ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷ ಇ ಮಧುಸೂದನ್ ಉಚ್ಚಾಟಿಸಿದ ಎಐಎಡಿಎಂಕೆ

ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದೆ. ಎಐಎಂಡಿಎಕೆ ಅಧ್ಯಕ್ಷ ಇ ಮಧುಸೂದನ್ ಅವರ ಅಧ್ಯಕ್ಷ ಸ್ಥಾನ ಹಾಗೂ ಪ್ರಾಥಮಿಕ ಸದಸ್ಯತ್ವವನ್ನು ಕಿತ್ತುಕೊಳ್ಳಲಾಗಿದೆ.

By Mahesh
|
Google Oneindia Kannada News

ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದೆ. ಎಐಎಂಡಿಎಕೆ ಅಧ್ಯಕ್ಷ ಇ ಮಧುಸೂದನ್ ಅವರ ಅಧ್ಯಕ್ಷ ಸ್ಥಾನ ಹಾಗೂ ಪ್ರಾಥಮಿಕ ಸದಸ್ಯತ್ವವನ್ನು ಕಿತ್ತುಕೊಳ್ಳಲಾಗಿದೆ.

ಎಐಎಡಿಎಂಕೆ ಅಧ್ಯಕ್ಷರಾಗಿ ಕೆಎ ಸೆಂಗೊಟ್ಟಯನ್ ಅವರನ್ನು ನೇಮಿಸಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಶುಕ್ರವಾರ (ಫೆಬ್ರವರಿ 10) ಮಧ್ಯಾಹ್ನ ಘೋಷಿಸಿದ್ದಾರೆ. [ಶಶಿಕಲಾಗೆ ಸುಪ್ರೀಂಕೋರ್ಟಿನಿಂದ ಸಿಕ್ತು ತಾತ್ಕಾಲಿಕ ನೆಮ್ಮದಿ]

AIADMK removes president and expels E.Madusudhan

'ಜನಾದೇಶಕ್ಕೆ ಮಣಿದು ನಾನು ರಾಜೀನಾಮೆ ಹಿಂಪಡೆಯುತ್ತೇನೆ' ಹೇಳಿರುವ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಬೆನ್ನ ಹಿಂದೆ ಹಿರಿಯ ನಾಯಕ ಮಧುಸೂದನ್ ನಿಂತಿದ್ದರು. ಶಶಿಕಲಾ ಅವರು ಡಿಸೆಂಬರ್ ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಫೆಬ್ರವರಿಯಲ್ಲಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಈಗ ನಿಯೋಜಿತ ಸಿಎಂ ಆಗುತ್ತಿರುವುದು ಷಡ್ಯಂತ್ರದ ಭಾಗವಾಗಿದೆ.[ಮುಖ್ಯಮಂತ್ರಿ ಗಾದಿಗೆ ಶಶಿಕಲಾ ಹಾದಿಯಲ್ಲಿ 3 ಮುಳ್ಳು!]

ಶಶಿಕಲಾ ಅವರು ಪ್ರಧಾನ ಕಾರ್ಯದರ್ಶಿಯಾಗಲು ಅರ್ಹತೆ ಹೊಂದಿಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಹೊಂದದೆ ಕಳೆದ ಐದು ವರ್ಷಗಳಿಂದ ಪಕ್ಷದ ಸಭೆಗಳಲ್ಲಿ ಕಾಣಿಸಿಕೊಳ್ಳದೆ ಏಕಾಏಕಿ ಪಕ್ಷದ ಅಧಿನಾಯಕಿಯಾಗಿರುವುದು ನಿಯಮ ಬಾಹಿರ ಎಂದು ಮಧುಸೂದನ್ ಹೇಳಿದ್ದರು. ಇದಾದ ಬಳಿಕ ಶಶಿಕಲಾ ಪರ ಅಧಿಕಾರಿಗಳು ಇ ಮಧುಸೂದನ್ ಅವರನ್ನೇ ಪಕ್ಷದಿಂದ ಹೊರ ಹಾಕಿದ್ದಾರೆ.

English summary
E.Madusudhanan removed from his post as presidium chairman and from primary membership of party.KA Sengottayan appointed as Presidium Chairman of the party: AIADMK
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X