ವ್ಯಕ್ತಿಚಿತ್ರ : ಸಜ್ಜನ ರಾಜಕಾರಣಿ ಎಚ್ ಎಸ್ ಮಹದೇವ ಪ್ರಸಾದ್

ಸಹಕಾರ ಮತ್ತು ಸಕ್ಕರೆ ಸಚಿವ ಮಹದೇವ ಪ್ರಸಾದ್ ಅವರು ಚಿಕ್ಕಮಗಳೂರಿನಲ್ಲಿ ಮಂಗಳವಾರ ಬೆಳಗ್ಗೆ (ಜನವರಿ 03) ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಹಾಲಹಳ್ಳಿ ಶೀಕಂಠಶೆಟ್ಟಿ ಮಹದೇವ ಪ್ರಸಾದ್ ಅವರ ಬದುಕಿನ ಹಿನ್ನೋಟ ಇಲ್ಲಿದೆ...

By:
Subscribe to Oneindia Kannada

ಬೆಂಗಳೂರು, ಜನವರಿ 03: ಸಹಕಾರ ಮತ್ತು ಸಕ್ಕರೆ ಸಚಿವ ಮಹದೇವ ಪ್ರಸಾದ್ ಅವರು ಚಿಕ್ಕಮಗಳೂರಿನಲ್ಲಿ ಮಂಗಳವಾರ ಬೆಳಗ್ಗೆ (ಜನವರಿ 03) ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಸುದ್ದಿ ಅವರ ಅಭಿಮಾನಿಗಳು, ಕುಟುಂಬವರ್ಗಕ್ಕೆ ಆಘಾತಕಾರಿ ಸುದ್ದಿಯಾಗಿ ಪರಿಣಮಿಸಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪರಮಾಪ್ತ ಸಹದ್ಯೋಗಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಹಾಲಹಳ್ಳಿ ಶೀಕಂಠಶೆಟ್ಟಿ ಮಹದೇವ ಪ್ರಸಾದ್ ಅವರ ಬದುಕಿನ ಹಿನ್ನೋಟ ಇಲ್ಲಿದೆ...

ಸಚಿವ ಮಹದೇವ ಪ್ರಸಾದ್ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಸಹಕಾರ ಸಾರಿಗೆ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಮಂಗಳವಾರ ಕಾರ್ಯಕ್ರಮಕ್ಕೆ ತೆರಳಬೇಕಿತ್ತು. [ಮಹದೇವ ಪ್ರಸಾದ್ ಹೃದಯಾಘಾತದಿಂದ ನಿಧನ]

ಸೋಮವಾರ ರಾತ್ರಿಯಿಂದ ಚಿಕ್ಕಮಗಳೂರಿನ ಹೊರ ವಲಯದ ಮೂಗ್ತಿಹಳ್ಳಿ ಸಮೀಪದ ಕಾಫಿಡೇ ಒಡೆತನದ ಸೆರಾಯ್ ರೆಸಾರ್ಟ್ ನಲ್ಲಿ ಸಚಿವ ಮಹದೇವ ಪ್ರಸಾದ್ ತಂಗಿದ್ದರು. ಮಂಗಳವಾರ ಬೆಳಗ್ಗೆ ಸಚಿವರು ಕೊಠಡಿಯಿಂದ ಹೊರಬರದಿದ್ದಾಗ, ಆತಂಕಗೊಂಡ ಆಪ್ತರಿಗೆ ಮಹದೇವ ಪ್ರಸಾದ್ ಅವರು ಮೃತಪಟ್ಟಿರುವುದು ಕಂಡು ಬಂದಿದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯಕುಮಾರ್ ಹೇಳಿಕೆ

2016ರಲ್ಲಿ ಸಚಿವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಆದರೆ, ಲವಲವಿಕೆಯಿಂದಲೇ aಇದ್ದರು, ನಮ್ಮ ದುರಾದೃಷ್ಟ ಅವರನ್ನು ಇಷ್ಟು ಬೇಗ ಕಳೆದುಕೊಂಡೆವು, ಪ್ರತಿದಿನ 6 ಗಂಟೆ ಸುಮಾರಿಗೆ ವಾಕಿಂಗ್ ಮಾಡುತ್ತಿದ್ದರು, ಇಂದು ವಾಕಿಂಗ್ ಗೆ ಹೊರ ಬಂದಿರಲಿಲ್ಲ.ಬೆಳಗ್ಗೆ 8:30ಕ್ಕೆ ಸಚಿವರ ಕೊಠಡಿಗೆ ಹೋಗಿ ನೋಡಿದಾಗ ಸಚಿವರು ಮೃತಪಟ್ಟಿರುವುದು ಗೊತ್ತಾಯಿತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯಕುಮಾರ್ ಹೇಳಿದ್ದಾರೆ.

