ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿ ಅಕ್ರಮವಾಗಿ ಹರಿಸಿದ್ದ ವಿದ್ಯುತ್ ಸ್ಪರ್ಶಕ್ಕೆ ಹಸು ಬಲಿ

ಜಮೀನಿನ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಕಾರಣ ಮೇವು ಅರಸಿಹೋದ ಹಸು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಈ ಘಟನೆ ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಮಂಗಲ ಗ್ರಾಮದಲ್ಲಿ ನಡೆದಿದೆ.

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಗುಂಡ್ಲುಪೇಟೆ, ಮೇ 24: ಜಮೀನಿನ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಕಾರಣ ಮೇವು ಅರಸಿಹೋದ ಹಸು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಈ ಘಟನೆ ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಮಂಗಲ ಗ್ರಾಮದಲ್ಲಿ ನಡೆದಿದೆ.

ಮಂಗಲ ಗ್ರಾಮದ ನಿವಾಸಿ ತಿಬ್ಬಯ್ಯ ಎಂಬುವರಿಗೆ ಸೇರಿದ ಹಸು ತಂತಿ ಬೇಲಿಗೆ ಹಾಯಿಸಿದ್ದ ಅಕ್ರಮ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಹಸು ಕಳೆದುಕೊಂಡ ರೈತ ತಿಬ್ಬಯ್ಯ ಇದೀಗ ಕಂಗಾಲಾಗಿದ್ದಾರೆ. [ಚಾಮರಾಜನಗರ: ದಕ್ಷ ಅಧಿಕಾರಿ ವರ್ಗಾವಣೆಯಲ್ಲಿ ರಾಜಕೀಯ?]

ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಮಂಗಲ ಗ್ರಾಮದ ತಿಬ್ಬಯ್ಯ ಸಾಕಿದ ಹಸುವನ್ನು ಮೇಯಲು ಬಿಟ್ಟಿದ್ದರು. ಆದರೆ ಅದು ಹಿಂತಿರುಗಿರಲಿಲ್ಲ. ಹೀಗಾಗಿ ಹಸುವನ್ನು ಹುಡುಕಿಕೊಂಡ ತೆರಳಿದ್ದರು. ಈ ವೇಳೆ ಹಸು ಚೆನ್ನೀಕಟ್ಟೆ ಬಳಿ ಕೇರಳ ಮೂಲದ ಬಿಜು ಎಂಬುವರಿಗೆ ಸೇರಿದ ಜಮೀನಿನಲ್ಲಿ ಸತ್ತು ಬಿದ್ದಿರುವುದು ಕಂಡುಬಂದಿದೆ.

ಬಿಜು ಎಂಬುವರು ಕಾಡು ಪ್ರಾಣಿಗಳ ಹಾವಳಿ ತಡೆಯಲು ತಂತಿ ಬೇಲಿಗೆ ಅಕ್ರಮ ವಿದ್ಯುತ್‍ನ್ನು ಹಾಯಿಸಿದ್ದು, ಅದಕ್ಕೆ ಹಸು ಸಿಕ್ಕಿ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಈ ಕುರಿತು ಗುಂಡ್ಲುಪೇಟೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A cow was electrocuted in a farm in Bandipur. Cow belonging to Tibbayya from Mangala village in Bandipur. It is said to be that farm owner attached electric wire illegally to his firm’s fence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X