ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿ 9 ಹುಲಿ 2 ಚಿರತೆ ಪ್ರತ್ಯಕ್ಷ!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಗುಂಡ್ಲುಪೇಟೆ, ಅಕ್ಟೋಬರ್ 4: ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಫಾರಿ ವಲಯದಲ್ಲಿ ಒಂದೇ ದಿನ 9 ಹುಲಿ ಮತ್ತು 2 ಚಿರತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದು, ಪ್ರವಾಸಿಗರು ಅವುಗಳ ಚಿತ್ರಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಖುಷಿಪಟ್ಟರು.

ತಾಲೂಕಿನ ಬಂಡೀಪುರ ಅಭಯಾರಣ್ಯಕ್ಕೆ ವನ್ಯ ಪ್ರಾಣಿಗಳನ್ನು ನೋಡುವ ಸಲುವಾಗಿ ಪ್ರವಾಸಿಗರು ಬರುತ್ತಾರೆ. ಕೆಲವೊಮ್ಮೆ ಪ್ರಾಣಿಗಳು ಕಾಣಿಸುವುದೇ ಇಲ್ಲ. ಆದರೆ ಭಾನುವಾರ ಪ್ರವಾಸಿಗರಿಗೆ ಅದೃಷ್ಟದ ದಿನವಾಗಿತ್ತು. ಹೀಗಾಗಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ಹುಲಿಗಳು ಸಫಾರಿ ವಲಯದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.['ಜಂಗಲ್ ಡೈರಿ'-ಇದು ಗಗನ್ ನ ಕನಸಿಗೆ ದಾರಿ]

Tiger

ಸಫಾರಿ ವಲಯ ಪ್ರದೇಶಗಳಾದ ಮೂರ್ಕೆರೆ, ಸೂಳೆಕಟ್ಟೆ, ಕಡಮ್ಮತ್ತೂರುಕಟ್ಟೆ, ನಂಜಾಪುರಕೆರೆಗಳಲ್ಲಿ ಬೆಳಗ್ಗೆ 6ರ ಸಮಯದಲ್ಲಿ ಸಫಾರಿಗೆ ತೆರಳುವಾಗ ಹುಲಿ ಮತ್ತು ಚಿರತೆಗಳು ಕಾಣಿಸಿಕೊಂಡಿವೆ. ಇದರಿಂದ ಪ್ರವಾಸಿಗರು ಖುಷಿ ಪಟ್ಟು, ಸಂಜೆ ಮತ್ತೆ ಸಫಾರಿಗಾಗಿ ಕಾದಿದ್ದಾರೆ. ಆಗಲೂ ಹುಲಿ ಮತ್ತು ಎರಡು ಚಿರತೆ ಕಾಣಿಸಿಕೊಂಡಿವೆ.

ಸಾಮಾನ್ಯವಾಗಿ ಸಫಾರಿಗೆ ತೆರಳುವ ಪ್ರವಾಸಿಗರು ಅಥವಾ ಪರಿಸರಪ್ರಿಯರು ದಿನಗಟ್ಟಲೆ ಕಾದುಕುಳಿತರೂ ಹುಲಿ ಅಥವಾ ಚಿರತೆ ಕಾಣಸಿಗುವುದಿಲ್ಲ. ಇದರಿಂದ ಸಫಾರಿಗೆ ತೆರಳುವವರು ನಿರಾಸೆ ವ್ಯಕ್ತಪಡಿಸುತ್ತಿದ್ದರು.[ಬೆರಗು ಮೂಡಿಸುವ ಕಂಬಳಿಹುಳುಗಳ ಮೋಹಕ ಲೋಕ]

ಬಂಡೀಪುರದ ಅಚ್ಚುಮೆಚ್ಚಿನ ಹುಲಿ ಪ್ರಿನ್ಸ್ ಕೆಲ ವರ್ಷಗಳಿಂದ ಪ್ರವಾಸಿಗರಿಗೆ ರಸದೌತಣ ನೀಡುತ್ತಿದೆ. ಪ್ರಿನ್ಸ್ ನೋಡಲು ಹಲವರು ಹಾತೊರೆದು ಕಾಣ ಸಿಗದಿದ್ದಾಗ ನಿರಾಸೆಯಿಂದ ವಾಪಸಾಗುತ್ತಿದ್ದರು. ಆದರೆ ಭಾನುವಾರ ಪ್ರಿನ್ಸ್ ಜತೆಗೆ 8 ಹುಲಿಗಳು ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

English summary
Bandipur tiger reserve visitors excited on Sunday safaris. Because nine tigers and two leopards sighted. It is very fortunate to sight tiger in Bandipur. Tourists had taken photographs and went to repeated safaris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X