ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರದ 'ಹಿಂದಿ ಹೇರಿಕೆ'ವಿರುದ್ಧ ಕೂಗು

By Mahesh
|
Google Oneindia Kannada News

ಚೆನ್ನೈ, ಅ.28: ಸಾಮಾಜಿಕ ಜಾಲ ತಾಣಗಳಲ್ಲಿ ಹಿಂದಿ ಭಾಷೆ ಹೇರಿಕೆಗೆ ಮುಂದಾಗಿದ್ದ ಕೇಂದ್ರ ಸರ್ಕಾರಕ್ಕೆ ಅಂದಿನ ಮುಖ್ಯಮಂತ್ರಿ ಜಯಲಲಿತಾ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದರು. ಅದರೆ, ಪಾಠ ಕಲಿಯದ ಮೋದಿ ಸರ್ಕಾರ ವಿರುದ್ದ ಈಗ ತಮಿಳುನಾಡಿನ ಬಿಜೆಪಿ ತಿರುಗಿ ನಿಂತಿದೆ.

ಪ್ರಸಾರ ಭಾರತಿ ಅಡಿಯಲ್ಲಿ ಬರುವ ಆಲ್ ಇಂಡಿಯಾ ರೇಡಿಯೋ(AIR)ದ ತಮಿಳುನಾಡಿನ ಕೇಂದ್ರದಿಂದ ಬಿತ್ತರಗೊಳ್ಳುವ ಕಾರ್ಯಕ್ರಮದಲ್ಲಿ ಅನಗತ್ಯವಾಗಿ ಹಿಂದಿ ಭಾಷೆ ಹೇರಿಕೆಯಾಗುತ್ತಿದೆ ಎಂದು ತಮಿಳುನಾಡಿನ ಬಿಜೆಪಿ ಘಟಕ ಕೇಂದ್ರ ಸರ್ಕಾರಕ್ಕೆ ದೂರು ನೀಡಿದೆ. [ಟಿವಿಗಿಂತ ಆಕಾಶವಾಣಿಯೇ ಜನಪ್ರಿಯ]

ಬಿಜೆಪಿ ಘಟಕದ ಅಧ್ಯಕ್ಷ ತಮಿಳಿಸೈ ಸೌಂದರ್ಯರಾಜನ್ ಅವರು ದೆಹಲಿಯಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಗಮನ ಹರಿಸುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ.

AIR ನಿಂದ ಪ್ರಸಾರವಾಗುತ್ತಿರುವ ನಾಲ್ಕು ವಾಣಿಜ್ಯೋದ್ದೇಶಿತ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸುವಂತೆ ಕೋರಲಾಯಿತು ತಕ್ಷಣವೇ ಅಧಿಕಾರಿಗಳಿಗೆ ಕಾರ್ಯಕ್ರಮಗಳನ್ನು ರದ್ದುಪಡಿಸುವಂತೆ ಸಚಿವ ಪ್ರಕಾಶ್ ಅವರು ಸೂಚಿಸಿದ್ದಾರೆ ಎಂದು ಸೌಂದರ್ಯರಾಜನ್ ಹೇಳಿದ್ದಾರೆ.[ನೆನಪಿನ ತರಂಗಾಂತರಗಳು!]

