್ಲಿಸಿದ್ದರೆಂದು ಹೇಳಲಾಗಿದೆ.

English summary
The special branch of the Delhi police was in Chennai on Thursday to gather more evidence against Sasikala Natarajan's nephew, T T V Dinakaran in connection with the Election Commission bribery case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X