ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ನಿರೀಕ್ಷೆಗಳ ಕನಸಿನಲ್ಲಿ ಬಜೆಟ್ 2015

By Rajendra
|
Google Oneindia Kannada News

ಕಳೆದ ಒಂದುವರೆ ವರ್ಷದಿಂದ ರಿಯಲ್ ಎಸ್ಟೇಟ್ ವ್ಯಾಪಾರವು ಕ್ರಮೇಣ ಹೆಚ್ಚಳವನ್ನು ಕಾಣುತ್ತಿದೆ. ಆರ್ಥಿಕತೆಯ ತ್ವರಿತ ಆರಂಭಕ್ಕೆ, ಹೆಚ್ಚು ಅನುಕೂಲಕರ ಕೆಲಸದ ಸ್ಥಿತಿಯನ್ನು ಸೃಷ್ಟಿಸುವ ಅಗತ್ಯವಿದೆ. ಸರ್ಕಾರವು ಉದ್ದೇಶಿಸಬೇಕಾದ ಮುಖ್ಯವಾದ ವಿಚಾರಗಳೆಂದರೆ.

* ಜಿಎಸ್ ಟಿಗೆ ಚಾಲನೆ- ಇದರ ಪರಿಣಾಮವಾಗಿ ರಾಜ್ಯ ಸರ್ಕಾರದಿಂದ ಮುಂದ್ರಾಂಕ ಶುಲ್ಕದ ಕಡ್ಡಾಯ ಇಳಿಕೆ ಮಾಡಬೇಕಾಗುತ್ತದೆ.
* ಸ್ವಾಧೀನ ಹಾಗೂ ನಿಯಂತ್ರಣದ ಮೇಲಿನ ಅನೇಕ ಮಸೂದೆಗಳನ್ನು ಚರ್ಚಿಸುವ ಸರ್ಕಾರ, ಇದು ಎಲ್ಲರಿಗೂ ಅನುಕೂಲವಾಗುವಂತೆ ಖಾತ್ರಿಗೊಳಿಸಬೇಕು.
* ಕಾರ್ಮಿಕ ಕಾನೂನುಗಳ ಸರಳೀಕರಣ ಹಾಗೂ ಅಪ್ರಸ್ತುತ ಕಾನೂನನ್ನು ತೊಡೆದು ಹಾಕುವುದು.
* ಉದ್ಯಮವು ಸೇವಾ ತೆರಿಗೆ ಮುಕ್ತವಾಗಿರಬೇಕು.
* ಅಭಿವರ್ಧಕರು ಹಾಗೂ ಖರೀದಿದಾರರಿಗೆ ಇಬ್ಬರಿಗೂ ಕೈಗೆಟುಕುವ ದರದಲ್ಲಿ ಗೃಹ ತೆರಿಗೆ ವಿನಾಯಿತಿ.
* ಉತ್ತಮ ಅಭಿವೃದ್ಧಿಯನ್ನು ಸಾಧ್ಯವಾಗಿಸಲು ರಾಷ್ಟ್ರೀಯ ಕಟ್ಟಡ ನಿಯಮಾವಳಿಯ ಸೂತ್ರೀಕರಣ.
* ಉತ್ತಮ ಹಣಕಾಸು ಲಭ್ಯತೆಗಾಗಿ ದರ ಕಡಿತವನ್ನು ನೀಡುವುದು.
* ರಿಯಲ್ ಎಸ್ಟೇಟ್ ಉದ್ಯಮಕ್ಕೆ ಆದ್ಯತಾ ವಲಯದ ಸ್ಥಿತಿಯನ್ನು ನೀಡುವುದು.
* ಪರಿಸರ ಪರವಾನಗಿಗಳನ್ನು ತ್ವರಿತಗೊಳಿಸುವುದು.

Union Budget 2015 Expectations

ವಿಶಾಲ್ ಮಿರ್ಚಂದಾನಿ, ಸಿಇಓ, ರಿಟೈಲ್ ಹಾಗೂ ಕಮರ್ಷಿಯಲ್, ಬ್ರಿಗೇಡ್ ಗ್ರೂಪ್ ಅವರಿಂದ ಉಲ್ಲೇಖ:

ಈ ಹಿಂದೆ ಘೋಷಿಸಲಾಗಿರುವ ಮೂಲಸೌಕರ್ಯ ಯೋಜನೆಗಳು ಮುಂದಿನ ಹಣಕಾಸು ವರ್ಷದಲ್ಲಿ ಯೋಜನೆಯ ಪ್ರಕಾರ ಅನುಷ್ಠಾನಗೊಳ್ಳುವ ಖಾತ್ರಿಯು ನಮಗೆ ಬೇಕಾಗಿದೆ. ಭಾರತದಲ್ಲಿನ ಒಂದು ಕಳಕಳಿಯೆಂದರೆ, ಯೋಜನೆಗಳು ಮತ್ತು ಪ್ರಸ್ತಾಪಗಳ ಅನುಷ್ಠಾನ ಮತ್ತು ಜಾರಿಯೇ ಆಗಿದೆ.

ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿ ಪಡಿಸುವತ್ತ ನಾವು ಗಮನಹರಿಸಬೇಕು, ಮತ್ತು ಬಜೆಟ್‍ನಲ್ಲಿ ಈ ಸಂಬಂಧ ಸೂಕ್ತ ನೀಲನಕಾಶೆ ಇರಬೇಕು.

