ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q4: ವಿಪ್ರೋ ಲಾಭ ಅಷ್ಟಕಷ್ಟೆ, ಆದಾಯ ಮಾತ್ರ ಏರಿಕೆ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 20: ವಿಪ್ರೋ ಸಂಸ್ಥೆಯ ನಾಲ್ಕನೇ ತ್ರೈಮಾಸಿಕ ವರದಿ ಬುಧವಾರ ಸಂಜೆ ಪ್ರಕಟಗೊಂಡಿದೆ. ಮಾರ್ಚ್ 31, 2016ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಸಂಸ್ಥೆಯ ನಿವ್ವಳ ಲಾಭ 2,235 ಕೋಟಿ ರು ಬಂದಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 2,230 ಕೋಟಿ ರು ಬಂದಿತ್ತು. ಹಾಗಾಗಿ ಲಾಭದಲ್ಲಿ ಅಂಥ ಬೆಳವಣಿಗೆ ಕಂಡು ಬಂದಿಲ್ಲ. ಒಟ್ಟಾರೆ ಆದಾಯ ಶೇ 6.1ರಷ್ಟು ಏರಿಕೆ ಕಂಡಿದ್ದು, 13,741.7 ಕೋಟಿ ರು ಗಳಿಸಿದೆ. [ವಿಪ್ರೋದಿಂದ ಕರ್ನಾಟಕದಲ್ಲಿ ಟೆಕ್ ನೇಮಕಾತಿ ಹೆಚ್ಚಳ!]

Wipro Q4 IT services revenue rises, profit nearly flat

ಅದರಲ್ಲೂ ಐಟಿ ಸರ್ವೀಸಸ್ ಆದಾಯ ಶೇ 3.9ರಷ್ಟು ಏರಿಕೆ ಕಂಡು 12,769.7 ಕೋಟಿ ರು ಬಂದಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ 12,314.7 ಕೋಟಿ ರು ಬಂದಿತ್ತು. ಸಂಸ್ಥೆ 2,500 ಕೋಟಿ ರು ಮೌಲ್ಯ ಷೇರುಗಳನ್ನು ಮತ್ತೆ ಖರೀದಿಸುವುದಾಗಿ ಘೋಷಿಸಿದೆ.

ಈ ತ್ರೈಮಾಸಿಕ ಅವಧಿಯಲ್ಲಿ ಜರ್ಮನಿ ಐಟಿ ಕನ್ಸಲ್ಟೆನ್ಸಿ ಸಂಸ್ಥೆ ಸೆಲ್ಲೆಂಟ್ ಎಜಿ, ಯುಎಸ್ ಮೂಲದ ಎಚ್ ಪಿಎಚ್ ಹೋಲ್ಡಿಂಗ್ ಕಾರ್ಪ್, ವಿಟಿಯೋ ಗ್ರೂಪ್ ಖರೀದಿಸಿದೆ. [ವಿಪ್ರೋ ಹೊಸ ಸಿಇಒ ಆಗಿ ಅಬಿದ್ ನೀಮುಚ್ವಾಲ ನೇಮಕ]

ಐಟಿ ಸರ್ವೀಸಸ್ ನಲ್ಲಿ ಡಾಲರ್ ಆದಾಯ ಪ್ರಗತಿ ನಿರೀಕ್ಷೆ ಮುಂದಿನ 2017ರ ಆರ್ಥಿಕ ವರ್ಷಕ್ಕೆ 1,901 ಮಿಲಿಯನ್ ಯುಎಸ್ ಡಾಲರ್ ನಿಂದ 1,939 ಮಿಲಿಯನ್ ಯುಎಸ್ ಡಾಲರ್ ನಷ್ಟಿದೆ. ಸಂಸ್ಥೆಯ ಆಟ್ರಿಷನ್ ದರ ಶೇ 16.3ರಿಂದ ಶೇ 16.1ಕ್ಕೆ ಕುಸಿದಿದೆ. ದಿನದ ಅಂತ್ಯಕ್ಕೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಶೇ 2 ರಷ್ಟು ಏರಿಕೆ ಕಂಡು 601.35 ರು ನಂತೆ ಅಂತ್ಯಕಂಡಿದೆ.

English summary
Wipro Q4 has reported consolidated profit of Rs 2,235 crore in quarter ended March 2016, nearly flat compared to Rs 2,234.1 crore in preceding quarter. Revenue increased 6.1 percent to Rs 13,741.7 crore in same period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X