{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/business/why-dosa-prices-not-down-rajan-blames-it-on-tawa-100943.html" }, "headline": "ದೋಸೆ ಬೆಲೆ ಇಳಿಕೆ ಆಗಿಲ್ಲವೇಕೆ? ಆರ್ ಬಿಐ ಗರ್ವನರ್ ಉತ್ತರ ಇಲ್ಲಿದೆ", "url":"http://kannada.oneindia.com/news/business/why-dosa-prices-not-down-rajan-blames-it-on-tawa-100943.html", "image": { "@type": "ImageObject", "url": "http://kannada.oneindia.com/img/1200x60x675/2016/02/14-1455451078-raghuram-rajan.jpg", "width": "1200", "height":"675" }, "thumbnailUrl":"http://kannada.oneindia.com/img/128x50/2016/02/14-1455451078-raghuram-rajan.jpg", "datePublished": "2016-02-14 17:38:52", "dateModified": "2016-02-14T17:38:52+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Business", "description": "Why the humble Dosa -- the South Indian dish loved by all -- continues to cost high when RBI is claiming a victory over inflation? Governor Raghuram Rajan blames lack of technology upgrades from its traditional 'Tawa' preparation", "keywords": "Why Dosa prices not down? Raghuram Rajan blames it on Tawa!", "articleBody":"ಕೊಚ್ಚಿ, ಫೆ. 14: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಾರ ಭಾರತದಲ್ಲಿ ಹಣದುಬ್ಬರ ದರ ನಿಯಂತ್ರಣದಲ್ಲಿದೆ. ಆದರೆ, ದಕ್ಷಿಣ ಭಾರತದ ಜನಪ್ರಿಯ ಮಸಾಲೆ ದೋಸೆ ಬೆಲೆ ಏಕೆ ಇನ್ನೂ ತಗ್ಗಿಲ್ಲ ಎಂದು ಆರ್​ಬಿಐ ಗವರ್ನರ್ ರಘುರಾಮ್ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಅವರೇ ಉತ್ತರಿಸಿದ್ದಾರೆ ಕೂಡಾ.ದೋಸೆ ತಯಾರಿಸುವ ವ್ಯವಸ್ಥೆ ಇನ್ನೂ ಬದಲಾಗಿಲ್ಲ. ಹೊಸ ತಂತ್ರಜ್ಞಾನದ ಬಳಕೆಯಾಗುತ್ತಿಲ್ಲ. ಅದೇ ಅವರ (ತವಾ, ಹೆಂಚು)ಮೇಲೆ ಹಳೆಯ ಮಾದರಿಯಲ್ಲೇ ದೋಸೆ ಮಾಡಲಾಗುತ್ತಿದ್ದು, ತಯಾರಿಕಾ ವೆಚ್ಚ ದುಬಾರಿಯಾಗುತ್ತಿದೆ. ದೋಸೆ ಮಡುವವರು ಹೆಂಚಿನ ಮೇಲೆ ನೀರಾದ ಹಿಟ್ಟನ್ನು ಹಾಕುತ್ತಾರೆ. ನಂತರ ಅದನ್ನು ವೃತ್ತಾಕಾರಕ್ಕೆ ಎಳೆಯುತ್ತಾರೆ. ಅಲ್ಲವೇ ಎಂದರು.ಕೇಂದ್ರ ಬಜೆಟ್ ನಂತರ ಆರ್& zwnj ಬಿಐ ಹಣಕಾಸು ನೀತಿದೋಸೆ ತಯಾರು ಮಾಡುವವರಿಗೆ ಉನ್ನತ ವೇತನ ನೀಡುತ್ತಿದ್ದರೂ ಸಾಂಪ್ರದಾಯಿಕ ಕಾವಲಿಗೆಯಲ್ಲಿ ದೋಸೆ ಮಾಡುವ ತಂತ್ರಜ್ಞಾನ , ಬದಲಾಗಿಲ್ಲ, ಮೇಲ್ದರ್ಜೆಗೆ ಏರಿಲ್ಲ, ಹೀಗಾಗಿ ದೋಸೆ ಬೆಲೆ ತಗ್ಗಿಲ್ಲ ಎಂದು ರಘುರಾಮ್ ಹೇಳಿದ್ದಾರೆ.ಈಗಲೂ ದೋಸೆ ಮಾಡುವವನು ಹಿಟ್ಟನ್ನು ಕಾವಲಿಗೆಗೆ ಹಾಕುತ್ತಾನೆ, ಅದನ್ನು ಹರಡುತ್ತಾನೆ, ಅದನ್ನು ಬೇಯಿಸಿ ದೋಸೆ ತಯಾರಿಸುತ್ತಾನೆ, ಸರಿಯಷ್ಟೆ. ಇಲ್ಲಿ ತಂತ್ರಜ್ಞಾನ ಸುಧಾರಣೆಯಾಗಿಲ್ಲ. ಆದರೆ ಪ್ರತಿಸಲ ವೇತನ ಏರಿಕೆಯಾದಾಗಲೂ ದೋಸೆ ಮಾಡುವವನ ವೇತನ ಜಾಸ್ತಿಯಾಗುತ್ತಲೇ ಹೋಗುತ್ತದೆ ಎಂದು ರಾಜನ್ ವಿವರಿಸಿದರು.ಬ್ಯಾಂಕಿಂಗ್, ಕಾರ್ಖಾನೆಗಳಲ್ಲಿ ಸಾಮಾನ್ಯ ಸಿಬ್ಬಂದಿಯೂ ಈಗ ತಂತ್ರಜ್ಞಾನ ಬದಲಾವಣೆ ಪರಿಣಾಮ ಎಷ್ಟೊಂದು ಬಗೆಯ ಸೇವೆ ನೀಡುತ್ತಿದ್ದಾರೆ ನೋಡಿ ಎಂದೂ ರಾಜನ್ ಉದಾಹರಣೆ ನೀಡಿದರು.ಹಣದುಬ್ಬರ ದರ ಏರಿದಾಗ ದೋಸೆದರ ಏರಿಸುವ ಹೊಟೇಲ್& zwnj ನವರು, ಅದು ಇಳಿದಾಗ ದರ ಇಳಿಸುವುದಿಲ್ಲ. ನಾವು ಏನು ಮಾಡಬೇಕು ಎಂಬ ವಿದ್ಯಾರ್ಥಿನಿಯೊಬ್ಬರು ಕೇಳಿದ ಪ್ರಶ್ನೆಗೆ ರಾಜನ್ ಈ ರೀತಿ ಉತ್ತರಿಸಿದರು. (ಪಿಟಿಐ)" }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೋಸೆ ಬೆಲೆ ಇಳಿಕೆ ಆಗಿಲ್ಲವೇಕೆ? ಆರ್ ಬಿಐ ಗರ್ವನರ್ ಉತ್ತರ ಇಲ್ಲಿದೆ

