ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ -ಮಂಗಳೂರು ರೈಲು ದುರಂತ, ಹೆಲ್ಪ್ ಲೈನ್

By Mahesh
|
Google Oneindia Kannada News

ವಿಲ್ಲುಪುರಂ(ತಮಿಳುನಾಡು), ಸೆ. 04: ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್ ರೈಲು ಶುಕ್ರವಾರ ಮುಂಜಾನೆ ವಿಲ್ಲುಪುರಂ ಜಿಲ್ಲೆಯ ಪೂವನೂರು ಬಳಿ ಹಳಿ ತಪ್ಪಿದೆ. ಈ ದುರ್ಘಟನೆಯಲ್ಲಿ ಸುಮಾರು 39 ಜನರಿಗೆ ಗಾಯಗಳಾಗಿದೆ.

ಚೆನ್ನೈನ ಎಗ್ಮೋರ್ ನಿಲ್ದಾಣದಿಂಡ ಮಂಗಳೂರಿಗೆ ಹೊರಟ್ಟಿದ್ದ ಎಕ್ಸ್ ಪ್ರೆಸ್ ರೈಲು ಕಡಲೂರು ಸಮೀಪದ ಪೂವನೂರು ಬಳಿ ಹಳಿ ತಪ್ಪಿದ ಹಿನ್ನೆಲೆಯಲ್ಲಿ ಸುಮಾರು ಎಂಟಕ್ಕೂ ಅಧಿಕ ರೈಲುಗಳ ವೇಳೆ ಬದಲಾಯಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಕಡಲೂರಿನ ವೃದ್ಧಾಚಲಂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

Chennai-Mangalore train derails near Villupuram district in Tamil Nadu; 39 injured

ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳು ಕಡಲೂರು ಸ್ಟೇಷನ್ ನಿಂದ ಬೇರೆ ಮಾರ್ಗದಲ್ಲಿ ಸಾಗಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

* ಚೆನ್ನೈ -ಮಂಗಳೂರು ರೈಲು (ಸಂಖ್ಯೆ 16859) ದುರಂತದಲ್ಲಿ ಗಾಯಗೊಂಡವರ ಪೈಕಿ 25 ಜನ ಮಹಿಳೆಯರಿದ್ದಾರೆ.
* ಕಡಲೂರಿನಿಂದ ವಿಶೇಷ ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿಲ್ಲುಪುರಂ, ತಿರುಚ್ಚಿ, ಸೇಲಂ ಮುಂತಾದ ಪ್ರದೇಶಕ್ಕೆ ಪ್ರಯಾಣಿಕರು ತೆರಳಬಹುದಾಗಿದೆ.
* ಘಟನಾ ಸ್ಥಳಕ್ಕೆಕಡಲೂರಿನ ಕಲೆಕ್ಟರ್ ಎಸ್ ಸುರೇಶ್ ಕುಮಾರ್, ಎಸ್ ಪಿ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ:
ತಿರುಚ್ಚಿ: 0431-2461241, 2410534
ವೃದ್ಧಾಚಲಂ: 04143-263767
ವಿಲ್ಲುಪುರಂ:04146-241936
ಚೆನ್ನೈ ಎಗ್ಮೋರ್ : 044-29015203

English summary
Atleast 39 passengers were injured after a Mangalore bound train, starting from Chennai derailed on the wee hours of Friday. The train fell off the rails near Poovanur in Tamil Nadu and eight trains plying the same route are said to have been delayed as a result of the accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X