'Imposition' of Hindi: BJP TN unit takes up issue with Centre

ಕಳೆದ ವಾರ ಆಕಾಶವಾಣಿಯಲ್ಲಿ 'ಹಿಂದಿ ಹೇರಿಕೆ'ಯಾಗುತ್ತಿದೆ ಎಂದು ಪಿಎಂಕೆ ಪಕ್ಷ ಟೀಕಿಸಿತ್ತು. ಪ್ರಾದೇಶಿಕ ಪ್ರಸಾರ ಕೇಂದ್ರಗಳಲ್ಲಿ ಹಿಂದಿ ಹೇರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಏನನ್ನು ಸಾಧಿಸಲು ಹೊರಟಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ವಾಣಿಜ್ಯ ಕಾರ್ಯಕ್ರಮದ ಹೆಸರಿನಲ್ಲಿ ಹಿಂದಿ ಹೇರಿಕೆಯಾಗುವುದನ್ನು ಖಂಡಿಸುತ್ತೇವೆ. ವಾರದಲ್ಲಿ ನಾಲ್ಕು ಗಂಟೆಯಾದರೆ ಓಕೆ, ಅದರೆ, ದಿನದಲ್ಲಿ ನಾಲ್ಕು ಗಂಟೆಗಳ ಕಾಲ ಹಿಂದಿ ಕಾರ್ಯಕ್ರಮ ಅ.26ರಿಂದ ಆರಂಭಗೊಂಡಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಪಕ್ಷದ ಸ್ಥಾಪಕ ಎಸ್ ರಾಮದಾಸ್ ಕಿಡಿಕಾರಿದ್ದರು. [ಹಿಂದಿ ವಿರುದ್ಧ ಎಂಕೆ ಯುದ್ಧ, ಸಿದ್ದು ಏಕೆ ನಿಶ್ಶಬ್ದ?]

ಪಿಎಂಕೆ, ಬಿಜೆಪಿ ಅಲ್ಲದೆ ಸ್ಥಳೀಯ ಸಂಘಟನೆ ಪೆರಿಯಾರ್ ದ್ರಾವಿಡರ್ ಕಳಗಂ ಕೂಡಾ ಹಿಂದಿ ಹೇರಿಕೆ ವಿರುದ್ಧ ಸೊಲ್ಲೆತ್ತಿದೆ. ತಮಿಳು ಭಾಷೆ ಶ್ರೀಮಂತವಾಗಿದ್ದು, ಆಕಾಶವಾಣಿ ಮೂಲಕ ಸ್ಥಳೀಯ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಅನುಗುಣವಾದ ಕಾರ್ಯಕ್ರಮಗಳನ್ನು ಬಿತ್ತರಿಸುವುದು ಉತ್ತಮ ಕ್ರಮ ಎಂದಿದ್ದಾರೆ. [ಹಿಂದಿ ಹೇರಿಕೆ. ಕರವೇ ನಾರಾಯಣ ಗೌಡ್ರ ಲೇಖನ]

ಮೋದಿ ಸರ್ಕಾರಕ್ಕೆ ಹಿನ್ನಡೆ : ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಭಾಷೆ ಹೇರುವ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ...ತಮಿಳುನಾಡಿನ ವಿಚಾರದಲ್ಲಿ ಹಿಂದಿಗೆ ಪ್ರಾಮುಖ್ಯತೆ ನೀಡುವುದು ಅತೀ ಸೂಕ್ಷ್ಮ ವಿಚಾರ. ತಮಿಳಿಗರಿಗೆ ತಮ್ಮ ಭಾಷೆಯ ಬಗ್ಗೆ ತುಂಬಾ ಗೌರವ ಮತ್ತು ಭಾವನಾತ್ಮಕ ಸಂಬಂಧ ಇದೆ ಎಂದು ಅಂದಿನ ಸಿಎಂ ಜಯಲಲಿತಾ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಭಾಷೆ ವಿಷಯದಲ್ಲಿ ಪ್ರತಿಪಕ್ಷ ಡಿಎಂಕೆ ಕೂಡಾ ಕೈಜೋಡಿಸಿ ಮೋದಿ ಸರ್ಕಾರದ ಕ್ರಮವನ್ನು ಖಂಡಿಸಿತ್ತು. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುತ್ತೋಲೆಯನ್ನು ಸರ್ಕಾರ ಹಿಂಪಡೆದಿತ್ತು.[ವಿವರ ಇಲ್ಲಿ ಓದಿ]

English summary
Chennai: The BJP's state unit took up with Centre the issue of alleged imposition of Hindi through commercial broadcast in state-run All India Radio (AIR).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X