By Mahesh
|
Google Oneindia Kannada News

ಕೊಚ್ಚಿ, ಫೆ. 14: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಾರ ಭಾರತದಲ್ಲಿ ಹಣದುಬ್ಬರ ದರ ನಿಯಂತ್ರಣದಲ್ಲಿದೆ. ಆದರೆ, ದಕ್ಷಿಣ ಭಾರತದ ಜನಪ್ರಿಯ ಮಸಾಲೆ ದೋಸೆ ಬೆಲೆ ಏಕೆ ಇನ್ನೂ ತಗ್ಗಿಲ್ಲ ಎಂದು ಆರ್​ಬಿಐ ಗವರ್ನರ್ ರಘುರಾಮ್ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಅವರೇ ಉತ್ತರಿಸಿದ್ದಾರೆ ಕೂಡಾ.

ದೋಸೆ ತಯಾರಿಸುವ ವ್ಯವಸ್ಥೆ ಇನ್ನೂ ಬದಲಾಗಿಲ್ಲ. ಹೊಸ ತಂತ್ರಜ್ಞಾನದ ಬಳಕೆಯಾಗುತ್ತಿಲ್ಲ. ಅದೇ ಅವರ (ತವಾ, ಹೆಂಚು)ಮೇಲೆ ಹಳೆಯ ಮಾದರಿಯಲ್ಲೇ ದೋಸೆ ಮಾಡಲಾಗುತ್ತಿದ್ದು, ತಯಾರಿಕಾ ವೆಚ್ಚ ದುಬಾರಿಯಾಗುತ್ತಿದೆ. ದೋಸೆ ಮಡುವವರು ಹೆಂಚಿನ ಮೇಲೆ ನೀರಾದ ಹಿಟ್ಟನ್ನು ಹಾಕುತ್ತಾರೆ. ನಂತರ ಅದನ್ನು ವೃತ್ತಾಕಾರಕ್ಕೆ ಎಳೆಯುತ್ತಾರೆ. ಅಲ್ಲವೇ ಎಂದರು.[ಕೇಂದ್ರ ಬಜೆಟ್ ನಂತರ ಆರ್‌ಬಿಐ ಹಣಕಾಸು ನೀತಿ]

