ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಆಸ್ಪತ್ರೇಲಿ 500, 1000 ನೋಟು ತಗೊಳ್ತಿಲ್ಲ

|
Google Oneindia Kannada News

ಚಾಮರಾಜನಗರ, ನವೆಂಬರ್ 15: ನೋಟು ರದ್ದು ಹಿನ್ನೆಲೆಯಲ್ಲಿ ಪ್ರಮಖ ಆಸ್ಪತ್ರೆಗಳು 500, 1000 ರುಪಾಯಿ ನೋಟು ಪಡೆಯುವುದಿಲ್ಲ ಎಂಬ ನಾಮಫಲಕ ಹಾಕಿರುವುದರಿಂದ ಚಾಮರಾಜನಗರದಲ್ಲಿ ರೋಗಿಗಳು ಪರದಾಡುವಂತಾಗಿದೆ. ಕೇಂದ್ರ ಸರಕಾರ ಈಗಾಗಲೇ ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಪೆಟ್ರೊಲ್ ಬಂಕ್ ಸೇರಿ ಅಗತ್ಯ ಸೇವಾ ಕೇಂದ್ರಗಳಲ್ಲಿ ಹಳೇ ನೋಟು ಸ್ವೀಕರಿಸಬೇಕು ಎಂದು ತಿಳಿಸಿದೆ.

ಆದರೂ ಕೆಲವರು ರೋಗಿಗಳಿಗೆ ಹೊಸ ನೋಟು ತರುವಂತೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಆಸ್ಪತ್ರೆಯಲ್ಲಿ ವೈದ್ಯರು ನಾಮಫಲಕ ಕೂಡ ಹಾಕಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರನ್ನು ಪ್ರಶ್ನಿಸಿದರೆ ತುರ್ತುಸೇವೆಗೆ ವಿನಾಯಿತಿ ನೀಡಿದೆ ಎಂದು ಗೊತ್ತಿದ್ದರೂ ಹೀಗೆ ನಡೆದುಕೊಂಡರೆ ಮುಲಾಜು ನೋಡದೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ.[ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ 500, 1,000 ತಗೊಳ್ತಿಲ್ಲ]

Note

ಇನ್ನು ಇಲ್ಲಿರುವ ವೈದ್ಯಕೀಯ ಸಂಘದ ಅಧ್ಯಕ್ಷರ ಆಸ್ಪತ್ರೆಯಲ್ಲಿ ಹಳೇ 500, 1000 ರುಪಾಯಿ ನೋಟು ತೆಗೆದುಕೊಳ್ಳುವುದಿಲ್ಲ ಎಂಬ ನಾಮಫಲಕ ಹಾಕಿದ್ದಾರೆ ಎಂಬುದು ಸಾರ್ವಜನಿಕರ ಆರೋಪ. ಇಲ್ಲಿ ಪರಿಸ್ಥಿತಿ ಹೀಗಿದೆ ಸ್ವಾಮಿ, ಆರೋಗ್ಯ ಸಚಿವರೇ ಇಂಥವೆಲ್ಲ ನಿಮ್ಮ ಕಣ್ಣಿಗೆ ಬೀಲುವುದಿಲ್ಲವೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಉತ್ತರಿಸಬೇಕಾದವರು ಯಾರು ಹೇಳಿ?

English summary
500, 1000 notes not accepting in Chamarajanagar hospitals, alleged by people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X