ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಲಮುದುರಿದ ಪ್ರಿನ್ಸ್, ಬಂಡೀಪುರದಲ್ಲೀಗ ಮಾದೇಶನ ಹವಾ!

ಬಂಡಿಪುರ ಅರಣ್ಯದಲ್ಲಿ ಹುಲಿ ಪ್ರಿನ್ಸ್ ನಿಂದಲೇ ಜನ್ಮ ಪಡೆದ ಮಾದೇಶ ಈಗ ಬಲಿಷ್ಠನಾಗಿದ್ದು, ಆತನ ಓಡಾಟ ಜಾಸ್ತಿಯಾಗಿದೆ, ಪ್ರಿನ್ಸ್ ಬಾಲ ಮುದುರಿಕೊಂಡು ಪಲಾಯನ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಫೆಬ್ರವರಿ 10: ಬಂಡೀಪುರಕ್ಕೆ ಸಫಾರಿಗೆ ತೆರಳಿದವರಿಗೆ ಪ್ರಿನ್ಸ್ ಹುಲಿ ಪ್ರಮುಖ ಆಕರ್ಷಣೆಯಾಗಿತ್ತು. ಈಗ ಮಾದೇಶನ ಹವಾ ಶುರುವಾಗಿದೆ. ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾ ಪ್ರವಾಸಿಗರ ಗಮನಸೆಳೆಯುತ್ತಿದ್ದಾನೆ.

ಬಂಡೀಪುರ, ಗೋಪಾಲಸ್ವಾಮಿಬೆಟ್ಟ ವಲಯ ಹಾಗೂ ಮಧುಮಲೈ ಅರಣ್ಯ ಪ್ರದೇಶದವರೆಗೂ ನಿರ್ಭಯವಾಗಿ ಸುತ್ತಾಡುತ್ತಿದ್ದ ಪ್ರಿನ್ಸ್ ಈಗ ಮೊದಲಿನಂತೆ ಕಂಡು ಬರುತ್ತಿಲ್ಲ. ಬದಲಾಗಿ ಮಾದೇಶ ಮತ್ತು ಇತರೆ ಹುಲಿಗಳು ಕಂಡು ಬರುತ್ತಿವೆ.

ಪ್ರಿನ್ಸ್ ನಿಂದಲೇ ಜನ್ಮ ಪಡೆದ ಮಾದೇಶ ಈಗ ಬಲಿಷ್ಠನಾಗಿದ್ದು, ಆತನ ಓಡಾಟ ಜಾಸ್ತಿಯಾಗಿದೆ, ಪ್ರಿನ್ಸ್ ಬಾಲ ಮುದುರಿಕೊಂಡು ಪಲಾಯನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಮಯಗಳ ಹಿಂದೆ ಇವರಿಬ್ಬರಿಗೂ ಕಾದಾಟ ನಡೆದಿತ್ತು. ಆಗ ಪ್ರಿನ್ಸ್‍ಗೆ ಗಾಯಗಳಾಗಿತ್ತು. ಮಾದೇಶ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು ಆಗಾಗ್ಗೆ ಪ್ರವಾಸಿಗರ ಕಣ್ಣಿಗೆ ಬೀಳುತ್ತಿದ್ದಾನೆ.[ಮತ್ತೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದವು ಮೂರು ಹುಲಿ]

Madesha

ಸುಮಾರು 10 ವರ್ಷ ಪ್ರಾಯದ ಪ್ರಿನ್ಸ್‍ಗೆ ಮೊದಲಿನಂತೆ ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗುತ್ತಿಲ್ಲ ಕಾರಣ ಶಕ್ತಿ ಕುಂದುತ್ತಿದೆ. ಜತೆಗೆ ಹಲ್ಲುಗಳು ಸವೆಯುತ್ತಿದೆ. ಬಲಗಾಲಿನಲ್ಲಿ ದೊಡ್ಡ ಗಂಟು ಕಾಣಿಸಿಕೊಂಡಿದೆ. ನಾಲಿಗೆಯಲ್ಲಿ ಎರಡು ಸೀಳಿದ್ದು ಅದು ಪ್ರಿನ್ಸ್‍ನ ವಿಶೇಷವಾಗಿದೆ.

