ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆದ್ದವರು-ಬಿದ್ದವರ ಪಟ್ಟಿ: ತಮಿಳುನಾಡಿನಲ್ಲಿ ಪ್ರಮುಖ ಅಭ್ಯರ್ಥಿಗಳಿವರು

By Mahesh
|
Google Oneindia Kannada News

ಚೆನ್ನೈ, ಮೇ 20: ತಮಿಳುನಾಡಿನಲ್ಲಿ ಎಐಎಡಿಎಂಕೆಯ ಸಿಎಂ ಅಭ್ಯರ್ಥಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ ಜಯಲಲಿತಾ, ವಿತ್ತ ಸಚಿವರಾಗಿದ್ದ ಓ ಪನ್ನೀರ್ ಸೆಲ್ವ ಅವರು ಗೆಲುವು ಸಾಧಿಸಿದ್ದಾರೆ. ಪಕ್ಷಕ್ಕೆ 134 ಸ್ಥಾನಗಳು ಸಿಕ್ಕಿದ್ದರೂ ಕೆಲ ಕ್ಷೇತ್ರಗಳಲ್ಲಿ ಅನಿರೀಕ್ಷಿತ ಸೋಲುಂಟಾಗಿದೆ.

ಉಳಿದಂತೆ ಡಿಎಂಕೆ, ಪಿಎಂಕೆ ಪಕ್ಷದ ಅನೇಕ ನಾಯಕರು ಸೋತು ಸುಣ್ಣವಾಗಿದ್ದಾರೆ. ಚೆನ್ನೈನಲ್ಲಿ ಡಿಸೆಂಬರ್ 2016 ಪ್ರವಾಹ ಪರಿಸ್ಥಿತಿ ನಿಭಾಯಿಸಲು ಎಐಎಡಿಎಂಕೆ ವಿಫಲವಾದ ಕಾರಣದಿಂಡ ಎಸ್ ಗೋಕುಲ ಇಂದಿರಾ, ಬಿ ವಲರ್ಮತಿ ಅವರು ಅನ್ನಾ ನಗರ್ ಹಾಗೂ ಥೌಸಂಡ್ ಲೈಟ್ಸ್ ಕ್ಷೇತ್ರಗಳಲ್ಲಿ ಸೋಲು ಕಂಡಿದ್ದಾರೆ. [ಅಮ್ಮ ರಿಟರ್ನ್ಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ ದಾಖಲೆ]

ಉಳಿದಂತೆ ಎಐಎಡಿಎಂಕೆಯ ಇಂಧನ ಸಚಿವ ನಾಥಮ್ ಆರ್ ವಿಶ್ವನಾಥನ್, ಆರ್ ವೈಥಿಲಿಂಗಮ್ ಅವರ ಸೋಲು ಅನಿರೀಕ್ಷಿತವಾಗಿದೆ.

Prominent personalities who won and lost in Tamil Nadu

ಡಿಎಂಕೆಯಲ್ಲಿ ಕರುಣಾ ದಾಖಲೆ ಗೆಲುವು: ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರು 13ನೇ ಬಾರಿಗೆ ಅಸೆಂಬ್ಲಿ ಪ್ರವೇಶಿಸುತ್ತಿದ್ದು, 91 ವರ್ಷದ ಹಿರಿಯ ರಾಜಕಾರಣಿಯಾಗಿ, ಮಾಜಿ ಸಿಎಂ ಆಗಿ ಕರುಣಾ ಅವರು ವಿಧಾನಸಭೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 1957ರಿಂದ ಕರುಣಾನಿಧಿ ಸೋಲು ಕಂಡಿಲ್ಲ. [ಅಮ್ಮ ಸಮೀಕ್ಷೆ ಸುಳ್ಳು ಮಾಡಿದ್ದು ಹೇಗೆ?]

