ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?

|
Google Oneindia Kannada News

ನವದೆಹಲಿ, ಜ, 14: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಕಳೆದ 5 ವರ್ಷದಲ್ಲೇ ಕಡಿಮೆ ಅಂದರೆ ಬ್ಯಾರಲ್ ಗೆ 45 ಡಾಲರ್ ಗೆ ಬಂದು ತಲುಪಿದೆ. ಒಂದು ವರ್ಷದ ಅವಧಿಯಲ್ಲಿ ಶೇ. 111ಕ್ಕಿಂತಲೂ ಅಧಿಕ ಇಳಿಕೆ ದಾಖಲಿಸಿದೆ.

ತೈಲ ಬೆಲೆ ಇನ್ನೂ ಇಳಿಕೆಯಾಗುವ ಸಾಧ್ಯತೆಯಿದ್ದು ಬ್ಯಾರಲ್ ಗೆ 40 ಡಾಲರ್ ಗಿಂತ ಕಡಿಮೆಯಾಗಲಿದೆ. ಆದರೆ ಈ ವರ್ಷದ ಕೊನೆಗೆ 70 ಡಾಲರ್ ಗೆ ತಲುಪುವ ನಿರೀಕ್ಷೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.[ಹೊಸ ವರ್ಷಕ್ಕೆ ಮತ್ತಷ್ಟು ಅಗ್ಗವಾಯ್ತು ಪೆಟ್ರೋಲ್, ಡೀಸೆಲ್]

petrol

ವೇಗವಾಗಿ ತೈಲ ಬೆಲೆ ಇಳಿಯುತ್ತಿರುವುದಕ್ಕೆ ಕಾರಣವೇನು?
ಯಾವುದೇ ವಸ್ತುವಿನ ಪೂರೈಕೆ ಹೆಚ್ಚಾದರೆ ಬೇಡಿಕೆ ಮತ್ತು ಬೆಲೆ ಕಡಿಮೆಯಾತ್ತದೆ ಎಂಬುದು ಅರ್ಥ ವ್ಯವಸ್ಥೆಯ ಮೂಲ ಅಂಶ. ಅಮೆರಿಕ ಸಂಯುಕ್ತ ಸಂಸ್ಥಾನ ಹೊಂದಿರುವ ತೈಲ ಆಸ್ತಿ ಕಳೆದ ಎರಡು ವರ್ಷದಲ್ಲಿ ದ್ವಿಗುಣವಾಗಿದೆ. ಸೌದಿ, ನೈಜೀರಿಯಾ ಮತ್ತು ಅಲ್ಜೇರಿಯನ್ ದೇಶಗಳು ಅಮೆರಿಕದ ಮಾರುಕಟ್ಟೆ ತೊರೆದು ಏಷಿಯಾದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು ಇಳಿಕೆಗೆ ಪ್ರಮುಖ ಕಾರಣ.

ಇನ್ನು ತೈಲ ಪಡೆದುಕೊಳ್ಳುತ್ತಿದ್ದ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಅತ್ಯುತ್ತಮ ಮೈಲೇಜ್ ನೀಡುವ ವಾಹನಗಳಿಗೆ ಒತ್ತು ನೀಡಿದ್ದು ಬೇಡಿಕೆಯಲ್ಲಿ ವಿಶೇಷ ಹೆಚ್ಚಳ ಕಂಡುಬಾರದಿರುವುದು ಇಳಿಕೆಗೆ ನೆರವಾಗಿದೆ.[70 ರೂ. ಗಡಿ ಬಿಟ್ಟು ಕೆಳಗಿಳಿದ ಪೆಟ್ರೋಲ್]

ನಿಜವಾದ ಲಾಭ ಯಾರಿಗೆ ?
ಗ್ಯಾಲನ್ ಗೆ ಒಂದು ಡಾಲರ್ ಗಿಂತ ಕಡಿಮೆ ಬೆಲೆಯಾಗಿರುವುದು ಪ್ರಪಂಚದ ಎಲ್ಲ ಗ್ರಾಹಕರಿಗೆ ಸಂತಸ ತಂದಿದೆ. ಏಷ್ಯಾ, ಯುರೋಪ್ ಸೇರಿದಂತೆ ತೈಲ ಖರೀದಿ ಮಾಡುವ ದೇಶಗಳ ಆರ್ಥಿಕ ವ್ಯವಸ್ಥೆಯಲ್ಲಿ ಉಳಿತಾಯ ಸಾಧ್ಯವಾಗಿದೆ.

ಆರ್ಥಿಕ ನಷ್ಟ ಯಾರಿಗೆ?
ತೈಲ ಉತ್ಪಾದಕ ರಾಷ್ಟ್ರಗಳಾದ ವೆನೆಜುಲಾ, ಇರಾನ್, ನೈಜೀರಿಯಾ, ಈಕ್ವಿಡಾರ್, ಬ್ರೇಜಿಲ್ ಮತ್ತು ರಷ್ಯಾ ಈ ಬೆಳವಣಿಗೆಯಿಂದ ಅಪಾಯ ಎದುರಿಸುವಂತಾಗಿದೆ. ಪರ್ಷಿಯನ್ ದೇಶಗಳು ಮತ್ತು ಈಜಿಪ್ಟ್ ಸಹ ನಷ್ಟ ಅನುಭವಿಸಬೇಕಾಗಿದೆ.

