ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿಯ ಪತ್ತೆ ಹಚ್ಚಿತು ಟ್ಯಾಟು

By Vanitha
|
Google Oneindia Kannada News

ನಾಗಪಟ್ಟಿನಂ, ಡಿಸೆಂಬರ್, 10: ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಿಂದ ನಾಪತ್ತೆಯಾದ ತಾಯಿ, ಸ್ನೇಹಿತರು ಸಿಕ್ಕಿದ್ದಾರೆ, ಪೊಲೀಸರು ಕಳ್ಳರನ್ನು ಹಿಡಿದಿದ್ದಾರೆ. ಕಳುವಾದ ವಸ್ತುಗಳು ದೊರಕಿವೆ. ಇದೀಗ ಚೆನ್ನೈ ಜಲಪ್ರಳಯದಲ್ಲಿ ಸಿಲುಕಿದ್ದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದ ಸಂಬಂಧಿಕರಿಗೆ ಆತನ ಬಗ್ಗೆ ಮಾಹಿತಿ ದೊರೆತಿದೆ.

ತಾರಾಂಗಮ್ ಬಾಡಿ ಗ್ರಾಮಪಂಚಾಯತಿ ಕೌನ್ಸಿಲರ್ ಫೇಸ್ ಬುಕ್ ನಲ್ಲಿ ಹಾಕಿದ ಮಾಹಿತಿಯಿಂದಾಗಿ ಚೆನ್ನೈ ಪ್ರವಾಹದಲ್ಲಿ ಸಿಲುಕಿ ಸತ್ತ ವ್ಯಕ್ತಿಯ ಮೃತದೇಹವನ್ನು ಆತನ ಸಂಬಂಧಿಕರು ಗುರುತಿಸಿದ್ದು, ಆತನ ನಿರೀಕ್ಷೆಯಲ್ಲಿದ್ದ ಕುಟುಂಬದವರಿಗೆ ಇದೀಗ ದಿಕ್ಕು ತೋಚದಂತಾಗಿದೆ.[ತಾಯಿ ಶವದ ಮುಂದೆ 20 ಗಂಟೆ ಕೂತಿದ್ದ ಮಗಳು]

3 tatoo and face book helps identify chennai flood victims body

ಚೆನ್ನೈ ಸಮೀಪದ ತಾರಾಂಗಮ್ ಬಾಡಿ ಗ್ರಾಮಪಂಚಾಯತಿ ಕೌನ್ಸಿಲರ್ ಎಂ. ಅರುಣ್ ಕುಮಾರ್ ಅವರು ಎದೆ, ಬಲಭುಜ ಹಾಗೂ ಕೈ ಮೇಲಿರುವ ಮೂರು ಟ್ಯಾಟುಗಳ ಫೋಟೋ ತೆಗೆದು ಇವರು ತಮಿಳುನಾಡಿನ ಪೊರಯಾರ್ ಸರ್ಕಾರಿ ಆಸ್ಪತ್ರೆಯಲ್ಲಿದ್ದಾರೆ ಎಂದು ಫೇಸ್ ಬುಕ್ ಗೆ ಹಾಕಿದ್ದಾರೆ.

ಅರುಣ್ ಕುಮಾರ್ ಹಾಕಿದ ಫೋಟೋ ಹಲವು ಜನರಿಗೆ ಶೇರ್ ಆಗಿ ಸಂಬಂಧಿಕರಿಗೆ ತಲುಪಿದೆ. ಬಳಿಕ ಅರುಣ್ ಕುಮಾರ್ ಅವರನ್ನು ಸಂಜಯ್ ಎಂಬ ವ್ಯಕ್ತಿ ಭೇಟಿ ಮಾಡಿ ಸಾವನ್ನಪ್ಪಿರುವ ವ್ಯಕ್ತಿ ಜೆಯರಾಜ್(35), ಇವರು ಆಟೋ ಡ್ರೈವರ್ ಆಗಿದ್ದು, ಸುಂದನ್ದೀರ ನಗರದಲ್ಲಿ ವಾಸವಾಗಿದ್ದರು ಎಂದು ಹೇಳಿದ್ದಾರೆ.[ಭರ್ತಿ ಮಳೆಯಲ್ಲೂ ಹಾಲು ಹಾಕಲು ಬಂದ ಮಹಿಳೆಗೆ ಸಲಾಂ!]

ಜೆಯರಾಜ್ ಬದುಕಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಆತನ ಕುಟುಂಬದವರು ಥೌಸೆಂಡ್ ಲೈಟ್ ಪೊಲೀಸ್ ಠಾಣೆಯಲ್ಲಿ ಕಳುವಾಗಿರುವುದರ ಬಗ್ಗೆ ದೂರು ದಾಖಲಿಸಿದ್ದರು. ಜೆಯರಾಜ್ ಸಿಕ್ಕಿದ ವಿಚಾರ ತಿಳಿದ ಆತನ ಹೆಂಡತಿ, ಸಂಬಂಧಿಕರು ಆತನನ್ನು ನೋಡಲು ಆಗಮಿಸಿದರು.

ಸ್ಥಳಕ್ಕೆ ಆಗಮಿಸಿದ ಹೆಂಡತಿಯು 'ಎದೆಯ ಮೇಲಿರುವುದು ನನ್ನ ಹೆಸರಿನ ಟ್ಯಾಟು, ಕೈ ಮೇಲೆ ದೊಡ್ಡ ಮಗನ ಹೆಸರು, ಭುಜದ ಮೇಲೆ ಇನ್ನೊಬ್ಬ ಮಗುವಿನ ಹೆಸರು ಹಾಕಿಸಿಕೊಂಡಿದ್ದರು' ಎಂದು ಸತ್ತಿರುವ ಜೆಯರಾಜ್ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಾ ಟ್ಯಾಟುವಿನ ಸಹಾಯದಿಂದ ಮೃತದೇಹ ಗುರುತಿಸಿದರು.

English summary
3 tatoo and face book helps identify chennai flood victims body. M. Arun kumar, Councillor of Nagapattinam, Chennai had taken 3 tatoos photos of the body and facebook page. The photo had been shared. A victims relative sanjay caontacted arunkumar. He is identified that 'He is jeyaraj, My relative'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X