ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳಿತಪ್ಪಿದ ಕನ್ಯಾಕುಮಾರಿ-ಬೆಂಗಳೂರು ರೈಲು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಚೆನ್ನೈ, ಫೆಬ್ರವರಿ 05 : ಕನ್ಯಾಕುಮಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ರೈಲು ತಮಿಳುನಾಡಿನ ಜೋಲಾರ್ ಪೇಟ್ ಸಮೀಪ ಹಳಿ ತಪ್ಪಿದೆ. ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಕನ್ಯಾಕುಮಾರಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ 5ಬೋಗಿಗಳು ಶುಕ್ರವಾರ ಮುಂಜಾನೆ 4.30ರ ಸುಮಾರಿಗೆ ಹಳಿ ತಪ್ಪಿವೆ. 1 ಬೋಗಿ ಸಂಪೂರ್ಣವಾಗಿ ಜಖಂಗೊಂಡಿದ್ದು, 13 ಪ್ರಯಾಣಿಕರು ಅಪಘಾತದಲ್ಲಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ರೈಲ್ವೆ ಪ್ರಯಾಣ ದರ ತುಸು ದುಬಾರಿ]

chennai

2 ರೈಲುಗಳ ಸಂಚಾರ ರದ್ದು : ರೈಲು ಅಪಘಾತದಿಂದಾಗಿ ಬೆಂಗಳೂರು-ಚೈನ್ನೈ ಮಾರ್ಗದಲ್ಲಿನ ರೈಲುಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಮಾರ್ಗದ ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಬೃಂದಾವನ ಎಕ್ಸ್‌ಪ್ರೆಸ್ ಮತ್ತು ಚೆನ್ನೈ-ಬೆಂಗಳೂರು ನಡುವಿನ ಡಬ್ಬಲ್ ಡೆಕ್ಕರ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. [ಮೈಸೂರು-ಚೆನ್ನೈ ನಡುವೆ ಸೆಮಿ ಸ್ಪೀಡ್ ರೈಲು ಸಂಚಾರ]

ರೈಲ್ವೆ ಹಳಿಗಳಲ್ಲಿ ಬಿರುಕು ಉಂಟಾಗಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸುರಕ್ಷಿತವಾಗಿರುವ ಪ್ರಯಾಣಿಕರನ್ನು ಬೆಂಗಳೂರಿಗೆ ತಲುಪಿಸಲು ರೈಲ್ವೆ ಇಲಾಖೆಯೇ ವ್ಯವಸ್ಥೆ ಮಾಡಿದೆ. ರೈಲು ಹಳಿ ತಪ್ಪಿದ್ದರಿಂದ ಈ ಮಾರ್ಗದಲ್ಲಿನ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

English summary
5 coaches of a Kanyakumari-Bengaluru Island Express train derailed near Jolarpet, Tamil Nadu on Friday morning around 4.30 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X