ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಠಾಣೆ ಮೆಟ್ಟಿಲೇರಿದ ಕೋಟಿ ಬೆಲೆಯ ರೇಸ್ ಕಾರುಗಳು

ಚೆನ್ನೈನ ಕಾನತ್ತೂರು ಪೊಲೀಸ್ ಠಾಣೆ ಭಾನುವಾರ ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು. ಇದಕ್ಕೆ ಕಾರಣ ಪೊಲೀಸ್ ಠಾಣೆ ಮುಂದೆ ಸಾಲಾಗಿ ನಿಂತಿದ್ದ ಕೋಟಿ ಕೋಟಿ ಬೆಲೆಯ 10 ದುಬಾರಿ ಹಾಗೂ ಐಶಾರಾಮಿ ರೇಸಿಂಗ್ ಕಾರುಗಳು.

By ಅನುಶಾ ರವಿ
|
Google Oneindia Kannada News

ಚೆನ್ನೈ, ಫೆಬ್ರವರಿ 27: ಚೆನ್ನೈನ ಕಾನತ್ತೂರು ಪೊಲೀಸ್ ಠಾಣೆ ಭಾನುವಾರ ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು. ಇದಕ್ಕೆ ಕಾರಣ ಪೊಲೀಸ್ ಠಾಣೆ ಮುಂದೆ ಸಾಲಾಗಿ ನಿಂತಿದ್ದ ಕೋಟಿ ಕೋಟಿ ಬೆಲೆಯ 10 ದುಬಾರಿ ಹಾಗೂ ಐಶಾರಾಮಿ ರೇಸಿಂಗ್ ಕಾರುಗಳು.

ಇವೆಲ್ಲಾ ಕಾರುಗಳನ್ನು ಪೊಲೀಸರು ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಿಂದ ವಶಕ್ಕೆ ಪಡೆದಿದ್ದರು. ಈ ರಸ್ತೆಯಲ್ಲಿ ಕೋಟಿ ಕುಬೇರರ ಮಕ್ಕಳು ಅನುಮತಿ ಇಲ್ಲದೆ ರೇಸಿಂಗ್ ಮಾಡುತ್ತಿದ್ದರಿಂದ ಪೊಲೀಸರು ತಡೆದು ಕಾರುಗಳನ್ನು ವಶಕ್ಕೆ ಪಡೆದಿದ್ದರು. ಇದೇ ವೇಳೆಗೆ ಬೆಂಗಳೂರಿನ ಕೋಲಾರ ರಸ್ತೆಯಲ್ಲಿ ಬೈಕ್ ರೇಸ್ ಮಾಡುತ್ತಿದ್ದ 50ಕ್ಕೂ ಹೆಚ್ಚು ಬೈಕು ಸವಾರರಿಗೆ ಪೊಲೀಸರು ದಂಡ ಹಾಕಿದ್ದಾರೆ.[ತಮಿಳುನಾಡು: ಕಾರಿನಲ್ಲಿ ಸಿಕ್ಕಿತು ರಾಶಿ ಚಿನ್ನದ ಬಿಸ್ಕೆಟ್]

ಲ್ಯಾಂಬೊರ್ಗಿನಿ, ಫೆರಾರಿ, ಬೆಂಜ್

ಲ್ಯಾಂಬೊರ್ಗಿನಿ, ಫೆರಾರಿ, ಬೆಂಜ್

ವಶಕ್ಕೆ ಪಡೆದ ಕಾರುಗಳಲ್ಲಿ ಒಂದು ಕೋಟಿ, ಎರಡು ಕೋಟಿಗೂ ಹೆಚ್ಚಿನ ಬೆಲೆಯ ಕಾರುಗಳೇ ಹೆಚ್ಚಾಗಿದ್ದವು. ದುಬಾರಿ ಲ್ಯಾಂಬೊರ್ಗಿನಿ, ಫೆರಾರಿ, ಮರ್ಸಿಡೆಸ್ ಬೆಂಜ್ ಕಾರುಗಳು ಇಲ್ಲಿದ್ದವು. ಈ ಎಲ್ಲಾ ಕಾರುಗಳ ಮಾಲಿಕರೂ 30 ವರ್ಷಕ್ಕಿಂತ ಕೆಳಗಿನವರೇ ಬೇರೆ.