ಅಮೆರಿಕದ ಅಲಸ್ಕಾ, ಟೆಕ್ಸಾಸ್ ನಂಥ ರಾಜ್ಯಗಳು ನಷ್ಟ ಅನುಭವಿಸಬೇಕಾಗಿದ್ದು ಚಿಕ್ಕ ರಾಷ್ಟ್ರಗಳು ಆರ್ಥಿಕ ಮುಗ್ಗಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ. ಕೆಲ ಚಿಕ್ಕ ಪೆಟ್ರೋಲಿಯಂ ಕಂಪನಿಗಳು ಸಾಲ ತೀರಿಸಲಾಗದೆ ಬಾಗಿಲು ಹಾಕಬಹುದು.

ಒಪಿಎಸ್ ಸಿ ಮೇಲೆ ಪರಿಣಾಮ ಏನು?
ತೈಲ ಬೆಲೆ ಪ್ರತಿದಿನ ಇಳಿಯುತ್ತಲೇ ಇದೆ. ಇದನ್ನು ನಿಯಂತ್ರಣಕ್ಕೆ ತರಲು ಪ್ಎಟ್ರೋಲಿಯಂ ಉತ್ಪನ್ನ ದೇಶಗಳ ರಫ್ತು ಒಕ್ಕೂಟ (ಒಪಿಎಸ್ ಸಿ) ಉತ್ಪಾದನೆಗೆ ನಿಯಂತ್ರಣ ಹೇರಲು ಮುಂದಾಗಿದೆ. ಇರಾನ್ ನಂಥ ದೇಶಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದರೆ ಸೌದಿ ಅರೆಬೀಯಾ ಮತ್ತು ಕೆಲ ಅರಬ್ ರಾಷ್ಟ್ರಗಳು ನಿಯಂತ್ರಣ ಹೇರಬಾರದು ಎಂದು ಒತ್ತಾಯಿಸಿವೆ. ಇತ್ತ ಇರಾಕ್ ಅತಿ ಹೆಚ್ಚು ತೈಲ ತೆಗೆಯುವುದರಲ್ಲಿ ನಿರತವಾಗಿದೆ.

ನಾವು ಪೂರೈಕೆಗೆ ಕಡಿವಾಣ ಹಾಕಿ, ಉತ್ಪಾದನೆ ನಿಲ್ಲಿಸಿದರೆ ದರ ಹೆಚ್ಚಾಗುತ್ತದೆ ಆದರೆ ಇದರ ಲಾಭ ಇತರ ದೇಶಗಳಿಗಾಗುತ್ತದೆ. ಈಗೇನು ಗಮನಾರ್ಹ ನಷ್ಟವಾಗುತ್ತಿಲ್ಲ ಎಂಬುದು ಎಂದು ಸೌದಿ ರಾಷ್ಟ್ರದ ಅಧಿಕಾರಿಗಳ ಮಾತು.

ದರ ಸಮರದ ಹಿಂದೆ ಪಿತೂರಿ ಅಡಗಿದೆಯೇ?
ಸೌದಿ ದೇಶಗಳು ಇರಾನ್ ಮತ್ತು ರಷ್ಯಾ ವಿರುದ್ಧ ಹಗೆ ಸಾಧಿಸಲು ತೈಲ ಬೆಲೆಯನ್ನು ಬಳಸಿಕೊಳ್ಳುತ್ತಿವೆಯೇ? ಅಥವಾ ಹಿಂದಿನಿಂದ ಅಮೆರಿಕ ಇವಕ್ಕೆ ಬೆಂಬಲ ನೀಡುತ್ತಿದೆಯೇ? ಎಂಬ ಪ್ರಶ್ನೆಗಳು ಮೂಡುತ್ತವೆ. 1980 ರ ತೈಲ ಬೆಲೆ ಇಳಿಕೆಯೇ ನಂತರ ಸೊವಿಯತ್ ಒಕ್ಕೂಟ ಒಡೆಯಲು ಕಾರಣವಾಯಿತು ಎಂಬುದನ್ನು ಮರೆಯುವಂತಿಲ್ಲ.

ತೈಲ ಬೆಲೆ ಯಾವಾಗ ಏರಬಹುದು?
ಸದ್ಯಕ್ಕಂತೂ ದಿಢೀರ್ ಎಂದು ತೈಲ ಬೆಲೆ ಹೆಚ್ಚಾಗುವ ಯಾವ ನಿರೀಕ್ಷೆಯಿಲ್ಲ. ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿದ್ದು ತೈಲ ಉತ್ಪಾದಕ ರಾಷ್ಟ್ರಗಳು ಪೈಪೋಟಿಗೆ ಬಿದ್ದು ಹಂಚಿಕೆ ಮಾಡುತ್ತಿವೆ. ಈ ವರ್ಷದ ಎರಡನೇ ಭಾಗದಲ್ಲಿ ಅಂದರೆ ಜೂನ್ ತಿಂಗಳ ನಂತರ ಕೊಂಚ ಬದಲಾವಣೆಯಾಗುವ ಸಾಧ್ಯತೆಯಿದೆ.

English summary
The price of oil has plunged more than 55 percent to under $50 a barrel since June. That is the lowest price since the depths of the 2009 recession. Oil analysts predict that the price could fall below $40 before beginning to rebound.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X