ವಾಟ್ಸಾಪಿನಿಂದ ಹಣ ವರ್ಗಾವಣೆ ಶೀಘ್ರದಲ್ಲೇ ಜಾರಿ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11: ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಪ್ ಮೂಲಕ ಹಣ ವರ್ಗಾವಣೆ ಮಾಡುವ ಸಾಧ್ಯತೆ ಇನ್ನೇನು ಸಾಕಾರಗೊಳ್ಳಲಿದೆ. ಯುಪಿಐ (ಯುನಿಫೈಡ್ ಪೇಯ್‌ಮೆಂಟ್ ಇಂಟರ್‌ಫೇಸ್) ವರ್ಗಾವಣೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಬೀಟಾ ಆವೃತ್ತಿಯಲ್ಲಿ ಪರೀಕ್ಷೆ ನಡೆಯುತ್ತಿರುವ ಮಾಹಿತಿ ಸೋರಿಕೆಯಾಗಿದೆ.

ವಾಟ್ಸಾಪ್ ತನ್ನ ಬಳಕೆದಾರರಿಗೆ ಎಂ ಬ್ಯಾಂಕಿಂಗ್ ಮಾದರಿ ಸೌಲಭ್ಯ ಒದಗಸಲು ಮೊಬೈಲ್ ಅಪ್ಲಿಕೇಷನ್ ವಿನ್ಯಾಸಗೊಳಿಸಲು ತೊಡಗಿ ಸುಮಾರು ಕಾಲ ಹಿಡಿದಿದೆ. ಆದರೆ, ಇನ್ನೂ ಕಾರ್ಯಗತವಾಗಿಲ್ಲ.

WhatsApp UPI Payments Feature Leaked Again

ವಿಚಾಟ್ ಹಾಗೂ ಹೈಕ್ ಮೆಸೆಂಜರ್‌ನಂತಹ ಇತರ ಕೆಲವು ಮೊಬೈಲ್ ಸಂದೇಶ ಅಪ್ಲಿಕೇಶನ್‌ಗಳು ಈಗಾಗಲೇ ಯುಪಿಐ ಆಧರಿಸಿದ ಪಾವತಿ ಸೇವೆ ಹೊಂದಿವೆ

ವಾಟ್ಸಾಪ್ ಮೂಲಕ ಬ್ಯಾಂಕ್‌ ಖಾತೆಯಿಂದ ಬ್ಯಾಂಕಿಗೆ ಹಣ ರವಾನಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಬ್ಲಾಗ್ ವೆಬ್‌ಸೈಟ್ ಡಬ್ಲುಎ ಬೆಟಾಲ್ ಇನ್ಫೋ ಹೇಳಿದೆ.

ಗೂಗಲ್ ಪ್ಲೇ ಬೀಟಾ ಆವೃತ್ತಿ 2.17.295ರಲ್ಲಿ ಯುಪಿಐ ಮೂಲಕ ಬ್ಯಾಂಕಿಗೆ ಹಣ ರವಾನಿಸುವ ಸೌಲಭ್ಯವಿದೆ. ಆದರೆ, ಆ್ಯಂಡ್ರಾಯ್ಡ್ ಗಾಗಿ ಅಧಿಕೃತ ವ್ಯಾಟ್ಸಪ್ ಪೇಮೆಂಟ್ ಸೆಕ್ಷನ್ ಈಗಲೂ ಈ ವ್ಯವಸ್ಥೆ ರೂಪಿಸುವಲ್ಲಿ ತೊಡಗಿಕೊಂಡಿದೆ.

ಮೊಬೈಲ್ ಬಳಸಿ ಎರಡು ಬ್ಯಾಂಕ್‌ಗಳ ಖಾತೆಗಳ ನಡುವೆ ತತ್‌ಕ್ಷಣ ಹಣ ವರ್ಗಾವಣೆ ಮಾಡುವ ಯುಪಿಐಯನ್ನು ನ್ಯಾಶನಲ್ ಕಾರ್ಪೋರೇಶನ್ ಆಫ್ ಇಂಡಿಯಾ ಆರಂಭಿಸಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದನ್ನು ನಿಯಂತ್ರಿಸುತ್ತಿದೆ.

Gas Cylinders will now be available on WhatsApp | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The WhatsApp UPI integration has been spotted in the beta version of the Android app. The UPI payment page is hidden in the WhatsApp for Android beta version 2.17.295.
Please Wait while comments are loading...