ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿಕಲಾ ಕಂಡರೆ ನನಗೇನು ಭಯವಿಲ್ಲ: ಜಯಾ ಸೊಸೆ ದೀಪಾ

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಹೋದರನ ಪುತ್ರಿ ದೀಪಾ ಜಯಕುಮಾರ್ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿದ್ದಾರೆ.

By Mahesh
|
Google Oneindia Kannada News

ಚೆನ್ನೈ, ಫೆಬ್ರವರಿ 07: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಹೋದರನ ಪುತ್ರಿ ದೀಪಾ ಜಯಕುಮಾರ್ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಆದರೆ, ಸುದ್ದಿಗೋಷ್ಠಿ ತುಂಬಾ ತಮಿಳುನಾಡಿನ ನಿಯೋಜಿತ ಸಿಎಂ ಶಶಿಕಲಾ ನಟರಾಜನ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಶಶಿಕಲಾ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದು, ಹಾಗೂ ತಮಿಳುನಾಡಿನ ನಿಯೋಜಿತ ಸಿಎಂ ಆಯ್ಕೆ ಮಾಡಿದ್ದು ಎಲ್ಲವೂ ತಮಿಳುನಾಡಿನ ಪಾಲಿಗೆ ದುರ್ದೈವದ ಸಂಗತಿಯಾಗಿದೆ. ನಾನು ಶಶಿಕಲಾಗೆ ಹೆದರಲ್ಲ ಎಂದು ದೀಪಾ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Deepa Jayakumar On Sasikala Elevation : I m not afraid, Its a sad day for Tamil Nadu

'ಶಶಿಕಲಾ ತಮಿಳುನಾಡಿನ ಮುಂದಿನ ಸಿಎಂ ಆಗಲಿರುವುದು ರಾಜ್ಯದ ಜನತೆಯನ್ನು ಚಿಂತೆಗೀಡು ಮಾಡಿದೆ' ಎಂದು ಪಕ್ಷದ ಹಿರಿಯ ನಾಯಕರು ನನಗೆ ಕರೆ ಮಾಡಿ ನೋವು ತೋಡಿಕೊಂಡಿದ್ದಾರೆ. ಆದರೆ, ನನ್ನ ರಾಜಕೀಯ ಜೀವನದ ಕುರಿತ ಯೋಜನೆಗಳನ್ನು ವ್ಯಕ್ತಪಡಿಸಲು ನನಗೆ ಹಲವು ಒತ್ತಡಗಳಿವೆ ಎಂದಿದ್ದಾರೆ.

ಫೆ.24 ರಂದು ಅಮ್ಮನ ಜನ್ಮದಿನದಂದು ಅದನ್ನು ಘೋಷಿಸುತ್ತೇನೆ. ನನ್ನ ಅತ್ತೆಗಾಗಿಯೇ ರಾಜಕೀಯ ಪ್ರವೇಶಿಸುತ್ತಿದ್ದೇನೆ. ಹೊರತು ಬೇರೆ ವೈಯಕ್ತಿಕ ಕಾರಣವಿಲ್ಲ, ಅವರ ಕನಸು ನನಸು ಮಾಡಬೇಕಿದೆ ಎಂದರು.

ಅಮ್ಮನ ಸಾವಿನ ಕುರಿತು ವೈದ್ಯರು ನೀಡಿರುವ ಮಾಹಿತಿ ನನಗೆ ತೃಪ್ತಿ ತಂದಿಲ್ಲ. ಅಮ್ಮ ಆಸ್ಪತ್ರೆಯಲ್ಲಿದ್ದಾಗ ಅವರನ್ನು ನೋಡುವ ಅವಕಾಶವನ್ನು ನನಗೆ ನೀಡದೆ ತಡೆ ಹಿಡಿದಾಗಲೆ ನಾನ್ಗೆ ಈ ಬಗ್ಗೆ ಸಂಶಯ ಮೂಡಿತ್ತು ಎಂದು ದೀಪಾ ಹೇಳಿದರು.

English summary
Deepa Jayakumar, the niece of former chief minister J Jayalalithaa today slammed elevation of Sasikala Natarajan to the post of CM of Tamil Nadu. 41 year old said "It is a very sad day for Tamil Nadu," and will announce future plan on February 24, the birth anniversary of Jayalalithaa "as a tribute to my aunt".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X