ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿ ಬೇಟೆಗಾರರ ಗುಂಡೇಟಿಗೆ ಗಂಡು ಹುಲಿ ಬಲಿ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಆಗಸ್ಟ್ 15: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಗಂಡು ಹುಲಿಯ ಕಳೇಬರ ಪತ್ತೆಯಾಗಿದ್ದು, ಕಳ್ಳಬೇಟೆಗಾರರು ಗುಂಡಿಕ್ಕಿ ಹತ್ಯೆಗೈದಿರುವುದು ದೃಢವಾಗಿದೆ.

ಮದ್ದೂರು ಅರಣ್ಯ ವಲಯದ ಬರಗಿ ಶಾಖೆಯ ಹೊಂಗಳ್ಳಿ ಗಸ್ತು ವಲಯದಲ್ಲಿರುವ ಸೋಮೇಗೌಡನಕಟ್ಟೆ ಹಳ್ಳದ ಬಳಿ ಭಾನುವಾರ ಬೆಳಗ್ಗೆ ಹುಲಿಯ ಕಳೇಬರ ಪತ್ತೆಯಾಗಿದೆ. 11 ರಿಂದ 12 ವರ್ಷ ಪ್ರಾಯದ ಭಾರೀ ಗಾತ್ರದ ಗಂಡು ಹುಲಿ ಇದಾಗಿದ್ದು, ಹೊಂಗಳ್ಳಿ ಗಸ್ತಿನ ದೋಣಿ ಗಲ್ಲಾರೆ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಗೆ ಹುಲಿಯ ಕಳೇಬರ ಮೊದಲು ಕಂಡು ಬಂದಿದೆ.

Tiger found shot dead at Bandipur national park area

ಉದ್ದೇಶಿತ ಆನೆ ಪಥದ 10 ಮೀಟರ್ ಮತ್ತು ಆನೆ ಪಥ ರಸ್ತೆಯ 50 ಮೀಟರ್ ಅಂತರದಲ್ಲಿ ಹುಲಿಯ ಕಳೇಬರ ಹಳ್ಳದ ನೀರಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದ ವೈದ್ಯಾಧಿಕಾರಿ ನಾಗರಾಜು ಮತ್ತು ಮೊಬೈಲ್ ವಾಹನದ ವೈದ್ಯಾಧಿಕಾರಿ ಶಂತನು ಅವರು ಹುಲಿ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದರು.

ಬೇಟೆಗಾರರು ಶನಿವಾರ ರಾತ್ರಿ ತುಂಬಾ ಹತ್ತಿರದಿಂದ ಗುಂಡು ಹಾರಿಸಿದ್ದು, ಹುಲಿಯ ದೇಹದ ಬಲಭಾಗದಿಂದ ಗುಂಡು ಪ್ರವೇಶಿಸಿ, ಬೆನ್ನುಮೂಳೆಯ ಮೂಲಕ ಎಡಭಾಗದಿಂದ ಹಾದುಹೋಗಿದೆ. ಆದರೆ ಹುಲಿಯ ಎಲ್ಲ ಹಲ್ಲುಗಳು ಸವೆದಿವೆ ಮತ್ತು ಅಂಗಾಂಗಳೊಂದಿಗೆ 18 ಉಗುರುಗಳು ಸುರಕ್ಷಿತವಾಗಿವೆ. ಇದನ್ನು ಗಮನಿಸಿದರೆ ಹುಲಿಯನ್ನೇ ಉದ್ದೇಶಪೂರ್ವಕವಾಗಿ ಹತ್ಯೆಗೈದಿಲ್ಲ. ಬೇರೆ ಪ್ರಾಣಿಯ ಬೇಟೆಗೆ ಆಗಮಿಸಿರುವ ಬೇಟೆಗಾರರು ಕತ್ತಲಿನಲ್ಲಿ ಹುಲಿಯನ್ನು ಕೊಂದಿರುವ ಶಂಕೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ವಲಯ ಅರಣ್ಯಾಧಿಕಾರಿ ಅಭಿಲಾಷ್ ಅವರಿಗೆ ಸೂಚಿಸಿದ್ದಾರೆ. ಹುಲಿಯ ಕಳೇಬರವನ್ನು ಸೋಮೇಗೌಡನಕಟ್ಟೆ ಹಳ್ಳದಲ್ಲಿ ಸಂಸ್ಕಾರ ಮಾಡಲಾಗಿದೆ.

Tiger found shot dead at Bandipur national park area

ರಾಣಾನಿಂದ ಪರಿಶೀಲನೆ : ಬಂಡೀಪುರ ರಾಷ್ಟ್ರೀಯ ಉದ್ಯಾನದ ತನಿಖಾ ತಂಡದ ಶ್ವಾನ ರಾಣಾನನ್ನು ಬೆಳಗ್ಗೆ ಮತ್ತು ಮಧ್ಯಾಹ್ನದ ನಂತರ ಎರಡು ಬಾರಿ ಹುಲಿಯು ಪತ್ತೆಯಾದ ಸ್ಥಳದಲ್ಲಿ ಬಿಡಲಾಯಿತು. ಆದರೆ ಯಾವುದೇ ಮಹತ್ವದ ಸಾಕ್ಷ್ಯಗಳು ಲಭ್ಯವಾಗಲಿಲ್ಲ. ಎಸಿಎಫ್ ಪೂವಯ್ಯ, ಮೂಲೆಹೊಳೆ ಆರ್‍ಎಫ್‍ಓ ನಟರಾಜ್, ಡಿಆರ್‍ಎಫ್‍ಓ ಗಳಾದ ಸ್ವಾಮಿ, ರೆಡ್ಡಿ ಅವರ ತಂಡ ಸುತ್ತಲಿನ ಪ್ರದೇಶವನ್ನು ಜಾಲಾಡುತ್ತಾ ತನಿಖೆ ನಡೆಸುತ್ತಿದೆ.

ವಿಮಾನ ನಿಲ್ದಾಣ ನಿರ್ಗಮನ ವಿಭಾಗದ ಟರ್ಮಿನಲ್ 8ರಲ್ಲಿ ಭಾನುವಾರ ಸ್ಥಳೀಯ ಕಾಲಮಾನ ರಾತ್ರಿ 9.30ರಲ್ಲಿ ಗುಂಡು ಹಾರಿಸಿದ ಶಬ್ದ ಕೇಳಿಸಿತು. ಮುಂಜಾಗ್ರತಾ ಕ್ರಮವಾಗಿ ಟರ್ಮಿನಲ್ ತೆರವು ಮಾಡಿದೆವು ಎಂದು ವಿಮಾನ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮೊದಲಿಗೆ ವರದಿಯಾಗಿತ್ತು.

ಮತ್ತೊಮ್ಮೆ ಗುಂಡಿನ ಶಬ್ದ ಕೇಳಿಬಂತು ಎಂಬ ಕಾರಣಕ್ಕೆ ರಾತ್ರಿ 10.15ರ ಹೊತ್ತಿಗೆ ಟರ್ಮಿನಲ್ 1 ಸಹ ಮುಚ್ಚಲಾಯಿತು ಮತ್ತು ಸಮೀಪದಲ್ಲಿರುವ್ ವಾನ್ ವ್ಯಾಕ್ ಎಕ್ಸ್ ಪ್ರೆಸ್ ರಸ್ತೆ ಸಹ ಬಂದ್ ಮಾಡಲಾಯಿತು ಎಂದು ವಿಮಾನ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

English summary
A Tiger shot dead at somegowdanakatte, Bandipur national park area. Tiger aged between 11-12 years, experts suspecting, hunters killed tiger unintentionally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X