ವಿಸ್ತಾರ ಆಫರ್ : 799 ರು ಗಳಿಗೆ ವಿಮಾನದಲ್ಲಿ ಹಾರಾಟ ನಡೆಸಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 07 : ಟಾಟಾ ವಿಸ್ತಾರ ವಿಮಾನಯಾನ ಸಂಸ್ಥೆ 48 ಗಂಟೆಗಳ ಫ್ರೀಡಮ್ ಟು ಫೈ ಎಂಬ ಆಫರ್ ನೀಡುತ್ತಿದೆ. ಎಕಾನಮಿ ಕ್ಲಾಸ್ ನಲ್ಲಿ ಎಲ್ಲಾ ವೆಚ್ಚಗಳು ಸೇರಿ ರೂ .799ಕ್ಕೆ ಆರಂಭಿಕ ಟಿಕೆಟ್ ದರಗಳು ಪ್ರಯಾಣಿಕರಿಗೆ ಸಿಗಲಿದೆ. ಪ್ರೀಮಿಯಂ ಇಕಾನಮಿಯಲ್ಲಿ ರೂ. 2,099ರಿಂದ ಆರಂಭವಾಗಲಿದೆ.

ಈ ವಿಸ್ತಾರ ಆಫರ್ ಯೋಜನೆಯಲ್ಲಿ ಟಿಕೆಟ್ ಮುಂಗಡ ಕಾದಿರಿಸುವಿಕೆ ಎರಡು ದಿನಗಳು ಅಂದರೆ ಆಗಸ್ಟ್ 8 ಹಾಗೂ 9ಕ್ಕೆ ಮಾಡಬಹುದು ಹಾಗೂ ಬುಕ್ಕಿಂಗ್ ಮಾಡಿದವರು ಆಗಸ್ಟ್ 23, 2017 ಹಾಗೂ ಏಪ್ರಿಲ್ 19, 2018 ನಡುವೆ ಪ್ರಯಾಣಿಸಬಹುದು.

ಲಭ್ಯ ಮಾರ್ಗಗಳು: ಗೋವಾ, ಪೋರ್ಟ್ ಬ್ಲೇರ್, ಲೇಹ್, ಜಮ್ಮು, ಶ್ರೀನಗರ, ಕೊಚ್ಚಿ, ಗುವಹಾಟಿ, ಅಮೃತಸರ್, ಭುವನೇಶ್ವರ್ ಹಾಗೂ ಮೆಟ್ರೋ ನಗರಗಳಾದ ದಿಲ್ಲಿ, ಕೊಲ್ಕತ್ತಾ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿಗೆ ಪ್ರಯಾಣಿಸಬಹುದು.

Vistara announces fares starting at Rs 799 under sale offer

ದೆಹಲಿ-ಅಮೃತಸರ್ ನಡುವೆ ಪ್ರಯಾಣಕ್ಕೆ 1199 ರು ಆಗಿದ್ದರೆ, ದೆಹಲಿ-ಚಂಡೀಗಢ ಮಧ್ಯೆ ಪ್ರಯಾಣಕ್ಕೆ 1,299 ರು ದರ ನಿಗದಿ ಪಡಿಸಲಾಗಿದೆ.

ದೆಹಲಿ-ಶ್ರೀನಗರ, ದೆಹಲಿ-ಅಹ್ಮದಾಬಾದ್ (1,499 ರು), ದೆಹಲಿ-ಮುಂಬೈ, ದೆಹಲಿ-ಪುಣೆ (2,099 ರು), ದೆಹಲಿ-ಕೊಲ್ಕತ್ತಾ (2,199 ರು) ಮತ್ತು ದೆಹಲಿ -ಗೋವಾ ನಡುವಿನ ಪ್ರಯಾಣಕ್ಕೆ 1,499 ರು ನಿಗದಿ ಪಡಿಸಲಾಗಿದೆ.

ಟಾಟಾ ಸಮೂಹವು ಆರು ದಶಕಗಳ ನಂತರ ವಿಮಾನಯಾನ ಕ್ಷೇತ್ರಕ್ಕೆ 2015ರಲ್ಲಿ ಹೊಸ ಉತ್ಸಾಹದೊಂದಿಗೆ ಪುನಃ ಕಾಲಿಟ್ಟಿತು. ಟಾಟಾ ಮತ್ತು ಸಿಂಗಪುರ್ ಏರ್‌ಲೈನ್ಸ್ ಜಂಟಿ ಮಾಲೀಕತ್ವದ ವಿಸ್ತಾರಾ ವಿಮಾನಯಾನ ಸಂಸ್ಥೆ ನವದೆಹಲಿಯಿಂದ ಗೋವಾ, ಮುಂಬಯಿ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಚಂಡೀಗಢ, ಶ್ರೀನಗರ, ಜಮ್ಮು ಮತ್ತು ಪಾಟ್ನಾ ನಗರಗಳಿಗೆ ವಿಮಾನಯಾನ ಸೇವೆ ನೀಡುತ್ತಿದೆ.(ಪಿಟಿಐ)

Government Of India Planned To Bring The New Rules For Airline Passengers

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vistara, the Tata-SIA run joint venture airline, on Monday announced heavily discounted all-inclusive fares, starting as low as Rs799 for economy class travel and Rs2,099 for premium economy under a limited period scheme.
Please Wait while comments are loading...