ಹಾಲಹಳ್ಳಿಯಲ್ಲಿ ಜನನ, ಕುಟುಂಬ ಹಿನ್ನಲೆ

* 1958ರ ಆಗಸ್ಟ್ 5ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿ ಹಾಲಹಳ್ಳಿಯಲ್ಲಿ ಜನನ. ಮೈಸೂರಿನ ಕುವೆಂಪು ನಗರದಲ್ಲಿ ನಿವಾಸ.
* ಮೈಸೂರು ವಿಶ್ವವಿದ್ಯಾಲಯದಿಂದ ಎಂಎ (ರಾಜ್ಯಶಾಸ್ತ್ರ)
* ಸಚಿವರು ಪತ್ನಿ ಡಾ.ಗೀತಾ, ಮಗ ಗಣೇಶ್ ಪ್ರಸಾದ್ ಮತ್ತು ಮಗಳು ಹಾಗೂ ಅಳಿಯ ಸೇರಿದಂತೆ ಅಪಾರ ಅಭಿಮಾನಿಗಳನ್ನು, ಅಗಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಒಡನಾಡಿ

* 1994ರಲ್ಲಿ ಜನತಾದಳದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ, ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.
* ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಒಡನಾಡಿ, ದೇವರಾಜ ಅರಸು ಅವರ ಪ್ರಭಾವಕ್ಕೆ ಒಳಗಾಗಿ ರಾಜಕೀಯ ರಂಗ ಪ್ರವೇಶ
* ಮೂರು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಸಿದ್ದರಾಮಯ್ಯರ ಆಪ್ತರಾಗಿದ್ದ ಪ್ರಸಾದ್

* ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತರಾಗಿದ್ದ ಪ್ರಸಾದ್ ಅವರು ಕಾಂಗ್ರೆಸ್‌ ಪಕ್ಷ ಸೇರುವ ಮೊದಲು ಜನತಾದಳದಲ್ಲಿದ್ದರು.
* ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು.
* ಆಹಾರ ಮತ್ತು ನಾಗರಿಕ ಸರಬರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಕಾರ ಮತ್ತು ಸಕ್ಕರೆ ಖಾತೆ ಸಚಿವರಾಗಿದ್ದರು.
* 1999ರಲ್ಲಿ ಜೆಡಿಯು, 2004ರಲ್ಲಿ ಜೆಡಿಎಸ್, 2008 ಮತ್ತು 2013ರಲ್ಲಿ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದರು.
* 1994ರಲ್ಲಿ ಜನತಾದಳದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ, ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.

ಜನಮನ್ನಣೆ ಗಳಿಸಿದ್ದ ರಾಜಕಾರಣಿ

* ಸಂಗಮ ಪ್ರತಿಷ್ಠಾನದ ಅಧ್ಯಕ್ಷರಾಗಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ಉದ್ಯೋಗಮೇಳಗಳನ್ನು ಆಯೋಜಿಸಿ, ಜನಮನ್ನಣೆ ಗಳಿಸಿದ್ದರು.

* ಮಲೆ ಮಹದೇಶ್ವರ ಸ್ವಾಮಿಯ ಪರಮ ಭಕ್ತರಾಗಿದ್ದ ಮಹದೇವ ಪ್ರಸಾದ್ ಅವರು ಮಲೆ ಮಹದೇಶ್ವರ ಪ್ರಾಧಿಕಾರ ರಚನೆ ಮಾಡಿ, ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಒಂದೆನಿಸುವಂತೆ ಮಾಡಿದರು.
* ಮಂಗಳವಾರ ಮಧ್ಯಾಹ್ನದ ವೇಳೆಗೆ ಕುವೆಂಪು ನಗರದ ಅವರ ನಿವಾಸಕ್ಕೆ ಅವರ ಪಾರ್ಥಿವ ಶರೀರವನ್ನು ತರಲಾಗುತ್ತದೆ. ನಂತರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

 

ಭೂ ಹಗರಣ ಆರೋಪ

ಕರ್ನಾಟಕ ಗೃಹ ಮಂಡಳಿ ಬಡವರಿಗೆಂದು ಮೀಸಲಾಗಿಟ್ಟಿದ್ದ ನಿವೇಶನವನ್ನು ಮಹದೇವ ಪ್ರಸಾದ್ ಅಕ್ರಮವಾಗಿ ಖರೀದಿಸಿದ್ದಾರೆ ಎಂಬುದು ಆರೋಪ. ಈ ಕುರಿತು ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಚಾರ್ಜ್ ಶೀಟ್ ಕೂಡಾ ಸಲ್ಲಿಸಲಾಗಿತ್ತು. ಎಸಿಬಿಯಿಂದ ತನಿಖೆ, ಲೋಕಾಯುಕ್ತ ಪೊಲೀಸರಿಂದ ವಿಚಾರಣೆ, ಕೋರ್ಟ್ ಸಮನ್ಸ್ ಹೀಗೆ ಮಹದೇವ ಪ್ರಸಾದ್ ಅವರನ್ನು ಭೂ ಹಗರಣ ಆರೋಪ ಕಾಡಿತ್ತು.

English summary
Halahalli Shreekantha Shetti Mahadeva Prasad Profile: Mahadeva Praasad a five term member of Karnataka Legislative Assembly representing Gundlupet assembly constituency, died of a heart attack on 3 January 2017
Please Wait while comments are loading...