ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಮಿ ಸ್ಮಾರ್ಟ್ ಫೋನ್ ಮಾರಾಟಕ್ಕೆ ತಾತ್ಕಾಲಿಕ ಒಪ್ಪಿಗೆ

By Mahesh
|
Google Oneindia Kannada News

ನವದೆಹಲಿ, ಡಿ.17: ಪೇಟೆಂಟ್ ಸಮಸ್ಯೆಯಿಂದ ಬಳಲುತ್ತಿರುವ ಚೀನಾ ಮೊಬೈಲ್ Redmi 1s ಮಾರಾಟಕ್ಕೆ ದೆಹಲಿ ಹೈಕೋರ್ಟಿನಿಂದ ತಾತ್ಕಾಲಿಕ ಒಪ್ಪಿಗೆ ಸಿಕ್ಕಿದೆ. ಈ ಕುರಿತಂತೆ ಮಧ್ಯಂತರ ಆದೇಶ ಹೊರಡಿಸಲಾಗಿದ್ದು, ಶಿಯೋಮಿ ರೆಡ್ಮಿಮಿ ಸಂಸ್ಥೆ ಮುಖ್ಯಸ್ಥ ಫೇಸ್ಬುಕ್ ನಲ್ಲಿ ಪ್ರಕಟಿಸಿದ್ದಾರೆ.

ಗುರ್ ಗಾಂವ್ ಮೂಲದ ಮೈಕ್ರೋ ಮ್ಯಾಕ್ಸ್ ಸಂಸ್ಥೆ ಮನವಿ ಮೇರೆಗೆ ಶೆನ್ ಝೆನ್ ಕಂಪನಿಯ ಒನ್ ಪ್ಲಸ್ ಮಾರಾಟಕ್ಕೆ ನಿರ್ಬಂಧ ಹೇರಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದನ್ನು ಈಗಾಗಲೇ ಓದಿರುತ್ತೀರಿ, ಇದಕ್ಕೂ ಮುನ್ನ ಮಾರುಕಟ್ಟೆ ಪ್ರವೇಶಿಸಿದ ರೆಡ್ಮಿ 1ಎಸ್ ಮೊಬೈಲ್ ಗಳ ಕಥೆ ಏನಾಗಿದೆ ಮುಂದೆ ಓದಿ...[ಮತ್ತೊಂದು ಚೀನಾ ಸ್ಮಾರ್ಟ್ ಫೋನ್ 'ಬ್ಯಾನ್']

ರೆಡ್ಮಿಮೊಬೈಲ್ ಫೋನ್ ಗಳು ಭಾರತದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿವೆ. ಇದರ ಬೆನ್ನಲೇ 4ಜಿ ಆವೃತ್ತಿಯ ರೆಡ್ಮಿ ನೋಟ್ ಗಳನ್ನು ಶಿಯೋಮಿ ಸಂಸ್ಥೆ ಹೊರತರಲು ಮುಂದಾಗಿತ್ತು. ಇದಕ್ಕಾಗಿ ಕೋರ್ಟಿಗೆ ಅರ್ಜಿ ಸಲ್ಲಿಸಿ ಮಾರಾಟಕ್ಕೆ ಅನುಮತಿ ನೀಡುವಂತೆ ಕೇಳಿಕೊಂಡಿತ್ತು. ಇದಕ್ಕೆ ಕೋರ್ಟ್ ತಾತ್ಕಾಲಿಕವಾಗಿ ಪುರಸ್ಕರಿಸಿದ್ದು ಜ.8ರ ತನಕ ಆನ್ ಲೈನ್ ಮೂಲಕ ಮೊಬೈಲ್ ಫೋನ್ ಮಾರಾಟಕ್ಕೆ ಅನುಮತಿ ಸಿಕ್ಕಿದೆ.