4-5 ಕೋಟಿ

4-5 ಕೋಟಿ

ವಶಕ್ಕೆ ಪಡೆದ ಕಾರುಗಳಲ್ಲಿ ಮರ್ಸಿಡಸ್ ಬೆಂಜ್ ಎಎಮ್ಜಿ ಜಿಟಿ ಬೆಲೆ 4 ಕೋಟಿಯಾದರೆ, ಲ್ಯಾಂಬೊರ್ಗಿನಿ ಅವೆಂಟಡಾರ್ ಬೆಲೆ 5 ಕೋಟಿಯಾಗಿದೆ. ಇನ್ನು ಲ್ಯಾಂಬೊರ್ಗಿನಿಯ ಇನ್ನೊಂದು ಕಾರು ಹ್ಯುರಾಕಾನ್ ಬೆಲೆಯೂ 4 ಕೋಟಿ. ಒಟ್ಟಾರೆ ವಶಕ್ಕೆ ಪಡೆದ ಕಾರುಗಳ ಬೆಲೆ 30 ಕೋಟಿಯಾಗಿದೆ.

ಹಲವು ಕೇಸ್

ಹಲವು ಕೇಸ್

ಕಾರುಗಳ ಮೇಲೆ ಪೊಲೀಸರು ಸಿಕ್ಕ ಸಿಕ್ಕ ಕೇಸುಗಳನ್ನು ಜಡಿದಿದ್ದಾರೆ. ವೇಗಯುತ ಮತ್ತು ಬೇಜವಾಬ್ದಾರಿ ಚಾಲನೆ, ಶಬ್ದ ಮಾಲಿನ್ಯ, ಸಾರ್ವಜನಿಕರಲ್ಲಿ ಭಯ ಸೃಷ್ಟಿಸಿದ ಆಧಾರದಲ್ಲಿ ಕಾರುಗಳ ಮೆಲೆ ಕೇಸು ಜಡಿಯಲಾಗಿದೆ.[ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ರಸ್ತೆಯಲ್ಲೇ ಕಾರ್ ರೇಸ್

ರಸ್ತೆಯಲ್ಲೇ ಕಾರ್ ರೇಸ್

ಮೂಲಗಳ ಪ್ರಕಾರ ಭಾನುವಾರ ಮುಂಜಾನೆ 7 ಗಂಟೆಗೆ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಮಹಾಬಲಿಪುರಂನತ್ತ 150 ಕಿಲೋಮೀಟರ್ ವೇಗದಲ್ಲಿ ಯುವಕರೆಲ್ಲಾ ಕಾರ್ ರೇಸ್ ಮಾಡುತ್ತಿದ್ದರು ಎನ್ನಲಾಗಿದೆ. ಈ ರಸ್ತೆಯಲ್ಲಿ ರೇಸ್ ಗಳು ಸಾಮಾನ್ಯ. ಹೆಚ್ಚಿನ ಸಂದರ್ಭದಲ್ಲಿ ಬೈಕ್ ರೇಸ್ ಗಳನ್ನು ಇಲ್ಲಿ ಕಾಣಬಹುದು. ಇದೀಗ ಶ್ರಿಮಂತರ ಕಾರುಗಳನ್ನೇ ಜಪ್ತಿ ಮಾಡಿ ಈ ರಸ್ತೆಯಲ್ಲಿ ರೇಸ್ ಮಾಡುವವರಿಗೆ ತಡೆ ಹಾಕಬಹುದು ಎಂದು ಪೊಲೀಸರು ಅಂದುಕೊಂಡಿದ್ದಾರೆ.[ತಮಿಳುನಾಡು ಹೈಡ್ರಾಮ: ಸ್ಟಾಲಿನ್ ಸೇರಿ 2,000 ಜನರ ಮೇಲೆ ಎಫ್ಐಆರ್]

ಕೋಲಾರದಲ್ಲಿ ಬೈಕ್ ರೇಸ್

ಕೋಲಾರದಲ್ಲಿ ಬೈಕ್ ರೇಸ್

ಇದೇ ರೀತಿ ಕೋಲಾರದಲ್ಲಿಯೂ ಬೈಕ್ ರೇಸ್ ಮಾಡಿದ 50 ಜನರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಕೋಲಾರ್ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅನುಮತಿ ಇಲ್ಲದೆ ಬೈಕ್ ರೇಸ್ ಮಾಡುತ್ತಿದ್ದ 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು 25ಕ್ಕೂ ಹೆಚ್ಚು ಬೈಕುಗಳನ್ನು ಜಪ್ತಿ ಮಾಡಿದ್ದಾರೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
The Kanathur police station in Chennai attracted massive attention on Sunday as 10 imported cars including two Lamborghinis, a Ferrari and Mercedes were seen parked outside. The cars were seized by the police while their drivers, all under the age of 30, were caught racing on East Coast road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X