ಬಜೆಟ್ 2017: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕಾಚಾರ

By:
Subscribe to Oneindia Kannada

ನವದೆಹಲಿ, ಫೆಬ್ರವರಿ 01: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2017-18ನೇ ಸಾಲಿನ ಪ್ರಧಾನ ಆಯವ್ಯಯ ಪತ್ರವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ (ಫೆಬ್ರವರಿ 01) ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಜೇಟ್ಲಿ ಹೇಳಿದ ಆದಾಯ ತೆರಿಗೆ ಲೆಕ್ಕಾಚಾರದ ಸಂಫೂರ್ಣ ವಿವರ ಇಲ್ಲಿದೆ.[ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]

* ರಾಜಕೀಯ ಪಕ್ಷಗಳು ಚೆಕ್ ಹಾಗೂ ಡಿಜಿಟಲ್ ಮಾದರಿಯಲ್ಲಿ ಮಾತ್ರ ದೇಣಿಗೆ ಪಡೆಯಬಹುದು.
* ರಾಜಕೀಯ ಪಕ್ಷಗಳು ನಿಗದಿತ ಅವಧಿಯಲ್ಲೇ ಐಟಿ ರಿಟರ್ನ್ ಫೈಲ್ ಮಾಡಬೇಕು.
* 20 ಸಾವಿರ ರು ದೇಣಿಗೆ ನೀಡುವವರ ಪೂರ್ಣ ವಿವರವನ್ನು ನೀಡಬೇಕು[ರಾಜಕೀಯ ಪಕ್ಷಗಳ ದೇಣಿಗೆ 2 ಸಾವಿರ ರು.ಗಳಿಗೆ ಇಳಿಕೆ]

* ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಜಾರಿಗೊಳಿಸಲಿದೆ.[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]

* ಸಂಘಟಿತ ಕ್ಷೇತ್ರದಲ್ಲಿ 1.7 ಕೋಟಿ ರು ಮಾತ್ರ ಅದಾಯ ತೆರಿಗೆ ಪಾವತಿಸುತ್ತಿದ್ದಾರೆ. 56 ಲಕ್ಷ ಜನ ಸಂಬಳದಾರರಾಗಿದ್ದು, ತೆರಿಗೆ ಪಾವತಿಸುತ್ತಿದ್ದಾರೆ.[ಒಂದಷ್ಟು ಹೊಸ ಘೋಷಣೆ, ಹಳೆ ಯೋಜನೆಗಳ ಮುಂದುವರಿಕೆ; ಓಡದ ಜೇಟ್ಲಿ ರೈಲು]

Income Tax Rates For Financial Year (FY) 2017-18 And Assessment Year (AY) 2016-17

ಹೊಸ ಉತ್ಪಾದನಾ ಘಟಕಗಳಿಗೆ ಅರುಣ್ ಜೇಟ್ಲಿ ಅಭಯ ನೀಡಿದ್ದಾರೆ. ಶೇ. 25 ರಷ್ಟು ಕಾರ್ಪೋರೇಟ್ ಟ್ಯಾಕ್ಸ್ ಕಡಿತ ಮಾಡಲಾಗಿದೆ. ಇದನ್ನು ಉದ್ಯೋಗವಕಾಶಗಳ ಸೃಷ್ಟಿಗೆ ಬಳಸಿಕೊಳ್ಳುವಂತೆ ತಿಳಿಸಿದೆ. 5 ಕೋಟಿ ರು ಹಣದ ವ್ಯವಹಾರ ನಡೆಸುವ ಕಂಪನಿಗಳು ಶೇ. 1 ರಷ್ಟು ಕಡಿಮೆ ತೆರಿಗೆ ನೀಡಿದರೆ ಸಾಕು. ಶೇ. 30 ರಿಂದ 29ಕ್ಕೆ ಅದನ್ನು ಇಳಿಕೆ ಮಾಡಲಾಗಿದೆ.[ಬಜೆಟ್ 2017ರ ಪ್ರಮುಖ ಘೋಷಣೆಗಳು]

* 50 ಕೋಟಿ ರು ಆದಾಯ ಹೊಂದಿರುವ ಸಣ್ಣ ಕಂಪನಿ ಗಳಿಗೆ ಶೇ 25 ರಷ್ಟು ಮಾತ್ರ [ಅಪನಗದೀಕರಣ ಪರಿಣಾಮ ಜಿಡಿಪಿ ಪಾರದರ್ಶಕ, ದೈತ್ಯ: ಜೇಟ್ಲಿ]

* ಕಡಿಮೆ ಆದಾಯ ಗಳಿಸುವ ಉದ್ಯೋಗಿಗಳ ವೈಯಕ್ತಿಕ ತೆರಿಗೆ ಹಿಂಪಡೆಯುವ (rebate) ಮಿತಿಯಲ್ಲಿ ಬದಲಾವಣೆ ಕಂಡು ಬಂದಿದೆ. ವಾರ್ಷಿಕವಾಗಿ 5 ಲಕ್ಷ ಆದಾಯ(Taxable Income) ಹೊಂದಿರುವವರಿಗೆ ಈ ಮೊತ್ತ 2,000 ರು ನಿಂದ 5,000 ರು ಗೆ ಏರಿಸಲಾಗಿದೆ.[ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?]

ಅಪನಗದಿಕರಣ ಆದಾಯ ಏರಿಕೆಯಾಗಿದೆ

English summary
Finance Minister Arun Jaitley presented Union Budget 2016 on February 01, 2017. Here are the details of simplified tax regime
Please Wait while comments are loading...