ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಅಪ್ಪನನ್ನು ಕೊಲ್ಲಲು ಯತ್ನಿಸಿದ 'ಡಾಕ್ಟರ್' ಮಗಳು

By Mahesh
|
Google Oneindia Kannada News

ಚೆನ್ನೈ, ಆಗಸ್ಟ್ 13: ಆಸ್ತಿಗಾಗಿ ಸ್ವಂತ ಅಪ್ಪನನ್ನೇ ಮಗಳೊಬ್ಬಳು ಕೊಲ್ಲಲು ಯತ್ನಿಸಿದ ಘಟನೆ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಲೆಯಾಗಿದ್ದು 82 ವರ್ಷ ವಯಸ್ಸಿನ ಹೃದ್ರೋಗಿ ತಂದೆ ಡಾ. ಇ ರಾಜಗೋಪಾಲ್. ಕೊಂದಿದ್ದು ಅವರ ಮಗಳು ಡಾಕ್ಟರ್ ಜಯಸುಧಾ ಮನೋಹರನ್.

ಸೆಪ್ಟೆಂಬರ್ 2015ರಲ್ಲಿ ನಡೆದ ಈ ಘಟನೆಗೆ ವಿಡಿಯೋ ಸಾಕ್ಷಿ ಈಗ ಸಿಕ್ಕಿದ್ದು, ಚೆನ್ನೈ ಪೊಲೀಸರು ಆರೋಪಿ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದಾರೆ.

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಐಸಿಯುನಲ್ಲಿ ಮಲಗಿದ್ದಾರೆ. ಆತನ ಹೆಬ್ಬರಳಿನಿಂದ ಆಸ್ತಿ ಪತ್ರಕ್ಕೆ ಸಹಿ ಬೀಳುತ್ತಿದ್ದಂತೆ ಆಮ್ಲಜನಕ ಪೂರೈಕೆ ಪೈಪ್ ಕಿತ್ತು ಹಾಕಲಾಗಿದೆ.

ವಿಡಿಯೋ ಸಾಕ್ಷಿ: ಸಿಸಿಟಿವಿ ದೃಶ್ಯವನ್ನು ನೋಡಿದರೆ, ಡಾ. ಜಯಸುಧಾ ಅವರು ತಮ್ಮ ಇಬ್ಬರು ಗಂಡು ಮಕ್ಕಳೊಡನೆ ಅದಿತ್ಯಾ ಆಸ್ಪತ್ರೆಯ ಐಸಿಯುಗೆ ಬರುತ್ತಾರೆ. ಅಪ್ಪನ ಜೊತೆಗೆ ಏಕಾಂತದಲ್ಲಿ ಮಾತನಾಡಬೇಕು ಎಂದು ಹೇಳಿ ನರ್ಸ್ ಗಳನ್ನು ಹೊರಕ್ಕೆ ಕಳಿಸುತ್ತಾರೆ..

ಜಯಸುಧಾ ಅವರ ಮಗ ಡಾ. ಹರಿಪ್ರಸಾದ್ ಅವರು ಶರ್ಟ್ ನಲ್ಲಿ ಬಚ್ಚಿಟ್ಟಿದ್ದ ಆಸ್ತಿ ಪತ್ರಗಳನ್ನು ಹೊರಕ್ಕೆ ತೆಗೆಯುತ್ತಾರೆ. ಇಂಕ್ ಪ್ಯಾಡ್ ತೆಗೆದು ಅಪ್ಪನ ಬೆರಳಚ್ಚು ಪಡೆದ ಜಯಸುಧಾ ಅವರು ನಂತರ ಸ್ಪಿರೀಟ್ ಬಳಸಿ ಹೆಬ್ಬರಳನ್ನು ಶುಚಿಗೊಳಿಸುತ್ತಾರೆ. ನಂತರ ಏನಾಯ್ತು ಮುಂದೆ ಓದಿ... ಚಿತ್ರಗಳು: ವಿಡಿಯೋ ಗ್ರಹಿತ, ವಿಡಿಯೋ ಕೃಪೆ: ದಿನ್ಯೂಸ್ ಮಿನಿಟ್

ಏನು ಗೊತ್ತಿಲ್ಲ ವೆಂಬಂತೆ ನಡೆದುಕೊಂಡ ಸುಧಾ

ಏನು ಗೊತ್ತಿಲ್ಲ ವೆಂಬಂತೆ ನಡೆದುಕೊಂಡ ಸುಧಾ

ನಂತರ ಅಪ್ಪನಿಗೆ ನೀಡಿದ ಜೀವ ರಕ್ಷಕ ಸಾಧನವೊಂದರ ಕೊಂಡಿಯನ್ನು ಡಾ ಜಯಸುಧಾ ಮುರಿಯುತ್ತಾರೆ. ರಕ್ತ ಸೋರತೊಡಗುತ್ತದೆ. ಡಾಕ್ಟರ್, ನರ್ಸ್ ಗಳು ಓಡಿ ಬರುತ್ತಾರೆ. ಅವರ ಬಳಿ ಏನೋ ಹೇಳಿದ ಜಯಸುಧಾ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.

