ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆದಾರರ ಗಮನಕ್ಕೆ ಈ 2 ಸುದ್ದಿಗಳು

|
Google Oneindia Kannada News

ನವದೆಹಲಿ, ಮೇ 05: ವಾರ್ಷಿಕ ವರಮಾನ 50 ಲಕ್ಷ ರು. ಗೂ ಅಧಿಕವಿರುವ ವ್ಯಕ್ತಿಗಳು ತಾವು ಹೊಂದಿರುವ ಆಸ್ತಿಯ ಎಲ್ಲ ಮೂಲಗಳನ್ನು ಬಹಿರಂಗ ಮಾಡಬೇಕಾಗುತ್ತದೆ.

ಭೂಮಿ, ಚಿನ್ನ, ನಿವೇಶನ ಈ ಬಗೆಯ ಯಾವುದೇ ಆಸ್ತಿ ಹೊಂದಿದ್ದರೆ ಅದನ್ನು ಸರ್ಕಾರಕ್ಕೆ ತಿಳಿಸಬೇಕಾಗುತ್ತದೆ. ತೆರಿಗೆ ಕಟ್ಟುವುದರೊಂದಿಗೆ ಹೊಂದಿರುವ ಬೆಳ್ಳಿ, ಪ್ಲಾಟಿನಂ, ಅಮೂಲ್ಯ ಹರಳುಗಳ ವಿವರವನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಈ ಬಗ್ಗೆ ನಿರ್ದೇಶನ ನೀಡಿರುವ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಆಸ್ತಿ ವಿವರದ ಮಾಹಿತಿ ನೀಡಲು ಕೇಳಿಕೊಂಡಿದೆ.[ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆಗೆ 6 ಉತ್ತಮ ವೆಬ್ ತಾಣಗಳು]

tax

ತೆರಿಗೆ ಬಾಕಿದಾರರ ಗಮನಕ್ಕೆ:
ತೆರಿಗೆ ಬಾಕಿ ಉಳಿಸಿಕೊಂಡು ದಂಡ ಕಟ್ಟುವ ಸ್ಥಿತಿ ನಿರ್ಮಾಣವಾಗಿದ್ದು ಅದು 5- 10 ಸಾವಿರ ರೂ ಒಳಗೆ ಇದ್ದರೆ ನಿಮಗೆ ವಿನಾಯಿತಿ ಸಿಕ್ಕರೂ ಸಿಗಬಹುದು.[ಆನ್ ಲೈನ್ ನಲ್ಲಿ ಆದಾಯ ತೆರಿಗೆ ತುಂಬಲು ಸರಳ ವಿಧಾನ]

ಬಾಕಿ ಉಳಿಸಿಕೊಂಡವರ ಮೇಲೆ ಒತ್ತಡ ಹೇರಿ ದಂಡ ವಸೂಲಿ ಮಾಡಲು ವಿನಿಯೋಗಿಸುವ ಹಣ ಮತ್ತು ಸಮಯಕ್ಕೆ ವಸೂಲಿಯಾದ ದಂಡದ ಮೊತ್ತ ಸರಿಹೋಗುತ್ತದೆ ಎಂದು ಮನಗಂಡಿರುವ ತೆರಿಗೆ ಇಲಾಖೆ ವಿನಾಯಿತಿ ನೀಡಲು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲು ಮುಂದಾಗಿದೆ.

English summary
People with annual income of over Rs 50 lakh will have to disclose the acquisition cost of all the assets like land, building and jewellery in the Income Tax return forms for assessment year 2016-17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X