ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಅಸೆಂಬ್ಲಿಯಿಂದ 89 ಡಿಎಂಕೆ ಸದಸ್ಯರು ಅಮಾನತು

By Mahesh
|
Google Oneindia Kannada News

ಚೆನ್ನೈ, ಆಗಸ್ಟ್ 17: ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ಬಹುದೊಡ್ಡ ಹೈಡ್ರಾಮಾ ನಡೆದಿದೆ. ವಿರೋಧ ಪಕ್ಷ ಡಿಎಂಕೆಯ ಎಲ್ಲಾ 89 ಮಂದಿ ಶಾಸಕರನ್ನು ವಿಧಾನಸಭಾಧ್ಯಕ್ಷ ಧನಪಾಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಒಂದುವಾರ ಅವಧಿಗೆ ಎಲ್ಲಾ 89 ಮಂದಿ ಡಿಎಂಕೆ ಶಾಸಕರು ಅಮಾನತು ಮಾಡಲಾಗಿದೆ. ಸದನದಲ್ಲಿ ಬುಧವಾರ ಹಾಜರಿದ್ದ 77 ಸದಸ್ಯರನ್ನು ಗಾರ್ಡ್, ಮಾರ್ಷಲ್ ಗಳು ಹೊತ್ತು ಹೊರಕ್ಕೆ ಹಾಕಿದರು.[ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ 21 ಅಭ್ಯರ್ಥಿಗಳ ಪಟ್ಟಿ]

All 89 DMK MLAs suspended from TN Assembly for a week

ಡಿಎಂಕೆ ನಾಯಕ ಎಂ. ಕೆ ಸ್ಟಾಲಿನ್ ಅವರನ್ನು ಗೌರವಾದರದೊಂದಿಗೆ ನಡೆಸಿಕೊಳ್ಳಲಾಗುತ್ತಿಲ್ಲ. ಆಡಳಿತಾರೂಢ ಎಐಎಡಿಎಂಕೆ ಸದಸ್ಯರು ಅಗೌರವ ತೋರುತ್ತಿದ್ದಾರೆ ಎಂದು ಡಿಎಂಕೆ ಸದಸ್ಯರು ಸದನದಲ್ಲಿ ಗದ್ದಾಲ ಏರ್ಪಡಿಸಿದ್ದರು.[ಪಡೆಯಪ್ಪನನ್ನು ಕೆಣಕಿದ ವಿಜಯಕಾಂತ್: ತಿರುಗಿಬಿದ್ದ ರಜನಿ ಫ್ಯಾನ್ಸ್]

ಪರಿಸ್ಥಿತಿ ಕೈ ಮೀರಿದಾಗ ವಿಧಾನಸಭಾಧ್ಯಕ್ಷ ಪಿ ಧನ್ ಪಾಲ್ ಅವರು 89 ಮಂದಿ ಡಿಎಂಕೆ ಶಾಸಕರನ್ನು ಒಂದು ವಾರದ ಅವಧಿಗೆ ಅಮಾನತು ಗೊಳಿಸಿ, ಸದನದಿಂದ ಹೊರಹಾಕುಂತೆ ಮಾರ್ಷಲ್​ಗಳಿಗೆ ಆದೇಶ ನೀಡಿದರು.

ಡಿಎಂಕೆ ಸದಸ್ಯರೂ ಕೂಡ ಜನರಿಂದ ಚುನಾಯಿತರಾದ ಪ್ರತಿನಿಧಿಗಳಾಗಿದ್ದು, ಆಡಳಿತ ಪಕ್ಷ ಗೌರವ ಮತ್ತು ಸಭ್ಯತೆಯಿಂದ ವರ್ತಿಸಬೇಕು ಎಂದು ಡಿಎಂಕೆ ವಕ್ತಾರ ಮನು ರಾಜ್ ಸುಂದರಮ್ ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ನಡೆದಾಗ ಸದನದಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು ಹಾಜರಿರಲಿಲ್ಲ.

English summary
All 89 members of the DMK, the party which is headed by MK Karunanidhi, have been banned from attending the legislature for a week by the Speaker P Dhanapal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X