* ಉಳಿದಂತೆ ಎಂಕೆ ಸ್ಟಾಲಿನ್(ಕೊಳತ್ತೂರು), ದುರೈ ಮುರುಗನ್ (ಕಾಟ್ಪಾಡಿ), ಇವಿ ವೇಲು(ತಿರುವಣ್ಣಾಮಲೈ), ಕೆ ಪೊನ್ಮುಡಿ(ತಿರುಕೊವಿಲುರ್),ಕೆಎನ್ ನೆಹ್ರೂ(ತಿರುಚ್ಚಿ), ಎಂಆರ್ ಕೆ ಪನ್ನೀರ್ ಸೆಲ್ವಂ(ಕುರಿಂಜಿಪಡಿ)

ಸಿನಿಮಾ ತಾರೆಯರು: ನಟ ಕಮ್ ರಾಜಕಾರಣಿ ಆಲ್ ಇಂಡಿಯಾ ಸಮುತ್ತರ ಮಕ್ಕಳ್ ಕಚ್ಚಿ ನಾಯಕ ಆರ್ ಶರತ್ ಕುಮಾರ್ ಅವರು ತಿರುಚೆಂಡೂರು ಕ್ಷೇತ್ರದಿಂದ ಡಿಎಂಕೆ ಎದುರಾಳಿ ಅನಿತಾ ಆರ್ ರಾಧಕೃಷ್ಣನ್ ವಿರುದ್ಧ ಸೋಲು ಕಂಡಿದ್ದಾರೆ. [41 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿದ್ದ ಕಾಂಗ್ರೆಸ್]

* ಡಿಎಂಡಿಕೆ ನಾಯಕ ವಿಜಯ್ ಕಾಂತ್ ಅವರು ಉಳಂದೂರ್ ಪೆಟೈನಲ್ಲಿ ಡಿಪಾಸಿಟ್ ಕಳೆದುಕೊಂಡಿದ್ದಾರೆ.

ಆದರೆ, ಸಿನಿಮಾ ಜಗತ್ತಿನ ವೈಗೈ ಚಂದ್ರಶೇಖರ್ ಅವರು ಡಿಎಂಕೆ ಬೆಂಬಲದಿಂದ ವೆಲಚ್ಚೇರಿ ಕ್ಷೇತ್ರದಲ್ಲಿ ಎಐಎಡಿಎಂಕೆ ಎದುರಾಳಿ ಸಿ ಮುನುಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

Prominent personalities who won and lost in Tamil Nadu

* ಪಿಎಂಕೆ ಮುಖ್ಯಮಂತ್ರಿ ಅಭ್ಯರ್ಥಿ ಲೋಕಸಭಾ ಸದಸ್ಯ ಅನ್ಬುಮಣಿ ರಾಮ್ ದಾಸ್ ಅವರು ಡಿಎಂಕೆ ಪಿಎನ್ ಪಿ ಇನ್ಬಶೇಖರನ್ ವಿರುದ್ಧ ಪೆನ್ನಾಗರಮ್ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.

* ಉಳಿದಂತೆ ವಿಸಿಕೆ ಪಕ್ಷದ ತಿರುಮವಲವನ್, ಎಐಎನ್ ಆರ್ ಸಿ ಮುಖ್ಯಸ್ಥ ರಂಗವಾಮಿ,ಎನ್ಟಿಕೆ ಮುಖಂಡ ಸೆಂಥಮಿಳನ್ ಸೀಮನ್ ಸೋಲುಂಡಿದ್ದಾರೆ.

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ಡಿಎಂಡಿಕೆ ನಾಯಕ, ತಮಿಳು ಚಿತ್ರರಂಗ ಸ್ಟಾರ್ ಕ್ಯಾಪ್ಟನ್ ವಿಜಯ್ ಕಾಂತ್

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ಆಲ್ ಇಂಡಿಯಾ ಸಮುತ್ತರ ಮಕ್ಕಳ್ ಕಚ್ಚಿ ನಾಯಕ ಆರ್ ಶರತ್ ಕುಮಾರ್

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ತಮಿಳುನಾಡಿನಲ್ಲಿ ಎಐಎಡಿಎಂಕೆಯ ಸಿಎಂ ಅಭ್ಯರ್ಥಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ ಜಯಲಲಿತಾಗೆ ಗೆಲುವು