ಬಂಡೀಪುರದ ಪೊದೆಗಳಲ್ಲಿ, ರಸ್ತೆ ಇನ್ನಿತರ ಕಡೆಗಳಲ್ಲಿ ಅಪರೂಪಕ್ಕೆ ದರ್ಶನ ನೀಡುವ ಪ್ರಿನ್ಸ್ ಕೂಡ ಸೊರಗಿದ್ದಾನೆ ಎನ್ನಲಾಗುತ್ತಿದೆ. ಅರಣ್ಯದ ನಿರ್ದಿಷ್ಟ ಪ್ರದೇಶದಲ್ಲಿ ಅಡ್ಡಾಡುವ ಈತ ಕಾಣಿಸಿಕೊಳ್ಳದಿದ್ದರೆ ಸಫಾರಿಗೆ ತೆರಳಿದವರಿಗೆ ನಿರಾಸೆಯಾಗುತ್ತದೆ. ಕೆಲವೊಮ್ಮೆ ಕಾಣೆಯಾಗುವುದೂ ಇದೆ.

ಕಳೆದ ವರ್ಷದ ಮೇ ತಿಂಗಳಲ್ಲಿ ಪ್ರಿನ್ಸ್ ಕೆಲವು ದಿನಗಳ ಕಾಲ ಕಣ್ಣಿಗೆ ಬಿದ್ದಿರಲಿಲ್ಲ. ಈ ಸಂದರ್ಭ 4 ತಂಡ ರಚನೆ ಮಾಡಿ ಹುಡುಕಾಟ ನಡೆಸಲಾಗಿತ್ತು. ಆಗ ಇದ್ದಕ್ಕಿದ್ದಂತೆ ಮೂಲಾಪುರ ಕೆರೆಯ ಬಳಿ ಪ್ರತ್ಯಕ್ಷವಾಗಿ ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿತ್ತು. [ನಾಗರಹೊಳೆಯಲ್ಲಿ 9 ಹುಲಿಗಳನ್ನು ಕಂಡ ಆ ಕಣ್ಣುಗಳೇ ಧನ್ಯ]

ಪ್ರವಾಸಿಗರಿಗೆ ನಿರಾಸೆ
ಬಂಡೀಪುರ ಉದ್ಯಾನದಲ್ಲಿ ನೀರು ಮತ್ತು ಆಹಾರದ ಸಮಸ್ಯೆಗಳು ಕಾಣಿಸಿಕೊಂಡಿರುವುದರಿಂದಾಗಿ ಹೆಚ್ಚಿನ ವನ್ಯ ಮೃಗಗಳು ಆಹಾರ ಮತ್ತು ನೀರು ಅರಸಿಕೊಂಡು ಕಬಿನಿ ಹಿನ್ನೀರಿನ ಪ್ರದೇಶದತ್ತ ತೆರಳುತ್ತಿವೆ ಎನ್ನಲಾಗುತ್ತಿದ್ದು, ಪ್ರಾಣಿಗಳನ್ನು ನೋಡಲೆಂದು ಬರುವ ಪ್ರವಾಸಿಗರಿಗೆ ಇದರಿಂದ ನಿರಾಸೆಯಾಗುತ್ತಿದೆ.

ಜನವರಿ ಮೊದಲ ವಾರದಲ್ಲಿ ಬಂಡೀಪುರದ ರಾಯಭಾರಿ ಪ್ರಿನ್ಸ್ ಸೇರಿದಂತೆ ಹಲವು ಹುಲಿಗಳು ಕಂಡು ಬರುತ್ತಿದ್ದವಾದರೂ ಈಗ ಕಾಣುತ್ತಿಲ್ಲ. ಕೆಲವೇ ಕೆಲವು ಪ್ರಾಣಿಗಳು ಮಾತ್ರ ಕಾಣುತ್ತಿವೆ. ಈಗಾಗಲೇ ಹಲವು ಪ್ರಾಣಿಗಳು ಸರಿಯಾಗಿ ನೀರು, ಆಹಾರ ಸಿಗದೆ ಸೊರಗಿವೆ. ಆಹಾರಕ್ಕಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಹೋಗುವುದು ಅನಿವಾರ್ಯವಾಗುತ್ತಿದೆ. [ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]

English summary
Madesha tiger cited in Bandipur tiger reserve area, Chamarajanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X