Xiaomi gets temporary go-ahead for phone sales in India

ಡಿ.23ರಂದು ಫ್ಲಿಫ್ ಕಾರ್ಟ್ ಮೂಲಕ ರೆಡ್ಮಿ 1ಎಸ್ ಖರೀದಿಸಬಹುದಾಗಿದೆ. 4ಜಿ ಆವೃತ್ತಿ ರೆಡ್ಮಿ ನೋಟ್ ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಸಂಸ್ಥೆ ಮುಖ್ಯಸ್ಥ ಹುಗೋ ಬರಾ ಫೇಸ್ ಬುಕ್ ನಲ್ಲಿ ಘೋಷಿಸಿದ್ದಾರೆ. ರೆಡ್ಮಿ ನೋಟ್ ಭಾರತಕ್ಕೆ ಯಾವಾಗ ಬರಲಿದೆ ಎಂಬುದರ ವಿವರ ಇನ್ನೂ ಸಿಕ್ಕಿಲ್ಲ.

ಎರಿಕ್ಸನ್ ಸಂಸ್ಥೆ ತಂತ್ರಜ್ಞಾನ ಬಳಸುತ್ತಿರುವ ರೆಡ್ಮಿ ಮೊಬೈಲ್ ಗಳು ಪೇಟೆಂಟ್ ಕಾಯ್ದೆ ಉಲ್ಲಂಘಿಸಿದ ಆರೋಪ ಎದುರಿಸುತ್ತಿದೆ. ಈ ಪ್ರಕರಣ ಇತ್ಯರ್ಥವಾಗುವ ತನಕ ಶಿಯೋಮಿ ಮೊಬೈಲ್ ಮಾರಾಟಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿತ್ತು. [ಪೇಟೆಂಟ್ ಪ್ರಾಬ್ಲಂ ಚೀನಾ ಮೊಬೈಲ್ ಸೇಲ್ ಬಂದ್]

ಇದರ ಜೊತೆಗೆ ಕ್ವಾಲ್ ಕಾಮ್(Qualcomm) ಚಿಪ್ ಸೆಟ್ ಬಳಕೆ ಲೈಸನ್ಸ್ ಬಗ್ಗೆ ಗೊಂದಲವುಂಟಾಗಿತ್ತು. ಅದರೆ, ಇದಕ್ಕೂ ಎರಿಕ್ಸನ್ ಸಂಸ್ಥೆಯ 8 ಪೇಟೆಂಟ್ ಉಲ್ಲಂಘನೆಗೂ ಸಂಬಂಧವಿಲ್ಲ ಎಂದು ಶಿಯೋಮಿ ಸಂಸ್ಥೆ ಕೋರ್ಟಿಗೆ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ಫ್ಲಿಪ್ ಕಾರ್ಟ್ ಮೂಲಕ ಭಾರತೀಯ ಗ್ರಾಹಕರಿಗೆ ಪರಿಚಯವಾದ ರೆಡ್ಮಿ 1 ಎಸ್ ಮೊಬೈಲ್ ಗಳು ಇ ಕಾಮರ್ಸ್ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. 7ನೇ ಫ್ಲಾಶ್ ಸೇಲ್ ನಲ್ಲಿ ಸುಮಾರು 90,000 ಹ್ಯಾಂಡ್ ಸೆಟ್ ಗಳನ್ನು ಕ್ಷಣಾರ್ಧದಲ್ಲಿ ಮಾರಾಟ ಮಾಡಿತ್ತು. 4.2 ಸೆಕೆಂಡುಗಳಲ್ಲಿ 40,000ಕ್ಕೂ ಅಧಿಕ ಹ್ಯಾಂಡ್ ಸೆಟ್ ಮಾರಾಟವಾಗಿ ಹೊಸ ದಾಖಲೆ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Hugo Barra announced in a Facebook post that the Redmi 1s is coming back next week and the next sale will be held on Tuesday, December 23 on Flipkart. Delhi HC court on Tuesday temporarily allowed Xiaomi Inc to sell some of its devices in the country, about a week after it had asked the Chinese company to suspend sales in the world's third largest smartphone market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X