Raghuram Rajan

'ದೋಸೆ ತಯಾರು ಮಾಡುವವರಿಗೆ ಉನ್ನತ ವೇತನ ನೀಡುತ್ತಿದ್ದರೂ ಸಾಂಪ್ರದಾಯಿಕ ಕಾವಲಿಗೆಯಲ್ಲಿ ದೋಸೆ ಮಾಡುವ ತಂತ್ರಜ್ಞಾನ , ಬದಲಾಗಿಲ್ಲ, ಮೇಲ್ದರ್ಜೆಗೆ ಏರಿಲ್ಲ, ಹೀಗಾಗಿ ದೋಸೆ ಬೆಲೆ ತಗ್ಗಿಲ್ಲ' ಎಂದು ರಘುರಾಮ್ ಹೇಳಿದ್ದಾರೆ.

'ಈಗಲೂ ದೋಸೆ ಮಾಡುವವನು ಹಿಟ್ಟನ್ನು ಕಾವಲಿಗೆಗೆ ಹಾಕುತ್ತಾನೆ, ಅದನ್ನು ಹರಡುತ್ತಾನೆ, ಅದನ್ನು ಬೇಯಿಸಿ ದೋಸೆ ತಯಾರಿಸುತ್ತಾನೆ, ಸರಿಯಷ್ಟೆ. ಇಲ್ಲಿ ತಂತ್ರಜ್ಞಾನ ಸುಧಾರಣೆಯಾಗಿಲ್ಲ. ಆದರೆ ಪ್ರತಿಸಲ ವೇತನ ಏರಿಕೆಯಾದಾಗಲೂ ದೋಸೆ ಮಾಡುವವನ ವೇತನ ಜಾಸ್ತಿಯಾಗುತ್ತಲೇ ಹೋಗುತ್ತದೆ' ಎಂದು ರಾಜನ್ ವಿವರಿಸಿದರು.

'ಬ್ಯಾಂಕಿಂಗ್, ಕಾರ್ಖಾನೆಗಳಲ್ಲಿ ಸಾಮಾನ್ಯ ಸಿಬ್ಬಂದಿಯೂ ಈಗ ತಂತ್ರಜ್ಞಾನ ಬದಲಾವಣೆ ಪರಿಣಾಮ ಎಷ್ಟೊಂದು ಬಗೆಯ ಸೇವೆ ನೀಡುತ್ತಿದ್ದಾರೆ ನೋಡಿ' ಎಂದೂ ರಾಜನ್ ಉದಾಹರಣೆ ನೀಡಿದರು.

ಹಣದುಬ್ಬರ ದರ ಏರಿದಾಗ ದೋಸೆದರ ಏರಿಸುವ ಹೊಟೇಲ್‌ನವರು, ಅದು ಇಳಿದಾಗ ದರ ಇಳಿಸುವುದಿಲ್ಲ. ನಾವು ಏನು ಮಾಡಬೇಕು ಎಂಬ ವಿದ್ಯಾರ್ಥಿನಿಯೊಬ್ಬರು ಕೇಳಿದ ಪ್ರಶ್ನೆಗೆ ರಾಜನ್ ಈ ರೀತಿ ಉತ್ತರಿಸಿದರು. (ಪಿಟಿಐ)

English summary
Why the humble Dosa -- the South Indian dish loved by all -- continues to cost high when RBI is claiming a victory over inflation? Governor Raghuram Rajan blames lack of technology upgrades from its traditional 'Tawa' preparation and high wages of the person making it! 'The technology for making Dosas hasn't actually changed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X