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ವಿತ್ತ ಸಚಿವರಾಗಿದ್ದ ಓ ಪನ್ನೀರ್ ಸೆಲ್ವ ಅವರಿಗೆ ಗೆಲುವು

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರ ಪಟ್ಟಿ

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ನಟ ವೈಗೈ ಚಂದ್ರಶೇಖರ್ ಅವರಿಗೆ ಡಿಎಂಕೆ ಬೆಂಬಲದಿಂದ ಗೆಲುವು

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ಪಿಎಂಕೆ ಮುಖ್ಯಮಂತ್ರಿ ಅಭ್ಯರ್ಥಿ ಲೋಕಸಭಾ ಸದಸ್ಯ ಅನ್ಬುಮಣಿ ರಾಮ್ ದಾಸ್ ಗೆ ಸೋಲು

ಪಿಎಫ್ ಡಬ್ಲ್ಯೂ ಮುಖಂಡ ವೈಕೋ ಸ್ಪರ್ಧೆಗಿಳಿದಿರಲಿಲ್ಲ

ಎಂಕೆ ಸ್ಟಾಲಿನ್(ಕೊಳತ್ತೂರು)

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರು 13ನೇ ಬಾರಿಗೆ ಅಸೆಂಬ್ಲಿ ಪ್ರವೇಶ ದಾಖಲೆ.

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ನಟ ಕರುಣಾಸ್ ಗೆ ಗೆಲುವು, ಡಿಎಂಕೆ ಅಭ್ಯರ್ಥಿ ಎಸ್ ಪಿ ತಿರುವಕರಣ್ ವಿರುದ್ಧ 8,696 ಮತಗಳಿಂದ ಗೆದ್ದಿದ್ದಾರೆ.

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ತಮಿಳ್ ಮಾನೀಲ ಕಾಂಗ್ರೆಸ್ ಮುಖಂಡ ಜಿಕೆ ವಾಸನ್ ಸ್ಪರ್ಧೆಗಿಳಿದಿರಲಿಲ್ಲ

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ಪಿಟಿಸಿಸಿ ಅಧ್ಯಕ್ಷ ಇವಿಕೆಎಸ್ ಇಳಂಗೋವನ್ ಸ್ಪರ್ಧೆಗಿಳಿದಿರಲಿಲ್ಲ

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ಪಿಎಫ್ ಡಬ್ಲ್ಯೂ ಮುಖಂಡ ವೈಕೋ ಸ್ಪರ್ಧೆಗಿಳಿದಿರಲಿಲ್ಲ

ತಮಿಳುನಾಡು ಅಸೆಂಬ್ಲಿ ಸೋತವರು ಗೆದ್ದವರು

ನಟ ರಾಜಾ ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ ಅವರು ಸ್ವತಂತ್ರವಾಗಿ ಸ್ಪರ್ಧಿಸಿ ವೆಲಚ್ಚೆರಿ ಕ್ಷೇತ್ರದಲ್ಲಿ ಸೋಲು ಕಂಡರು.

* ಪಿಎಫ್ ಡಬ್ಲ್ಯೂ ಮುಖಂಡ ವೈಕೋ, ತಮಿಳ್ ಮಾನೀಲ ಕಾಂಗ್ರೆಸ್ ಮುಖಂಡ ಜಿಕೆ ವಾಸನ್, ಪಿಟಿಸಿಸಿ ಅಧ್ಯಕ್ಷ ಇವಿಕೆಎಸ್ ಇಳಂಗೋವನ್, ಸಿಪಿಎಂ ಮುಖಂಡ ರಾಮಕೃಷ್ಣನ್, ಆರ್ ನಲ್ಲಕನ್ನು ಸೋಲಿನ ಭೀತಿಯಲ್ಲಿ ಸ್ಪರ್ಧೆಗಿಳಿದಿರಲಿಲ್ಲ. (ಐಎಎನ್ಎಸ್)

English summary
Tamil Nadu Chief Minister and AIADMK general secretary J Jayalalthaa and Finance Minister O.Panneerselvam won the assembly elections but several other prominent party candidates were humbled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X