ಈ ಬಜೆಟ್ ನಲ್ಲಿ ಜಿಎಸ್ ಟಿ ಸೇರ್ಪಡೆಗೊಂಡಿರುತ್ತದೆ ಎಂದು ನಾವು ನಿರೀಕ್ಷೆ ಹೊಂದಿದ್ದೇವೆ.
ಸರ್ಕಾರವು ವೇತನ ಹಾಗೂ ಮಧ್ಯಮ ವರ್ಗದವರಿಗಾಗಿ ಆದಾಯ ತೆರಿಗೆಯನ್ನು ತಗ್ಗಿಸುವತ್ತ ಗಮನಹರಿಸುತ್ತದೆ ಎಂದು ನಾವು ಭರವಸೆ ಇಟ್ಟುಕೊಂಡಿದ್ದೇವೆ.

ನಿರ್ದಿಷ್ಟವಾಗಿ ರಿಟೈಲ್ ಕ್ಷೇತ್ರಕ್ಕೆ, ಸೇವಾ ತೆರಿಗೆಯಿಂದ ಹೊಡೆತ ಬಿದ್ದಿದೆ. ರಿಟೈಲ್ ಕ್ಷೇತ್ರಕ್ಕೆ ನೆರವಾಗುವ ಹಾಗೂ ಮುಂದಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ, ಕಮರ್ಷಿಯಲ್ ಆಸ್ತಿಗಳ ಲೀಸ್ ಅಥವಾ ಬಾಡಿಗೆಯ ಮೇಲೆ ವಿಧಿಸಲಾಗುತ್ತಿರುವ ಸೇವಾ ತೆರಿಗೆಯ ಬಗ್ಗೆ ಮರುಚಿಂತನೆ ನಡೆಸಬೇಕಾಗಿದೆ. ಹೊರೆಯನ್ನು ಇಳಿಸಿದರೆ, ರಿಟೈಲರ್‍ಗಳ ವ್ಯಾಪ್ತಿಯ ಅವಕಾಶ ಹೆಚ್ಚುತ್ತದೆ ಹಾಗೂ ಅವುಗಳ ವಿಸ್ತರಣಾ ಸಾಮರ್ಥ್ಯ ವರ್ಧಿಸುತ್ತದೆ.

Union Budget 2015 Expectations

ಶಾಪಿಂಗ್ ಸೆಂಟರ್ ಗಳನ್ನು ಮೂಲಸೌಕರ್ಯ ಕ್ಷೇತ್ರದಡಿ ತರಬೇಕಾದ ಅಗತ್ಯವಿದೆ. ಶಾಪಿಂಗ್ ಸೆಂಟರ್‍ಗಳಿಗೆ ಕ್ವಾಸಿ ಮೂಲಸೌಕರ್ಯ ಸ್ಥಾನಮಾನ ಹಾಗೂ ತೆರಿಗೆ ಅನುಕೂಲ ಕಲ್ಪಿಸಿಕೊಡುವಂತೆ ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ.

ಬನಿ ಆನಂದ್, ಸಂಸ್ಥಾಪಕ ನಿರ್ದೇಶಕರು, ಹೇರ್ ಲೈನ್ ಇಂಟರ್ ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ಮಾತು.

ಎಲ್ಲಾ ಉದ್ಯಮಗಳು ಈ ವರ್ಷದಿಂದ ಚಾಲನೆಗೊಳ್ಳಲಿರುವ ಜಿಎಸ್ ಟಿಯ ಅನುಕೂಲವನ್ನು ಪಡೆಯಲಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸೇವಾ ಕ್ಷೇತ್ರವು ಕೆಲವೊಂದು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಇವುಗಳು ಈಡೇರಿದರೆ ಈ ಉದ್ಯಮವು ಮುಂದೆ ಬರಲಿದೆ.

*
ಸೇವಾ ತೆರಿಗೆಯನ್ನು ಸುಮಾರು ಶೇ.6ಕ್ಕೆ ಇಳಿಸುವುದು.
* ಆರೋಗ್ಯ ಸೇವೆ ಹಾಗೂ ಸೌಂದರ್ಯ ಸೇವಾ ಕ್ಷೇತ್ರದ ಸಂಶೋಧನೆಗಳಿಗಾಗಿ ಸಬ್ಸಿಡಿಗಳು/ ಅನುದಾನ. ಇಂತಹ ಉಪಕ್ರಮವು ಈ ಕ್ಷೇತ್ರಗಳಲ್ಲಿ ಹೆಚ್ಚು ಸಂಶೋಧನೆಗೆ ಹೆಚ್ಚು ಅವಕಾಶಗಳನ್ನು ತೆರೆಯಲಿದೆ ಹಾಗೂ ಇದು ಆರೋಗ್ಯ ಸೇವಾ ಕ್ಷೇತ್ರದಲ್ಲಿನ ಭಾರಿ ಪ್ರಗತಿಗೆ ಕಾರಣವಾಗಲಿದೆ.
* ಸೌಂದರ್ಯಸಾಧನಗಳ ಆಮದು ಕುರಿತ ಕಾನೂನಿನಲ್ಲಿ ವಿನಾಯ್ತಿಗಳನ್ನು ನಾವು ಎದುರು ನೋಡುತ್ತಿದ್ದೇವೆ, ಅದಲ್ಲದೆ, ಪರವಾನಗಿ ಕಾನೂನುಗಳನ್ನು ಸಡಿಲಗೊಳಿಸಿದೆ ಸೌಂದರ್ಯ ಸಾಧನಗಳ ಆಮದು ಸುಲಭವಾಗುತ್ತದೆ. (ಒನ್ಇಂಡಿಯಾ ಕನ್ನಡ ಬಿಜಿನೆಸ್)

English summary
Union Budget 2015 Expectations. The last one and a half years has seen a gradual increase in the real estate market. To kickstart the economy, there is a need to create a more favourable working condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X