ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ಪಾಕಿಗಳ ವಶದಲ್ಲಿ ಎಐಎಡಿಎಂಕೆ ವೆಬ್ ತಾಣ

By Mahesh
|
Google Oneindia Kannada News

ಚೆನ್ನೈ, ನ.3: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಪ್ರಮುಖ ರಾಜಕೀಯ ಪಕ್ಷ ಎಐಎಡಿಎಂಕೆ ವೆಬ್ ತಾಣ ಇನ್ನೂ ಅತಿಕ್ರಮಿಗಳ ವಶದಲ್ಲೇ ಇದೆ. ಶನಿವಾರ ಪಾಕಿಸ್ತಾನ ಮೂಲದ ಹ್ಯಾಕರ್ಸ್ ಕೈ ವಶವಾಗಿದ್ದ ವೆಬ್ ತಾಣ ಇನ್ನೂ ತಮಿಳರ ವಶಕ್ಕೆ ಸಿಕ್ಕಿಲ್ಲ.

ನಿಮ್ಮ ಬ್ರೌಸರ್ ನಲ್ಲಿ ನಿನ್ನೆ ದಿವಸ www.aiadmkallindia.org ವೆಬ್ ತಾಣಕ್ಕೆ ಭೇಟಿ ನೀಡಿದ್ದರೆ 'HACKED BY H4$N4!N H4XOR' and 'Islam Zindabad, Long Live Muslims, Pakistan Zindabad.' ಎಂಬ ವಾಕ್ಯಗಳಿದ್ದ ಕಪ್ಪು ಪರದೇ ಮಾತ್ರ ಕಾಣಿಸುತ್ತಿತ್ತು. ಇದೇ ರೀತಿ ಜಯಲಲಿತಾ ಅವರ ಒಡೆತನದ ಟಿವಿ ವಾಹಿನಿ www.jayatv.tv ವೆಬ್ ತಾಣ ಕೂಡಾ ಹ್ಯಾಕ್ ಆಗಿತ್ತು.

ಇದರ ಜತೆಗೆ ಹ್ಯಾಕ್ ಮಾಡಲಾಗಿದ್ದ ವೆಬ್ ತಾಣಗಳಲ್ಲಿ ಸಂದೇಶದ ಜತೆಗೆ ಪಾಕಿಸ್ತಾನಿ ಸಂಗೀತ ಕೇಳಿ ಬರುತ್ತಿತ್ತು. ಅದರೆ, ಈ ಬಗ್ಗೆ ಜಯಲಲಿತಾ ಅವರಾಗಲಿ, ಪಕ್ಷದ ವಕ್ತಾರರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದುರಂತವೆಂದರೆ ಎಂಜಿ ರಾಮಚಂದ್ರನ್ ಅವರು ಸ್ಥಾಪಿಸಿದ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಅಧಿಕೃತ ವೆಬ್ ತಾಣದ ಖಾತೆಯನ್ನು ಉಳಿಸಿಕೊಳ್ಳುವಲ್ಲೂ ವಿಫಲರಾಗಿದ್ದರು. ಎರಡೂ ವೆಬ್ ತಾಣಗಳ ಖಾತೆ ಬಂದ್ ಆಗಿವೆ.

AIADMK websites hacked

ವರ್ಷದ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಅಧಿನಾಯಕಿ ಜಯಲಲಿತಾ ಅವರಿಗೆ ಜೀವ ಬೆದರಿಕೆ ಇಮೇಲ್ ಬಂದಿತ್ತು.

ಚಿಲ್ಲರೆ ವ್ಯಾಪಾರಿಗಳ ಪರ ನಿಂತಿದ್ದ ಜಯಲಲಿತಾ ಅವರು ವಿದೇಶಿ ನೇರ ಬಂಡವಾಳ(ಎಫ್ ಡಿಐ) ಹೂಡಿಕೆ ವಿರುದ್ಧ ಪ್ರತಿಭಟಿಸಿದ್ದರು. ಜಯಲಲಿತಾ, ನರೇಂದ್ರ ಮೋದಿ ಸೇರಿದಂತೆ ದೇಶದ ಪ್ರಮುಖ ನಾಯಕರ ಮೇಲೆ ಉಗ್ರರು ಕಣ್ಣಿಟ್ಟಿರುವ ವಿಷಯವನ್ನು ಗುಪ್ತಚರ ಇಲಾಖೆ ಬಹಿರಂಗ ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಅಧಿಕೃತ ಖಾತೆಗಳನ್ನು ಹ್ಯಾಕ್ ಮಾಡಿದ್ದೇವೆ ಎಂದು ಸಿರಿಯನ್ ಎಲೆಕ್ಟ್ರಾನಿಕ್ ಆರ್ಮಿ(SEA) ಹೇಳಿಕೊಂಡಿತ್ತು.ಅದೇ ರೀತಿ ಭಾರತೀಯ ರಾಜಕೀಯ ನಾಯಕ ವಿರುದ್ದ ಕೂಡಾ ಅನೇಕ ಇ-ಉಗ್ರರು ದಾಳಿ ನಡೆಸುತ್ತಲೇ ಇದ್ದಾರೆ. ಮುಸ್ಲಿಂ ವಿರೋಧಿ ನೀತಿ ಅನುಸರಿಸುವವರ ವಿರುದ್ಧ ಸೇಡಿನ ಕ್ರಮ ಇದಾಗಿದೆ ಎನ್ನಲಾಗಿದೆ.

English summary
The official website of AIADMK, the ruling party in Tamil Nadu, was hacked Last day (Nov.3). There was reaction from the party or the TV channel. Now AIADMK website account also suspended.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X