ಪೊಲೀಸರಿಗೆ ವಿಡಿಯೋ ಸಾಕ್ಷಿ ನೀಡಿ ಜಯಾ ಸೋದರ

ಪೊಲೀಸರಿಗೆ ವಿಡಿಯೋ ಸಾಕ್ಷಿ ನೀಡಿ ಜಯಾ ಸೋದರ

ನಂತರ ಪೊಲೀಸರಿಗೆ ವಿಡಿಯೋ ಸಾಕ್ಷಿ ನೀಡಿ, ಡಾ ಜಯಸುಧ, ಆಕೆ ಪತಿ ಡಾ ಯು ಮನೋಹರನ್, ಅವರ ಮಗ ಡಾ ಹರಿಪ್ರಸಾದ್ ವಿರುದ್ಧ ಕೊಲೆ ಯತ್ನ ಆರೋಪ ಮಾಡಿದ್ದಾರೆ. ತಮಿಳು ನಾಡಿನ ರಾಜ್ಯ ಮೆಡಿಕಲ್ ಕೌನ್ಸಿಲ್ ಗೂ ದೂರು ನೀಡಿ ಮೂವರ ಲೈಸನ್ಸ್ ರದ್ದು ಪಡಿಸಿ, ಕೊಯಮತ್ತೂರಿನ ಆರ್ ಎಸ್ ಪುರಂ ನಲ್ಲಿರುವ ಅವರ ಆಸ್ಪತ್ರೆ ಬಂದ್ ಮಾಡುವಂತೆ ಡಾ. ಎಂ. ಜಯಪ್ರಕಾಶ್ ದೂರಿದ್ದಾರೆ.

ಆರೋಪಿಗಳ ಬಂಧನವಾಗಿದೆ

ಆರೋಪಿಗಳ ಬಂಧನವಾಗಿದೆ

ಸದ್ಯ ಅರೋಪಿಗಳನ್ನು ಕೊಲೆ ಯತ್ನ ಕೇಸಿನ ಅಡಿಯಲ್ಲಿ ಡಾ ಜಯಸುಧ, ಆಕೆ ಪತಿ ಡಾ ಯು ಮನೋಹರನ್, ಅವರ ಮಗ ಡಾ ಹರಿಪ್ರಸಾದ್ ರನ್ನು ಬಂಧಿಸಿರುವ ಚೆನ್ನೈ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜನವರಿಯಲ್ಲಿ ಈ ಕೇಸಿನ ಎಫ್ ಐಆರ್ ಹಾಕಲಾಗಿದ್ದು, ಚಾರ್ಜ್ ಶೀಟ್ ಈಗ ಕೋರ್ಟಿಗೆ ಸಲ್ಲಿಸಲಾಗಿದೆ.

ಸಾಯುವುದಕ್ಕೂ ಮುನ್ನ ಡಾ. ರಾಜಗೋಪಾಲ್ ಹೇಳಿಕೆ

ಸಾಯುವುದಕ್ಕೂ ಮುನ್ನ ಡಾ. ರಾಜಗೋಪಾಲ್ ಹೇಳಿಕೆ

ಈ ಘಟನೆ ನಡೆದ ಎರಡು ತಿಂಗಳ ಬಳಿಕ ಡಾ. ರಾಜಗೋಪಾಲ್ ಮೃತಪಟ್ಟಿದ್ದಾರೆ. ರಾಜಗೋಪಾಲ್ ಅವರ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದು ಈ ಕೇಸಿನಲ್ಲಿ ಈ ಹೇಳಿಕೆ ಮಹತ್ವದ ದಾಖಲೆಯಾಗಲಿದೆ.

English summary
Chennai police have chargesheeted a female doctor for trying to kill her 82-year-old father, a heart patient on medical support, in an ICU. She had pulled the plug on him after getting his thumb impression on a set of papers. This did not go unnoticed – the incident was caught on CCTV camera reports the News minute
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X