ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಮಹಾ ಪ್ರವಾಹಕ್ಕೂ ಜಗ್ಗದ-ಕುಗ್ಗದ ಬಸ್!

|
Google Oneindia Kannada News

ಚೆನ್ನೈ, ಡಿಸೆಂಬರ್, 04: ಚೆನ್ನೈ ಪ್ರವಾಹದಲ್ಲಿ ಬದುಕುಳಿದವರು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಸರ್ಕಾರ , ಸೈನಿಕರು, ಸ್ವಯಂ ಸೇವಾ ಕಾರ್ಯಕರ್ತರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರವಾಹ ಕೆಲವು ವಿಲಕ್ಷಣ ಘಟನೆಗೂ ಸಾಕ್ಷಿಯಾಗಿದೆ. ಎಂಥ ಮಳೆ ಬಂದರೂ ಮನೆಗೆ ಹಾಲು ಹಾಕುವುದನ್ನು ಬಿಡದ ಮಹಿಳೆ, ತಾಯಿಯ ಶವದ ಮುಂದೆ 20 ಗಂಟೆ ಕುಳಿತ ಯುವತಿ, ಆಮ್ಲಜನಕ ಸಿಗದೇ ಸಾವನ್ನಪ್ಪಿದ ರೋಗಿಗಳು... ಅಬ್ಬಬ್ಬಾ..

ಇದೆಲ್ಲದರ ನಡುವೆ ಇದೊಂದು ವಿಡಿಯೋ ನಿಮ್ಮನ್ನು ನಿಜಕ್ಕೂ ದಂಗು ಬಡಿಸುತ್ತದೆ. ರಸ್ತೆಯಲ್ಲಿ ಅಲ್ಲಲ್ಲ,,. ನದಿಯಲ್ಲಿ ಸಾಗಿಬಂದ ಬಸ್ ನ ದೃಶ್ಯಾವಳಿಗಳನ್ನು ನೋಡಿದರೆ ಚಾಲಕನಿಗೆ ಶಹಭಾಷ್ ಎಂದು ಹೇಳಲೇಬೇಕು. ಜತೆಗೆ ಇಂಥ ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿತ್ತೆ? ಎಂಬ ಪ್ರಶ್ನೆಯನ್ನು ಕೇಳಬೇಕು ಎನಿಸುತ್ತದೆ.[ಚೆನ್ನೈ ಪ್ರಳಯ, ಪಾಠ ಕಲಿಯುವುದೇ ಬೆಂಗಳೂರು ನಗರಿ!]

rain

ಜನರಿಂದ ತುಂಬಿದ್ದ ಬಸ್ (ಟಾಪ್ ಮೇಲೆಯೂ) ಚಾಲಕ ಕೂರುವ ಮಟ್ಟದ ನೀರಿನಲ್ಲಿ ಸಾಗಿ ಬಂದಿದೆ. ಈ ವಿಡಿಯೋ ಈಗಾಗಲೇ ವೈರಲ್ ಆಗಿದ್ದು ಸಾವಿರಾರು ಜನ ವೀಕ್ಷಣೆ ಮಾಡಿದ್ದಾರೆ.[ಪ್ರವಾಹ ಸಂತ್ರಸ್ತರಿಗೆ ಬೆಂಗಳೂರಿಗರು ನೆರವು ನೀಡೋದು ಎಲ್ಲಿ?]

ಪ್ರವಾಹ ಇಳಿಮುಖವಾಗಿರುವುದು ಸಂತ್ರಸ್ತರಲ್ಲಿ ನೆಮ್ಮದಿ ತಂದಿದೆ. ಆದರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರಕ್ಕೂ ಸಮಸ್ಯೆಯಾಗಿ ಪರಿಣಮಿಸಿದೆ. ಕಿತ್ತು ಹೋಗಿರುವ ರಸ್ತೆಗಳೂ, ಎಲ್ಲೆಲ್ಲೂ ನೀರು, ಮುಳುಗಡೆಯಾದ ಕಾರುಗಳು, ಆಹಾರ ಪೊಟ್ಟಣಕ್ಕಾಗಿ ಹೋರಾಟ... ಇವೆಲ್ಲ ಸದ್ಯದ ಚೆನ್ನೈ ವಾಸ್ತವ ಪರಿಸ್ಥಿತಿ. ಈ ವಿಡಿಯೋ ನೋಡಿದರೆ ನಿಮಗೆ ಮಳೆ ಆರ್ಭಟದ ದೃಶ್ಯ ಮತ್ತೊಮ್ಮೆ ಮನದಟ್ಟಾಗುತ್ತದೆ.

English summary
A road transport corporation bus cleared the inundated Tambaram bypass due to the sheer dint of the driver's skill. The bus was bound for Chennai from Tiruchirappalli. Here watch the video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X